ಇತ್ತ ನಾಳೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರ ಚುನಾವಣೆ; ಅತ್ತ ಜೆಡಿಎಸ್​ನ ಇಬ್ಬರು ಸದಸ್ಯರು ನಾಪತ್ತೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 11, 2024 | 9:25 PM

ಚಿಕ್ಕಬಳ್ಳಾಪುರ(Chikkaballapur) ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು, ಇತ್ತ ಜೆಡಿಎಸ್​(JDS)ನ ಇಬ್ಬರು ನಗರಸಭೆ ಸದಸ್ಯರು ನಾಪತ್ತೆಯಾಗಿದ್ದಾರೆ. ಇದರ ಜೊತೆಗೆ ಚುನಾವಣೆಯ ಕೊನೆ ಕ್ಷಣದಲ್ಲಿ ಸಂಸದ ಸುಧಾಕರ್ ಬೆಂಬಲಿಗರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಇತ್ತ ನಾಳೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರ ಚುನಾವಣೆ; ಅತ್ತ ಜೆಡಿಎಸ್​ನ ಇಬ್ಬರು ಸದಸ್ಯರು ನಾಪತ್ತೆ
ಇತ್ತ ನಾಳೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರ ಚುನಾವಣೆ; ಅತ್ತ ಜೆಡಿಎಸ್​ನ ಇಬ್ಬರು ಸದಸ್ಯರು ನಾಪತ್ತೆ
Follow us on

ಚಿಕ್ಕಬಳ್ಳಾಪುರ, ಸೆ.11: ನಾಳೆ(ಸೆ.12) ಚಿಕ್ಕಬಳ್ಳಾಪುರ(Chikkaballapur) ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಇತ್ತ ಜೆಡಿಎಸ್​(JDS)ನ ಇಬ್ಬರು ನಗರಸಭೆ ಸದಸ್ಯರಾದ ಮಟಮಪ್ಪ ಹಾಗೂ ವೀಣಾ ರಾಮು ಎನ್ನುವವರು ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ‘ಕಾಂಗ್ರೆಸ್ ಮುಖಂಡರೇ ಬಚ್ಚಿಟ್ಟಿದ್ದಾರೆಂದು ಆರೋಪಿಸುತ್ತಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ಸಂಸದ ಸುಧಾಕರ್ ಬೆಂಬಲಿಗರು

ಇನ್ನು ನಾಳೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಕೊನೆ ಕ್ಷಣದಲ್ಲಿ ಸಂಸದ ಸುಧಾಕರ್ ಬೆಂಬಲಿಗರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೌದು, ನಗರಸಭೆ ಮತದಾರರ ಪಟ್ಟಿಗೆ ಅಕ್ರಮವಾಗಿ ಪರಿಷತ್ ಸದಸ್ಯರಾದ ಎಂ.ಆರ್  ಸೀತಾರಾಂ ಹಾಗೂ ಅನಿಲ್ ಕುಮಾರ್ ಸ್ಥಳೀಯವಾಗಿ ವಾಸವಿಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಸೇರ್ಪಡೆ ಆಗಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಆನಂದ್ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಹೈಕೋರ್ಟ್​ನಿಂದ ಮದ್ಯಂತರ ಆದೇಶ ಬಂದಿದ್ದು, ಮುಚ್ಚಿದ ಲಕೋಟೆಯಲ್ಲಿ ಎಂ.ಎಲ್.ಸಿ ಗಳು ಮತದಾನ ಮಾಡಲು ಅವಕಾಶ ಹಾಗೂ ರಿಟ್ ಅರ್ಜಿ ಅಂತಿಮ ಆದೇಶಕ್ಕೆ ಒಳಪಟ್ಟು ಫಲಿತಾಂಶ ಪ್ರಕಟಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ಬಣ ಬಡಿದಾಟ: ಬಿಜೆಪಿ ಕಡೆಯಿಂದ ಗಂಗಾವತಿ ನಗರಸಭೆ ಅಧ್ಯಕ್ಷನಾದ ಮುಸ್ಲಿಂ ಸದಸ್ಯ

ಕೆಎಸ್​ಆರ್​ಟಿಸಿ ಬಸ್​ ಹರಿದು ಬೈಕ್​ ಸವಾರ ಸಾವು

ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮ ಬಳಿ ಕೆಎಸ್​ಆರ್​ಟಿಸಿ ಬಸ್​ ಹರಿದು ಬೈಕ್​ ಸವಾರ ಸಯ್ಯದ್ ನೌಮಾನ್(27) ಸಾವನ್ನಪ್ಪಿದ್ದಾನೆ. ಬೈಕ್​ನಲ್ಲಿ ಹೋಗುತ್ತಿದ್ದಾನೆ ಹಸು ಅಡ್ಡ ಬಂದಿದ್ದಕ್ಕೆ ಕೆಳಗೆ ಬಿದ್ದಿದ್ದ ಸವಾರ ಸಯ್ಯದ್ ಮೇಲೆ ಕೆಎಸ್​ಆರ್​ಟಿಸಿ ಬಸ್ ಹರಿದಿದ್ದು, ಈ ಕುರಿತು ಕೆ.ಆರ್.ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Wed, 11 September 24