ಚಿಕ್ಕಬಳ್ಳಾಪುರ ನಗರಸಭೆಯ 6 ಸದಸ್ಯರು ಅನರ್ಹ: ಸೇಡು ತೀರಿಸಿಕೊಂಡ ಪ್ರದೀಪ್ ಈಶ್ವರ್!

| Updated By: ರಮೇಶ್ ಬಿ. ಜವಳಗೇರಾ

Updated on: Mar 25, 2025 | 8:26 PM

ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಸುಧಾಕರ್ ನಡುವೆ ಪ್ರತಿಷ್ಠೆಯಾಗಿದ್ದ ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮುಗಿದು ಹೋಗಿದೆ. ಸುಧಾಕರ್​ ಬೆಂಬಲಿತರೇ ಅಧ್ಯಕ್ಷ-ಉಧ್ಯಾಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಚುನಾವಣೆ ವೇಳೆ ನಾನಾ ನೀನಾ ಸವಾಲಿನಲ್ಲಿ ಮುಖಭಂಗ ಅನುವಿಸಿದ್ದ ಶಾಸಕ ಪ್ರದೀಪ್ ಈಶ್ವರ್​ ತಮ್ಮ ಸೇಡನ್ನು ಬೇರೆ ರೀತಿಯಲ್ಲಿ ತೀರಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆಯ 6 ಸದಸ್ಯರು ಅನರ್ಹ: ಸೇಡು ತೀರಿಸಿಕೊಂಡ ಪ್ರದೀಪ್ ಈಶ್ವರ್!
Chikkaballapur Muncipal
Follow us on

ಚಿಕ್ಕಬಳ್ಳಾಪುರ, (ಮಾರ್ಚ್ 25): ಚಿಕ್ಕಬಳ್ಳಾಪುರ ನಗರಸಭೆಯ (chikkaballapur muncipal council) 6 ಮಂದಿ ಕಾಂಗ್ರೆಸ್ ಸದಸ್ಯರು ಅನರ್ಹಗೊಂಡಿದ್ದಾರೆ. ಅಧ್ಯಕ್ಷ-ಉಪಾದ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದ ಕಾಂಗ್ರೆಸ್​​ನ ಆರು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲದ ಆದೇಶ ಹೊರಡಿಸಿದೆ. ಈ ಮೂಲಕ ಶಾಸಕ ಪ್ರದೀಪ್ ಈಶ್ವರ್(Pradeep Eshwar), ಬಿಜೆಪಿ ಸಂಸದ ಸುಧಾಕರ್​​ (K Sudhakar) ವಿರುದ್ಧ​​ ಸೇಡು ತೀರಿಸಿಕೊಂಡಿದ್ದಾರೆ. ಪ್ರದೀಪ್ ಈಶ್ವರ್ ಹಾಗೂ ಸುಧಾಕರ್ ನಡುವೆ ಪ್ರತಿಷ್ಠೆಯಾಗಿದ್ದ ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮುಗಿದು ಹೋಗಿದೆ. ಸುಧಾಕರ್​ ಬೆಂಬಲಿತರೇ ಅಧ್ಯಕ್ಷ-ಉಧ್ಯಾಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನವರೇ ಅಡ್ಡಮತದಾನ ಮಾಡುವ ಮೂಲಕ ಸುಧಾಕರ್ ಬೆಂಬಲಿತರೇ ಅಧ್ಯಕ್ಷ-ಉಪಾದ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಇದೀಗ ಅಡ್ಡಮತದಾನ ಮಾಡಿದವರನ್ನು ಅನರ್ಹಗೊಳ್ಳುವಂತೆ ಮಾಡುವಲ್ಲಿ ಪ್ರದೀಪ್ ಈಶ್ವರ್ ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 12 , 2024. ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಕೆ ಸುಧಾಕರ್ ಇಬ್ಬರು ಸಹ ಚಿಕ್ಕಬಳ್ಳಾಪುರ ನಗರಸಭೆಯ ಗದ್ದುಗೆ ಹಿಡಿಯಬೇಕು, ತಮ್ಮದೇ ಬೆಂಬಲಿಗರು ಅಧ್ಯಕ್ಷ ಉಪಾಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದು ಜಿದ್ದಾಜಿದ್ದಿಗೆ ಬಿದ್ದಿದ್ದರು. ಕೊನೆಗೆ ಕಾಂಗ್ರೆಸ್​​ನ 06 ಜನ ಸದಸ್ಯರೇ ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡಿ ಸಂಸದ ಸುಧಾಕರ್ ಬೆಂಬಲಿಗರ ಗೆಲುವಿಗೆ ಜೈಕಾರ ಹಾಕಿದ್ದರು.

ಇದರಿಂದ ಕೆರಳಿದ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದು, ವಿಪ್ ಜಾರಿ ಮಾಡಿದ್ದರೂ ಸಹ ಅಡ್ಡಮತದಾನ ಮಾಡಿದ್ದಾರೆ. ಈ ಮೂಲಕ ವಿಪ್ ಉಲ್ಲಂಘನೆ ಮಾಡಿದ್ದು, ಇವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳ ನ್ಯಾಯಾಲವು, ಅಡ್ಡಮತದಾನ ಮಾಡಿದ್ದ ಆರು ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ ಆದೇಶಿಸಿದೆ.

ಚಿಕ್ಕಬಳ್ಳಾಪುರ ನಗರಸಭೆಯ 2 ನೇ ವಾರ್ಡಿನ ಸದಸ್ಯೆ ರತ್ನಮ್ಮ, 22 ನೇ ವಾರ್ಡಿನ ಸ್ವಾತಿ ಮಂಜುನಾಥ್, 24 ನೇ ವಾರ್ಡಿನ ಅಂಬಿಕಾ, 27 ನೇ ವಾರ್ಡಿನ ನೇತ್ರಾವತಿ, 07 ನೇ ವಾರ್ಡಿನ ಸತೀಶ್, ಹಾಗೂ 13 ನೇ ವಾರ್ಡಿನ ನಿರ್ಮಲಾಪ್ರಭುರನ್ನ ಅನರ್ಹಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ. ಕಾಂಗ್ರೆಸ್​ ಪಕ್ಷದ ವಿಪ್ ಉಲ್ಲಂಘಿಸಿ ವಿಪಕ್ಷದ ಅಭ್ಯರ್ಥಿಗೆ ಬೆಂಬಲಿಸಿದ ಕಾರಣ ಈಗ ಆರು ಜನ ಕಾಂಗ್ರೇಸ್ ನಗರಸಭಾ ಸದಸ್ಯರು ಅನರ್ಹಗೊಂಡಿದ್ದಾರೆ.

ಇನ್ನು ಅನರ್ಹ ಸದಸ್ಯರು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‍ ಮೆಟ್ಟಿಲೇರಿದ್ದು, ಮುಂದೆ ಏನಾಗುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ