ಚಿಕ್ಕಬಳ್ಳಾಪುರ: ಗಣಿಧಣಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಪಿಎಸ್ ಮೊರೆ ಹೋದ ರಾಜ್ಯ ಸರ್ಕಾರ

ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನಿತರೆ ಕಡೆ ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್​​ಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಸ್ಟೋನ್ ಕ್ರಷರ್​​​ಗಳು ಹಾಗೂ ಕ್ವಾರಿಗಳಿಂದ ಹೊರಡುವ ಟಿಪ್ಪರ್ ಮತ್ತು ಲಾರಿಗಳಿಗೆ ಪರ್ಮಿಟ್ ನೀಡಲಾಗುತ್ತಿದೆ.

ಚಿಕ್ಕಬಳ್ಳಾಪುರ: ಗಣಿಧಣಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಪಿಎಸ್ ಮೊರೆ ಹೋದ ರಾಜ್ಯ ಸರ್ಕಾರ
ಗಣಿಧಣಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಪಿಎಸ್ ಮೊರೆ ಹೋದ ರಾಜ್ಯ ಸರ್ಕಾರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma

Updated on:Oct 17, 2023 | 7:50 PM

ಚಿಕ್ಕಬಳ್ಳಾಪುರ, ಅಕ್ಟೋಬರ್ 17: ಬಳ್ಳಾರಿಯ ಐರನ್‍ಓರ್ ಮೀರಿಸುವ ಹಾಗೆ ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನಲ್ಲಿ ಕಲ್ಲು, ಕ್ವಾರಿ, ಗ್ರಾನೈಟ್ ದಂಧೆ ಜೋರಾಗಿದೆ. ಕಲ್ಲು ಕ್ವಾರಿ, ಕ್ರಷರ್, ಗ್ರಾನೈಟ್ ದಂಧೆಯಲ್ಲಿ ಸರ್ಕಾರಕ್ಕೆ ತೋರಿಸುವುದು ಒಂದು ಲೆಕ್ಕವಾದರೇ, ಗ್ರಾನೈಟ್ ಮಾಫಿಯಾದವರು (Mining Mafia) ಮಾಡುವುದು ಇನ್ನೊಂದು ಲೆಕ್ಕವಾಗಿದೆ. ಇದರಿಂದ ಹೆಚ್ಚೆತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಾಟ ಮಾಡುವ ಟಿಪ್ಪರ್‍ ಗಳು, ಲಾರಿಗಳಿಗೆ ಜಿಪಿಎಸ್ ಯಂತ್ರ ಅಳವಡಿಸಿ 24 ಗಂಟೆಗಳ ಕಾಲ ಆನ್‍ಲೈನ್ ಮಾನಿಟರಿಂಗ್ (Online Monitoring) ಮಾಡುವ ಒನ್ ಸ್ಟೇಟ್ ಒನ್ ಜಿಪಿಎಸ್ (One State One GPS) ವ್ಯವಸ್ಥೆ ಜಾರಿ ಮಾಡಿದೆ.

ಟಿಪ್ಪರ್​​ಗಳಿಗೆ ಜಿಪಿಎಸ್ ಅಳವಡಿಕೆ

ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನಿತರೆ ಕಡೆ ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್​​ಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಸ್ಟೋನ್ ಕ್ರಷರ್​​​ಗಳು ಹಾಗೂ ಕ್ವಾರಿಗಳಿಂದ ಹೊರಡುವ ಟಿಪ್ಪರ್ ಮತ್ತು ಲಾರಿಗಳಿಗೆ ಪರ್ಮಿಟ್ ನೀಡಲಾಗುತ್ತಿದೆ. ಇಲಾಖೆಯ ಜಿಪಿಎಸ್ ಇರುವ ಟಿಪ್ಪರ್​​ಗಳಿಗೆ ಮಾತ್ರ ಪರ್ಮಿಟ್ ನೀಡಲಾಗುತ್ತಿದೆ. ಟಿಪ್ಪರ್​​ಗಳಲ್ಲಿನ ಕಲ್ಲಿನ ಉತ್ಪನ್ನಗಳಿಗೆ ತಲಾ ಟನ್‍ಗೆ 107 ರೂಪಾಯಿ ರಾಜಧನ ನಿಗಧಿ ಮಾಡಲಾಗಿದೆ. ನಿಗಧಿತ ದಿನಾಂಕ, ಸಮಯ, ಮಾರ್ಗ ಮತ್ತು ನಿಗದಿತ ಸ್ಥಳಕ್ಕೆ ಕಲ್ಲಿನ ಸಾಮಾಗ್ರಿಗಳ ಸರಬರಾಜು ಮಾಡಬಹುದಾಗಿದೆ.

ನಿಯಮ ಉಲ್ಲಂಘಿಸಿದ ಟಿಪ್ಪರ್​​ಗಳ ಜಿಪಿಎಸ್ ಲಾಕ್

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಳವಡಿಸಿರುವ ಜಿಪಿಎಸ್ ತಂತ್ರಜ್ಞಾನವನ್ನು ತಿರುಚುವುದು, ಜಿಪಿಎಸ್ ಆಪ್ ಮಾಡುವುದು, ಯಂತ್ರದ ಬ್ಯಾಟರಿ ತೆಗೆದು ಹಾಕುವುದು, ಪರ್ಮಿಟ್ ನಿಯಮ ಉಲ್ಲಂಘನೆ ಮಾಡಿರುವುದು, ಆನ್‍ಲೈನ್ ಮಾನಿಟರಿಂಗ್ ಸಿಸ್ಟಂ ಒನ್ ಸ್ಟೇಟ್ ಒನ್ ಜಿಪಿಎಸ್ ಸಾಫ್ಟ್​​ವೇರ್​​ನಲ್ಲಿ ಕಂಡುಬಂದ ಹಿನ್ನೆಲೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 22 ಟಿಪ್ಪರ್​​ಗಳ ಜಿಪಿಎಸ್ ಲಾಕ್ ಮಾಡಲಾಗಿದೆಯೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀಮತಿ ಕೃಷ್ಣವೇಣಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ನಾಟಿ ಔಷಧಿ ಸೇವನೆ: ಮಗ ಸಾವು, ತಂದೆ-ಮಗಳು ಬಚಾವ್!

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ 1117 ಟಿಪ್ಪರ್ ಗಳಿಗೆ ಜಿ.ಪಿ.ಸ್ ಅಳವಡಿಸಲಾಗಿದೆ, ಅವುಗಳ ಚಲನವಲನಗಳನ್ನು ಆನ್ ಲೈನ್ ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ನಿಯಮ ಉಲ್ಲಂಘನೆ ಮಾಡುವ ವಾಹನಗಳಿಗೆ ಉತ್ನನ್ನಗಳ ಸಾಗಾಟಕ್ಕೆ ಅವಕಾಶ ನೀಡುತ್ತಿಲ್ಲವೆಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Tue, 17 October 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ