ರಾಯಚೂರು: ತಾಯಿಯ ನೋವು ನೋಡಲಾಗದೆ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಂದ ಮಗ
ತಂದೆ ಬಂಡಿ ತಿಮ್ಮಣ್ಣ ಪ್ರತಿ ದಿನ ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಕೋಪಗೊಂಡ ಮಗ, ತಂದೆಯನ್ನೇ ಕೊಲೆ ಮಾಡಿ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ತಂದೆ ಕೊಲೆಗೈದು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ. ಮನೆಯ ಹೊರಗಡೆ ತಂದೆಯನ್ನು ಕೊಂದು ಬಳಿಕ ಮೃತದೇಹವನ್ನು ಮನೆಯೊಳಗೆ ಎಳೆದೊಯ್ದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದ.
ರಾಯಚೂರು, ನ.06: ತಲೆ ಮೇಲೆ ಕಲ್ಲು ಎತ್ತಿಹಾಕಿ ಮಗನೇ ತಂದೆಯನ್ನು ಕೊಲೆ (Murder) ಮಾಡಿದ ಭೀಕರ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ದೇವರಭೂಪೂರಿನಲ್ಲಿ ನಡೆದಿದೆ. ತಂದೆ ಬಂಡಿ ತಿಮ್ಮಣ್ಣ(55)ನನ್ನೇ ಪುತ್ರ ಶೀಲವಂತ ಕೊಲೆಗೈದಿದ್ದಾನೆ (Son Killed Father). ತಂದೆ ಬಂಡಿ ತಿಮ್ಮಣ್ಣ ಪ್ರತಿ ದಿನ ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಕೋಪಗೊಂಡ ಮಗ, ತಂದೆಯನ್ನೇ ಕೊಲೆ ಮಾಡಿ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಶೀಲವಂತ, ತಂದೆಯಿಂದ ತಾಯಿಗೆ ಸಿಗುತ್ತಿದ್ದ ಕಿರುಕುಳ ನೋಡಲಾಗದೆ ಕಲ್ಲು ಎತ್ತಿಹಾಕಿ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮೊದಲು ತಂದೆ ಕೊಲೆಗೈದು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ. ಮನೆಯ ಹೊರಗಡೆ ತಂದೆಯನ್ನು ಕೊಂದು ಬಳಿಕ ಮೃತದೇಹವನ್ನು ಮನೆಯೊಳಗೆ ಎಳೆದೊಯ್ದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದ. ಮೃತದೇಹ ತೀವ್ರ ರಕ್ತಸಿಕ್ತವಾದ್ದರಿಂದ ಅನಿವಾರ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕಾಯಿತು. ನಿತ್ಯ ಕುಡಿದು ಬಂದು ತಾಯಿಗೆ ಹಾಗೂ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ತಾಯಿಯ ನೋವು ಸಹಿಸಲಾಗದೇ ತಂದೆಯನ್ನು ಕೊಂದಿದ್ದಾಗಿ ಆರೋಪಿ ಶೀಲವಂತ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಭರ್ಜರಿ ಬೇಟೆ; ಜೂಜು ಅಡ್ಡೆ ಮೇಲೆ ದಾಳಿ, 70 ಜನರ ಬಂಧನ
ಸಿಡಿಲು ಬಡಿದು ಎರಡು ಹಸುಗಳು ಸಾವು
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ. ಚನ್ನಶೆಟ್ಟಿ ಎಂಬುವರಿಗೆ ಸೇರಿದ ಎರಡು ಹಸುಗಳು ಸಾವನ್ನಪ್ಪಿದ್ದು ಅದೃಷ್ಟವಶಾತ್ ಸಮೀಪದಲ್ಲೇ ಇದ್ದ ರೈತ ಚನ್ನಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈತನ ಚನ್ನಶೆಟ್ಟಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಮೀನಿನಲ್ಲಿ ಹಸುಗಳನ್ನ ಮೇಯಿಸುತ್ತಿದ್ದ ಸಂದರ್ಭದಲ್ಲಿ ಮಳೆ ಬಂದಿದೆ. ಆಗ ಹಸುಗಳನ್ನು ಹುಣಸೆ ಮರದ ಕೆಳಗಡೆ ಕಟ್ಟಲಾಗಿತ್ತು. ಈ ವೇಳೆ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ. ಮೃತ ಹಸುಗಳ ಪೈಕಿ ಒಂದು ಹಸು ಗರ್ಭಿಣಿಯಾಗಿತ್ತು. ಹಸುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಈಗ ಸಂಕಷ್ಟ ಎದುರಿಸುತ್ತಿದೆ.
ಕೋಳಿ ವಾಹನ ಪಲ್ಟಿಯಾಗಿ 600 ಕೋಳಿಗಳ ಸಾವು
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕು ಉದ್ಬೂರು ಕಾಲೋನಿ ಬಳಿ ಕೋಳಿ ವಾಹನ ಪಲ್ಟಿಯಾಗಿದ್ದು ವಾಹನದ ಕೆಳಗೆ ಸಿಲುಕಿ 600ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಇನ್ನು ಸತ್ತ ಕೋಳಿಗಳನ್ನು ತೆಗೆದುಕೊಳ್ಳಲು ಜನ ಮುಗಿ ಬಿದ್ದ ಘಟನೆ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆ ಅಪಘಾತ ಸಂಭವಿಸಿದೆ. ಸೇರಿದ ಕೋಳಿಗಳು ಮೃತಪಟ್ಟಿದರಿಂದ ರಾಮಕೃಷ್ಣ ನಾಯ್ಡು ಕೋಳಿ ಫಾರಂಗೆ ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ. ಹೆಚ್ ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:47 am, Mon, 6 November 23