ಚಿಕ್ಕಬಳ್ಳಾಪುರ, ಏ.28: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ(Chikkaballapur Lok Sabha Constituency) ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 19,81,347 ಮತದಾರರಿದ್ದಾರೆ. ಆದರೆ, ಈ ಬಾರಿ 15,25,199 ಜನ ಮಾತ್ರ ಮತ ಚಲಾಯಿಸಿದ್ದಾರೆ. ಅದರಲ್ಲಿ 766151 ಮಂದಿ ಪುರುಷರು ಹಾಗೂ 758952 ಮಂದಿ ಮಹಿಳೆಯರು ಸೇರಿದಂತೆ 96 ಜನ ಇತರರು ಮತ ಚಲಾಯಿಸಿದ್ದಾರೆ. ಕಳೆದ ಭಾರಿಯಷ್ಟೆ ಶೇಕಡವಾರು 76.98 ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ಈ(Dr K Sudhakar), ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ(Raksha Ramaiah) ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮತಯಂತ್ರಗಳನ್ನು ಚಿಕ್ಕಬಳ್ಳಾಪುರ ನಗರ ಹೊರಹೊಲಯದ ನಾಗಾರ್ಜುನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭದ್ರವಾಗಿ ಇಡಲಾಗಿದೆ.
ಆದ್ರೆ, ಈಗ ಮತದಾರರ ಚಿತ್ತ ಯಾರ ಕಡೆ ಇದೆ ಯಾರು ಗೆಲ್ಲುತ್ತಾರೆ, ಯ್ಯಾಕೆ ಗೆಲ್ಲುತ್ತಾರೆ, ಯಾರು ಏನು ಕೊಟ್ಟಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿದೆ. ಇನ್ನು ಬಿಜೆಪಿಯಿಂದ ಮಾಜಿ ಮಂತ್ರಿ ಡಾ.ಕೆ ಸುಧಾಕರ್, ಕಾಂಗ್ರೆಸ್ನಿಂದ ಶ್ರಿಮಂತ ರಕ್ಷಾ ರಾಮಯ್ಯ ಸ್ಪರ್ಧೆಯಿಂದ ಚಿಕ್ಕಬಳ್ಳಾಪುರ ಪ್ರತಿಷ್ಟೆಯ ಕಣವಾಗಿತ್ತು. ಕ್ಷೇತ್ರದಲ್ಲಿ ಎಸ್ಸಿ- ಎಸ್ಟಿ , ಒಕ್ಕಲಿಗ, ಕುರುಬ, ಬಲಜಿಗ ಮತಗಳೇ ನಿರ್ಣಯಕವಾಗಿದ್ದು, ಮತದಾರರು ಮೋದಿ ಗ್ಯಾರಂಟಿಗೆ ಜೈ ಅಂದಿದ್ದಾರಾ? ಇಲ್ಲ ಸಿದ್ದರಾಮಯ್ಯ ಗ್ಯಾರಂಟಿಗಳಿಗೆ ಕೈ ಹಿಡಿದಿದ್ದಾರಾ? ಎನ್ನುವ ಚರ್ಚೆ ಜೋರಾಗಿದೆ. ಆದ್ರೆ, ಮತದಾರರ ನಡೆ ತುಂಬಾ ನಿಗೂಢವಾಗಿದ್ದು, ಯಾರ ಊಹೆಗೂ ಎಟುಕದಂತಾಗಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ಆಪ್ತನ ಮನೆ ಮೇಲೆ ಐಟಿ ದಾಳಿ, ಕೋಟ್ಯಾಂತರ ರೂ. ಹಣ ಪತ್ತೆ
ಇಬ್ಬರು ಪ್ರಬಲ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು, ಮತಯಂತ್ರದಲ್ಲಿ ಭದ್ರವಾಗಿದೆ. ಆದ್ರೆ, ಯಾರು ಗೆಲ್ಲುತ್ತಾರೆ, ಹೇಗೆ ಗೆಲ್ಲುತ್ತಾರೆ ಎಂಬ ಮತದಾನೋತ್ತರ ಚರ್ಚೆಗಳು ಜೋರಾಗಿದ್ದು, ಅಂತಿಮವಾಗಿ ಮತದಾರ ಪ್ರಭು ಯಾರಿಗೆ ಆಶೀರ್ವಾದ ಮಾಡಿದ್ದಾರೆ ಎನ್ನುವುದು ಫಲಿತಾಂಶದ ನಂತರವಷ್ಟೆ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ