Chikkaballapur Police: ಕುಣಿದು ಕುಪ್ಪಳಿಸಿದ ಚಿಕ್ಕಬಳ್ಳಾಪುರ ಪೊಲೀಸರು, ಹಗ್ಗಜಗ್ಗಾಟ ಕ್ರೀಡೆಯಲ್ಲಿ ಹಗ್ಗವೇ ಎರಡು ತುಂಡಾಯಿತು!

| Updated By: ಸಾಧು ಶ್ರೀನಾಥ್​

Updated on: Nov 23, 2022 | 12:56 PM

ಪೊಲೀಸರು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಲು ಕ್ರೀಡೆ ಅವಶ್ಯಕವೆಂದು ಕೇಂದ್ರ ವಲಯ ಐ.ಜಿ.ಪಿ ಎಂ. ಚಂದ್ರಸೇಖರ್ ಇದೇ ಸಂದರ್ಭದಲ್ಲಿ ತಿಳಿಸಿದ್ದು ಮಾರ್ಮಿಕವಾಗಿತ್ತು.

Chikkaballapur Police: ಕುಣಿದು ಕುಪ್ಪಳಿಸಿದ ಚಿಕ್ಕಬಳ್ಳಾಪುರ ಪೊಲೀಸರು, ಹಗ್ಗಜಗ್ಗಾಟ ಕ್ರೀಡೆಯಲ್ಲಿ ಹಗ್ಗವೇ ಎರಡು ತುಂಡಾಯಿತು!
ಕುಣಿದು ಕುಪ್ಪಳಿಸಿದ ಚಿಕ್ಕಬಳ್ಳಾಪುರ ಪೊಲೀಸರು! ಹಗ್ಗಜಗ್ಗಾಟ ಕ್ರೀಡೆಯಲ್ಲಿ ಹಗ್ಗವೇ ಎರಡು ತುಂಡಾಯಿತು!
Follow us on

ಪ್ರತಿದಿನ ಕ್ರೈಮು, ಬೀಟು, ಬಂದೋಬಸ್ತು, ಗಲಾಟೆ ಗದ್ದಲ, ತನಿಖೆ ಅಂತಾ ಸಮಯದ ಪರಿವಿಯೆ ಇಲ್ಲದೇ ಸದಾ ಒತ್ತಡದಲ್ಲೆ ಇರುವುದು ಪೊಲೀಸರಿಗೆ ಸಹಜವಾಗಿ ಸಿದ್ಧಿಸಿರುವ ಕಾಯಕ! ಇದನ್ನರಿತ ಪೊಲೀಸ್ ಇಲಾಖೆ, ವರ್ಷಕ್ಕೊಮ್ಮೆ ಕ್ರೀಡಾಕೂಟ ಏರ್ಪಡಿಸಿ ಅಧಿಕಾರಿ ಸಿಬ್ಬಂದಿಗಳನ್ನು ಒಂದುಗೂಡಿಸಿ ಕ್ರೀಡೆಯಲ್ಲಿ ಭಾಗಿಯಾಗಿ ಉಲ್ಲಸಿತರಾಗುತ್ತಾರೆ. ಹೀಗೆ ಕ್ರೀಡಾಕೂಟದಲ್ಲಿ ಒಂದಾದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮನಸ್ಸೊ ಇಚ್ಚೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!

ತಮ್ಮ ನೆಚ್ಚಿನ ಪೊಲೀಸ್ ಅಧಿಕಾರಿಗಳನ್ನು ಎತ್ತಿಕೊಂಡು ಕುಣಿದು ಕುಪ್ಪಳಿಸಿದ್ದು ಒಂದೆಡೆಯಾದ್ರೆ ಮತ್ತೊಂದೆಡೆ ಸ್ವತಃ ಪೊಲೀಸ್ ಇನ್ಸ್​ಪೆಕ್ಟರ್​… ಸಿಕ್ಕಿದ್ದೇ ಚಾನ್ಸ್ ಅಂತ, ಸುಂದರ ದಢೂತಿ ದೇಹ ಹೊತ್ತು ಮನಸ್ಸೊ ಇಚ್ಚೆ ಕುಣಿದು ಹಾಡಿ ಜೊತೆಗಿದ್ದ ಆಪ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ರಂಜಿಸಿದ್ದು ಚಿಕ್ಕಬಳ್ಳಾಪುರದಲ್ಲಿ (Chikkaballapur Police).

ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಮೂರು ದಿನಗಳ ಕಾಲ ಜಿಲ್ಲೆಯ ಪೊಲೀಸರಿಗಾಗಿ ಕ್ರೀಡೆಗಳನ್ನು ಆಯೋಜಿಸಿತ್ತು. ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದ ತಂಡಗಳು ತಮ್ಮ ಅಧಿಕಾರಿಗಳನ್ನು ಹೊತ್ತು ಮನಸ್ಸೊ ಇಚ್ಛೆ ಕುಣಿದು ಸಂಭ್ರಮಿಸಿದರು. ಪೊಲೀಸರು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಲು ಕ್ರೀಡೆ ಅವಶ್ಯಕವೆಂದು ಕೇಂದ್ರ ವಲಯ ಐ.ಜಿ.ಪಿ ಎಂ. ಚಂದ್ರಸೇಖರ್ ಇದೇ ಸಂದರ್ಭದಲ್ಲಿ ತಿಳಿಸಿದ್ದು ಮಾರ್ಮಿಕವಾಗಿತ್ತು.

ಹಗ್ಗಜಗ್ಗಾಟ ಕ್ರೀಡೆಯಲ್ಲಿ ಹಗ್ಗವೇ ಎರಡು ತುಂಡಾಯಿತು!

ಇನ್ನು ಪೊಲೀಸ್ ಸಿಬ್ಬಂದಿಗಾಗಿ ಹಗ್ಗಜಗ್ಗಾಟ ಕ್ರೀಡೆ ಆಯೋಜನೆ ಮಾಡಲಾಗಿತ್ತು. ಸ್ವತಃ ಕೇಂದ್ರ ವಲಯ ಐ.ಜಿ.ಪಿ ಎಂ.ಚಂದ್ರಸೇಖರ್ ಬಂದೂಕಿನಲ್ಲಿ ಶಬ್ದ ಹೊರಡಿಸುವ ಮೂಲಕ ಸಿಬ್ಬಂದಿಯಲ್ಲಿ ಹುಮ್ಮಸ್ಸು ತುಂಬಿದರು. ಇದ್ರಿಂದ ಎರಡೂ ತಂಡಗಳು ನಾನಾ ಇಲ್ಲಾ ನೀನಾ ಅಂತ ಬಲಿಷ್ಠವಾಗಿ ಹಗ್ಗವನ್ನು ಎಳೆದಾಡಿದ ಕಾರಣ ಸ್ವತಃ ಹಗ್ಗವೇ ಎರಡು ತುಂಡಾಗಿ ಬೀಳುವುದರ ಮೂಲಕ ಪೊಲೀಸರ ಪೌರುಷಕ್ಕೆ ಸಾಕ್ಷಿ ಆಯಿತು.

ಬಂದೂಕಿನಲ್ಲಿ ಶಬ್ದ ಹೊರಡಿಸುವುದರ ಮೂಲಕ

ಇದೆ ವೇಳೆ ಪೊಲೀಸ್ ಸಿಬ್ಬಂದಿಗಳ ಕುಟುಂಬದವರಿಗಾಗಿ ಮ್ಯೂಜಿಕಲ್ ಚೇರ್ ಆಯೋಜನೆ ಮಾಡಲಾಗಿತ್ತು. ಮಹಿಳೆಯರು ಮ್ಯೂಜಿಕಲ್ ಚೇರ್ ಆಟವಾಡಿ ಸಂತಸಪಟ್ರು. ಮತ್ತೊಂದೆಡೆ ವಿಭಾಗಾವಾರು ವಾಲಿಬಾಲ್, ಕಬಡ್ಡಿ, ರನ್ನಿಂಗ್ ರೇಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪೊಲೀಸರು ಸಂತಸ ಸಂಭ್ರಮದಿಂದ ಆಟವಾಡಿದರು. (ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ)

Published On - 6:54 pm, Tue, 22 November 22