ಚಿಕ್ಕಬಳ್ಳಾಪುರ: ಮಳೆ, ಬೆಳೆ ಇಲ್ಲದೇ ದುಬಾರಿಯಾದ ಅವರೇಕಾಯಿ, ಕಡಲೇಕಾಯಿ, ಗೆಣಸು

| Updated By: Ganapathi Sharma

Updated on: Jan 13, 2024 | 5:38 PM

ರೈತರಂತೂ ಸಕಾಲಕ್ಕೆ ಮಳೆ, ಬೆಳೆ ಇಲ್ಲದೇ ಜಮೀನಿನಲ್ಲಿ ಹಸಿರು ನೋಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂ-ತಾಯಿಗೆ ಸಿರಿಇಲ್ಲದ ಮೇಲೆ ಹಬ್ಬ ಮಾಡುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಮಳೆ, ಬೆಳೆ ಇಲ್ಲದೇ ದುಬಾರಿಯಾದ ಅವರೇಕಾಯಿ, ಕಡಲೇಕಾಯಿ, ಗೆಣಸು
ಚಿಕ್ಕಬಳ್ಳಾಪುರ: ಮಳೆ, ಬೆಳೆ ಇಲ್ಲದೇ ದುಬಾರಿಯಾದ ಅವರೇಕಾಯಿ, ಕಡಲೇಕಾಯಿ, ಗೆಣಸು
Follow us on

ಚಿಕ್ಕಬಳ್ಳಾಪುರ, ಜನವರಿ 13: ಸಂಕ್ರಾಂತಿ (Makar Sankranti) ಎಂದರೆ ರೈತರಿಗೆ ಸುಗ್ಗಿ-ಹುಗ್ಗಿಯ ಹಬ್ಬ. ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿತ್ತು. ಆದರೆ ಈ ವರ್ಷ ತೀವ್ರ ಬರಗಾಲ ಹಿನ್ನಲೆ ಸಂಕ್ರಾಂತಿ ಮಾಯವಾಗಿದೆ. ಮತ್ತೊಂದೆಡೆ ಅವರೇಕಾಯಿ, ಕಡಲೇಕಾಯಿ, ಗೆಣಸು ದುಬಾರಿಯಾಗಿದೆ. ಖರೀದಿ ಮಾಡಲಾಗದೇ ಜನ ಹಬ್ಬದ ಸಂದರ್ಭದಲ್ಲೇ ಸಂಕಷ್ಟಕ್ಕೀಡಾಗಿದ್ದಾರೆ.

ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಇಲ್ಲದೇ ಸಂಕ್ರಾಂತಿ ಊಹಿಸಿಕೊಳ್ಳುವುದು ಕಷ್ಟ. ಸಂಕ್ರಾಂತಿಯ ಸುಗ್ಗಿಗೆ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಬೇಕೇಬೇಕು. ಅವರೇಕಾಯಿ, ಕಡಲೇಕಾಯಿ, ಗೆಣಸನ್ನು ಬೇಯಿಸಿ, ಅದರ ಜೊತೆ ಎಳ್ಳು-ಬೆಲ್ಲ ಸೇರಿಸಿ ಪರಸ್ಪರ ಹಂಚಿ ಶುಭಾಶಯ ಕೋರುವುದು ವಾಡಿಕೆ. ಆದರೆ ಈ ಬಾರಿ ರಾಜ್ಯಾದ್ಯಂತ ತೀವ್ರ ಬರಗಾಲ ಹಿನ್ನಲೆ ಮಳೆಯಿಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಷ್ಟು ಅವರೇಕಾಯಿ, ಕಡಲೇಕಾಯಿ, ಗೆಣಸು ಬೆಳೆ ಬಂದಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಬೆಳೆದಿರುವ ಅವರೇಕಾಯಿ, ಕಡಲೇಕಾಯಿ, ಗೆಣಸು ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಇದ್ರಿಂದ ಜಿ ಅವರೇಕಾಯಿಗೆ 80 ರೂಪಾಯಿ, ಕೆಜಿ ಕಡಲೇಕಾಯಿಗೆ 100 ರೂಪಾಯಿ, ಕೆಜಿ ಗೆಣಸು 60 ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಚಿಕ್ಕಬಳ್ಳಾಪುರದ ವ್ಯಾಪಾರಿ ಪ್ರದೀಪ್ ತಿಳಿಸಿದ್ದಾರೆ.

ರೈತರಿಗಿಲ್ಲ ಸಂತಸ

ರೈತರಂತೂ ಸಕಾಲಕ್ಕೆ ಮಳೆ, ಬೆಳೆ ಇಲ್ಲದೇ ಜಮೀನಿನಲ್ಲಿ ಹಸಿರು ನೋಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂ-ತಾಯಿಗೆ ಸಿರಿಇಲ್ಲದ ಮೇಲೆ ಹಬ್ಬ ಮಾಡುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿಂತಾಮಣಿ: ಕೈವಾರದ ಬೆಟ್ಟದ ಮೇಲೆ ಶ್ರೀರಾಮನ ಹೆಜ್ಜೆ ಗುರುತು, ವಿಸ್ಮಯಕ್ಕೆ ಕಾರಣವಾಗಿದೆ ಲಕ್ಷ್ಮಣ ತೀರ್ಥ!

ದುಬಾರಿ ಬೆಲೆ ಕೇಳಿ ದಂಗಾದ ಗ್ರಾಹಕರು

ಪೇಟೆಯಲ್ಲಿ ಸರಕು ನಿರೀಕ್ಷೆಯಷ್ಟು ಇಲ್ಲ, ಇದ್ರಿಂದ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬಿನ ಬೆಲೆ ಕೇಳಿ ಚಿಕ್ಕಬಳ್ಳಾಪುರದ ಗ್ರಾಹಕರು ದಂಗಾಗಿದ್ದಾರೆ. ರಾಜ್ಯಾದ್ಯಂತ ಬರ ಆವರಿಸಿರುವ ಹಿನ್ನಲೆ ರಾಜ್ಯದಲ್ಲಿ ಸಂಕ್ರಾಂತಿಯ ಸುಗ್ಗಿ ಇಲ್ಲದಂತಾಗಿದೆ. ರೈತರಂತು ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. ಹೊರರಾಜ್ಯದಿಂದ ಬರುವ ಸರಕು ಸಾಮಾನು ಖರೀದಿಸಲಾಗದೇ ಜನರು ಬರಕ್ಕೆ ಶಾಪ ಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ