ಚಿಕ್ಕಬಳ್ಳಾಪುರ: ದಿನದಲ್ಲಿ ಪೊಲೀಸ್ ಡ್ಯೂಟಿ, ರಾತ್ರಿಯಾಗ್ತಿದ್ದಂತೆ ಕಳ್ಳ ಕಳ್ಳವಾಗಿ ಕಳ್ಳತನ ಮಾಡ್ತಿದ್ದ ಮುಖ್ಯಪೇದೆ ಅರೆಸ್ಟ್​

| Updated By: ಸಾಧು ಶ್ರೀನಾಥ್​

Updated on: Nov 06, 2023 | 1:09 PM

ಸಾಬಣ್ಣ ಎಂಬ ಎಂ.ಓ.ಬಿ. ಅಪರಾಧಿಯೊಬ್ಬನನ್ನು ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಸಿದ್ದರಾಮರೆಡ್ಡಿ. ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರೇ ಈತನ ಟಾರ್ಗೆಟ್. ನಗದು ಹಣ ಮತ್ತು ಚಿನ್ನಾಭರಣಗಳನ್ನ ಮಾತ್ರ ಈ ಪೊಲೀಸ್​ ಖದೀಮ ಜೋಡಿ ಕದಿಯುತ್ತಿತ್ತು.

ಚಿಕ್ಕಬಳ್ಳಾಪುರ: ದಿನದಲ್ಲಿ ಪೊಲೀಸ್ ಡ್ಯೂಟಿ, ರಾತ್ರಿಯಾಗ್ತಿದ್ದಂತೆ ಕಳ್ಳ ಕಳ್ಳವಾಗಿ ಕಳ್ಳತನ ಮಾಡ್ತಿದ್ದ ಮುಖ್ಯಪೇದೆ ಅರೆಸ್ಟ್​
ಪೊಲೀಸ್ ಡ್ಯೂಟಿ ಜೊತೆಗೆ ಕಳ್ಳತನವನ್ನೂ ಮಾಡ್ತಿದ್ದ ಮುಖ್ಯಪೇದೆ ಅರೆಸ್ಟ್​
Follow us on

ಚಿಕ್ಕಬಳ್ಳಾಪುರ, ನವೆಂಬರ್​ 6: ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಪೊಲೀಸ್ ಸಿಬ್ಬಂದಿಯನ್ನು (Head constable) ಬಂಧಿಸಲಾಗಿದೆ (arrest). ಬೆಳಗ್ಗೆ ವೇಳೆ ಪೊಲೀಸ್ ಡ್ಯೂಟಿ ಮಾಡೋದು, ರಾತ್ರಿಯಾಗುತ್ತಿದ್ದಂತೆ ಕಳ್ಳಕಳ್ಳವಾಗಿ ಕಳ್ಳತನದ ಡ್ಯೂಟಿ ಮಾಡುತ್ತಿದ್ದ ಮುಖ್ಯಪೇದೆಯನ್ನು ಬಂಧಿಸಿ, ಜೈಲಿಗೆ ಅಟ್ಟಲಾಗಿದೆ. ಪೊಲೀಸಪ್ಪನೇ ಕಳ್ಳತನಕ್ಕೆ ಇಳಿಯೋದೂ ಅಲ್ಲದೆ; ಎಂಓಬಿ ಅಪರಾಧಿಯೊಬ್ಬನನ್ನು ಕೂಡ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಈ ಘನಂಧಾರಿ ಪೊಲೀಸಪ್ಪ ಎಂಬುದು ಮತ್ತಷ್ಟು ಬೇಸರದ ಸಂಗತಿ. ಚಿಕ್ಕಬಳ್ಳಾಪುರ (Chikkaballapur) ರೈಲ್ವೆ ಹೊರ ಠಾಣೆ ಮುಖ್ಯಪೇದೆ ಸಿದ್ದರಾಮರೆಡ್ಡಿ ಬಂಧಿತ ಆರೋಪಿ.

ಸಾಬಣ್ಣ ಎಂಬ ಎಂ.ಓ.ಬಿ. ಅಪರಾಧಿಯೊಬ್ಬನನ್ನು ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಸಿದ್ದರಾಮರೆಡ್ಡಿ. ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರೇ ಈತನ ಟಾರ್ಗೆಟ್. ನಗದು ಹಣ ಮತ್ತು ಚಿನ್ನಾಭರಣಗಳನ್ನ ಮಾತ್ರ ಈ ಪೊಲೀಸ್​ ಖದೀಮ ಜೋಡಿ ಕದಿಯುತ್ತಿತ್ತು.

ಇದನ್ನೂ ಓದಿ: ರಾಯಚೂರು: ತಾಯಿಯ ನೋವು ನೋಡಲಾಗದೆ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಂದ ಮಗ

ಮಧ್ಯರಾತ್ರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೇ ಇವರ ಟಾರ್ಗೆಟ್ ಆಗಿದ್ದರು. ದಂಡು ರೈಲು ನಿಲ್ದಾಣ ಬೈಯಪ್ಪನಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರು ತಮ್ಮ ಕೈಚಳಕ ತೋರಿದ್ದಾರೆ. ಆರೋಪಿ ಸಿದ್ದರಾಮರೆಡ್ಡಿಯನ್ನು ಇಲಾಖೆ ಸೇವೆಯಿಂದ ಅಮಾನತು ಮಾಡಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿನ್ನಾಭರಣಗಳ ಜಪ್ತಿಗೆ ರೈಲ್ವೆ ಪೊಲೀಸರು ಹರಸಾಹಸ :

ಆರೋಪಿ ಸಿದ್ದರಾಮರೆಡ್ಡಿಯನ್ನು ಬಂದಿಸಿರುವ ರೈಲ್ವೆ ಪೊಲೀಸರು ಕದ್ದ ಚಿನ್ನಾಭರಣಗಳ ಜಪ್ತಿಗೆ ಮುಂದಾಗಿದ್ದಾರೆ.  ಆರೋಪಿಯ ಜೊತೆಗೂಡಿ ಚಿಕ್ಕಬಳ್ಳಾಫುರ ನಗರದಲ್ಲಿರುವ ಬಂಗಾರದಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಆರೋಪಿ ಸಿದ್ದರಾಮರೆಡ್ಡಿ, ಚಿನ್ನಭರಣಗಳನ್ನು ಯಾವ ಅಂಗಡಿಗೆ ಮಾರಾಟ ಮಾಡಿರುವೆ ಎಂಬುದರ ಬಗ್ಗೆ ಸ್ಪಷ್ಟೀಕರಣ ಮಾಡುತ್ತಿಲ್ಲ. 160 ಗ್ರಾಮ್ ಚಿನ್ನಾಭರಣಗಳ ಜಪ್ತಿಗೆ ರೈಲ್ವೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಆರೋಪಿ ಸಿದ್ದರಾಮರೆಡ್ಡಿ ಬೇರೆ ಬೇರೆ ಅಂಗಡಿಗಳನ್ನು ತೊರಿಸುತ್ತಿದ್ದಾನೆ. ಇನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರ ಜೊತೆ ಚಿನ್ನದಂಗಡಿ ವ್ಯಾಪಾರಸ್ಥರು ವಾಗ್ವಾದಕ್ಕಿಳಿದಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:00 am, Mon, 6 November 23