ಚಿಕ್ಕಬಳ್ಳಾಪುರ KRIDL ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಳಪೆ ಕಾಮಗಾರಿ, ಕಾಮಗಾರಿಯೇ ಮಾಡದೆ ಬಿಲ್ ಎತ್ತಿ ಭ್ರಷ್ಟಾಚಾರ ಮಾಡಿರುವ ಆರೋಪ

Sidlaghatta KRIDL Scam: ಕೆಆರ್‌ಐಡಿಎಲ್ ಇಂಜನಿಯರ್‌ಗಳ ಜೊತೆ ಜಿ.ಪಂ. ಶಾಮೀಲಾಗಿರುವ ಆರೋಪ -ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನಲ್ಲಿ ಕಾಮಗಾರಿ ನಡೆಸದೇ ಅರ್ಧಂಬರ್ಧ ಕಾಮಗಾರಿ, ಪುನರಾವರ್ತಿತ ಕಾಮಗಾರಿಗಳಿಗೆ ಪೂರಾ ಅನುದಾನವನ್ನು ಹೇಗೆ ನೀಡಲಾಗಿದೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಈ ಕುರಿತು ಸಮಗ್ರ ತನಿಖೆ ನಡೆಸಿದರೆ ಅಧಿಕಾರಿಗಳ ಅಕ್ರಮ ಅವ್ಯವಹಾರ ಬಯಲಾಗಲಿದೆ.

ಚಿಕ್ಕಬಳ್ಳಾಪುರ KRIDL ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಳಪೆ ಕಾಮಗಾರಿ, ಕಾಮಗಾರಿಯೇ ಮಾಡದೆ ಬಿಲ್ ಎತ್ತಿ ಭ್ರಷ್ಟಾಚಾರ ಮಾಡಿರುವ ಆರೋಪ
ಚಿಕ್ಕಬಳ್ಳಾಪುರದ ಕೆ.ಆರ್.ಐ.ಡಿ.ಎಲ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Aug 31, 2023 | 5:04 PM

ಚಿಕ್ಕಬಳ್ಳಾಪುರ, ಆಗಸ್ಟ್​ 31: ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಸರ್ಕಾರಕ್ಕೆ ಹಣಕಾಸು ಅನುದಾನ ಉಳಿಸಿಕೊಡಲು ಪ್ರಾರಂಭಿಸಿರುವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ Karnataka Rural Infrastructure Development Limited -KRIDL) ಮೂಲಭೂತ ಸೌಕರ್ಯ ಹಾಗೂ ಕಾಮಗಾರಿ ಕಲ್ಪಿಸುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಗಲು ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ (Sidlaghatta) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 50:54ರ ಯೋಜನೆಯಡಿಯಲ್ಲಿ ಸುಮಾರು 20 ಕೋಟಿ ರೂಪಾಯಿಗಳ ವಿಶೇಷ ಅನುದಾನದ ಕಾಮಗಾರಿಗಳು ಬಹುತೇಕ ಕಳಪೆ, ಕಾಮಗಾರಿ ಮಾಡದೇ ಬಿಲ್ ಡ್ರಾ (Bills) , ನಿಗಧಿತ ಸ್ಥಳದಲ್ಲಿ ಕಾಮಗಾರಿ ಮಾಡದೇ ಸರ್ಕಾರದ ಬೊಕ್ಕಸಕ್ಕೆ ಮೋಸ (Corruption) ಮಾಡಿರುವುದು ಬಯಲಾಗಿದೆ (Allegation).

1. ಶಿಡ್ಲಘಟ್ಟ ತಾಲ್ಲೂಕು, ಕೈವಾರ, ಏನಿಗದಲೆ ರಸ್ತೆಯಿಂದ ತೋಬಾಯಿ ಕಡೆಗೆ ಹೋಗುವ ರಸ್ತೆಯನ್ನು ಸಿ.ಸಿ. (ಸಿಮೆಂಟ್ ಕಾಂಕ್ರೀಟ್) ರಸ್ತೆಯನ್ನಾಗಿ ಮಾಡಲು 50.00 ಲಕ್ಷ ರೂಪಾಯಿಗಳ ಬಿಲ್ ಡ್ರಾ ಮಾಡಲಾಗಿದ್ದು, ನಿಗದಿತ ಸ್ಥಳದಲ್ಲಿ ಕಾಮಗಾರಿ ಮಾಡಿರುವುದಿಲ್ಲ. ಇದೇ ಕಾಮಗಾರಿಗೆ ಬೇರೆ ಕಾಮಗಾರಿಯ ಪೋಟೋಗಳನ್ನು ಅಂಟಿಸಿ ವಂಚನೆ ಮಾಡಲಾಗಿದೆ. ಉದಾ: ಶಿಡ್ಲಘಟ್ಟ ತಾಲ್ಲೂಕು, ಗಂಗಾಪುರ ಗ್ರಾಮದ ರಸ್ತೆ ಅಭಿವೃದ್ಧಿಯ ಕಾಮಗಾರಿ ಪೋಟೋ, ಗಂಗಾಪುರದಿಂದ ರೂಪಾರ್ಲಹಳ್ಳಿ ರಸ್ತೆ ಕಾಮಗಾರಿಯ ಪೋಟೋ, ಕುಂದಲಗುರ್ಕಿ-ಬಿ.ಬಿ.ಮುಖ್ಯರಸ್ತೆ ರೂಪಾರ್ಲಹಳ್ಳಿವರೆಗೆ ಮಾಡಿರುವ ಕಾಮಗಾರಿಯ ಹಳೇ ಪೋಟೋಗಳನ್ನು ಮೇಲಿನ ಕಾಮಗಾರಿಗೆ ತೋರಿಸಿ ಅಕ್ರಮವಾಗಿ ರೂ. 50.00 ಲಕ್ಷ ಬಿಲ್ ಮಾಡಲಾಗಿದೆ. ನಮ್ಮ ಟಿವಿ 9 ಪ್ರತಿನಿಧಿ ಭೀಮಪ್ಪ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದಾಗ ಕೆಆರ್‌ಐಡಿಎಲ್ ಅಧಿಕಾರಿಗಳ ಅಕ್ರಮ ಬಯಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 50:54ರ ಯೋಜನೆಯಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು, ಅಮರಾವತಿ ಗ್ರಾಮದಿಂದ ಕರಿಯನಪುರ ಗ್ರಾಮದ ಕಡೆಗೆ ಇರುವ ರಸ್ತೆ ಅಭಿವೃದ್ಧಿಗೆಂದು ರೂ. 50.00 ಲಕ್ಷ ಅನುದಾನ ನಿಗಧಿಯಾಗಿದ್ದು, ಅದರಲ್ಲಿ ಯಾವುದೇ ಕಾಮಗಾರಿಯನ್ನು ಮಾಡದೇ ರೂ. 16.00 ಲಕ್ಷ ಹಣವನ್ನು ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 50:54ರ ಯೋಜನೆಯಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು, ಗೊಲ್ಲಹಳ್ಳಿ ಕ್ರಾಸ್‌ನಿಂದ ರಾಚೇನಹಳ್ಳಿ ಗ್ರಾಮದ ಕಡೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆಂದು ರೂ. 50.00 ಲಕ್ಷ ಬಿಲ್ ಡ್ರಾ ಮಾಡಿದ್ದಾರೆ. ಆದರೆ ಕಾಮಗಾರಿ ಮಾಡಿರುವ ಯಾವುದೇ ಕುರುಹುಗಳು ಕಂಡುಬಂದಿಲ್ಲ. ಈ ಕಾಮಗಾರಿಗೆ ಬಿಲ್ ಡ್ರಾ ಮಾಡಲು ಹಳೇ ಕಾಮಗಾರಿಯೊಂದರ ಪೋಟೋಗಳನ್ನು ಬಳಸಿಕೊಳ್ಳಲಾಗಿದೆ. ಉದಾ : ಶಿಡ್ಲಘಟ್ಟ ತಾಲ್ಲೂಕು, ಗೊಲ್ಲಹಳ್ಳಿ ಮುಖ್ಯರಸ್ತೆಯಿಂದ ಸಿದ್ದಾಪುರ ಗೇಟ್‌ವರೆಗೂ ರಸ್ತೆ ಅಭಿವೃದಿ ಕಾಮಗಾರಿ ಈ ಮೊದಲೇ ಆಗಿತ್ತು. (2018-19ರ 5054ರ ಕಾಮಗಾರಿ) ಆದರೆ ಇದೇ ಪೋಟೊಗಳನ್ನು ಬಳಸಿಕೊಂಡು ಮೋಸದ ಕೃತ್ಯವೆಸಗಿರುವ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 50:54ರ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೊಂಡಿದ್ದ ಚಿಕ್ಕಬಳ್ಳಾಪುರದ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ಪ್ರವೀಣ್ ಶ್ರೀಹರಿ, ಸಹಾಯಕ ಅಭಿಯಂತರ ಅಮೂಲ್ಯ ಸೇರಿದಂತೆ ಅಧಿಕಾರಿಗಳು ಕಾಮಗಾರಿಯನ್ನು ಮಾಡದೇ ಬಿಲ್ ಡ್ರಾ ಮಾಡಿರುವ ಆರೋಪ ಕೇಳಿಬಂದಿದೆ.

ಅಕ್ರಮದ ವಾಸನೆ ಹಿಡಿದಿರುವ ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಕಳಪೆ, ಕಾಮಗಾರಿ ಮಾಡದೇ ಬಿಲ್ ಡ್ರಾ ಮಾಡಿರುವುದು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪುನರಾವರ್ತನೆ ಮಾಡಿರುವ ಬಗ್ಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಇದರಿಂದ ಸ್ಥಳ ತನಿಖೆ ನಡೆಸಲು ದಿನಾಂಕ ನಿಗಧಿಪಡಿಸಿ ತಿಳಿಸುವಂತೆ ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಒಂದಲ್ಲ, ಎರಡಲ್ಲ, 15ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಅಕ್ರಮ : ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್, ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜನಿಯರ್‌ಗಳು ಅಕ್ರಮ, ಅವ್ಯವಹಾರ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಹಾಗೂ ದಾಖಲೆಗಳು ಲಭ್ಯವಾಗಿದ್ದು, 15ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಅವ್ಯವಹಾರ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಇನ್ನು 13ಕ್ಕೂ ಹೆಚ್ಚು ಕಾಮಗಾರಿಗಳ ಸ್ಥಳ ವೀಕ್ಷಣೆಯ ವರದಿಯನ್ನು ಟಿವಿ-9 ಸರಣಿಯಂತೆ ಪ್ರಕಟಿಸಲು ನಿರ್ಧರಿಸಿದೆ.

ಕೆಆರ್‌ಐಡಿಎಲ್ ಇಂಜನಿಯರ್‌ಗಳ ಜೊತೆ ಜಿ.ಪಂ. ಶಾಮೀಲಾಗಿರುವ ಆರೋಪ : ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್, ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 50:54ರ ಯೋಜನೆಯಡಿಯಲ್ಲಿ ಮಂಜೂರಾದ ಹಣವನ್ನು ಕೆಆರ್‌ಐಡಿಎಲ್‌ಗೆ ವಹಿಸುವುದು ಹಾಗೂ ಕಾಮಗಾರಿಯ ಆಡಳಿತಾತ್ಮಕ ಅನುಮೋದನೆ ನೀಡುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ವಿಭಾಗಗಳ ಪಾತ್ರ ಮಹತ್ವದ್ದಾಗಿದೆ. ಕಾಮಗಾರಿ ನಡೆಸದೇ ಅರ್ಧಂಬರ್ಧ ಕಾಮಗಾರಿ, ಪುನರಾವರ್ತಿತ ಕಾಮಗಾರಿಗಳಿಗೆ ಪೂರಾ ಅನುದಾನವನ್ನು ಹೇಗೆ ನೀಡಲಾಗಿದೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ ಈ ಕುರಿತು ಸಮಗ್ರ ತನಿಖೆ ನಡೆಸಿದರೆ ಅಧಿಕಾರಿಗಳ ಅಕ್ರಮ ಅವ್ಯವಹಾರ ಬಯಲಾಗಲಿದೆ.

ಚಿಕ್ಕಬಳ್ಳಾಪುರ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್