ದುಬಾರಿಯಾಯ್ತು ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟ, ಪ್ರವೇಶ ಶುಲ್ಕ ಡಬಲ್ ಆಯ್ತು, ಚಾರಣಿಗರ ಸಿಟ್ಟೂ ಬೆಟ್ಟವೇರಿತು!
ಸ್ಕಂದಗಿರಿ ಬೆಟ್ಟಕ್ಕೆ ಹತ್ತಲು ಯಾವುದೆ ಮೆಟ್ಟಿಲಾಗಲಿ, ಟಾರ್ ರಸ್ತೆಯಾಗಲಿ, ಕೇಬಲ್ ಕಾರ್ ಗಳಾಗಲಿ, ಇಕೊ ವಾಹನಗಳಾಗಲಿ, ಕನಿಷ್ಠ ಕುಡಿಯುವ ನೀರು, ವಿಶ್ರಾಂತಿಗೆ ಕೊಠಡಿಗಳು, ಭದ್ರತೆಗೆ ಸಿಬ್ಬಂದಿ ಸೇರಿದಂತೆ ಯಾವುದೆ ಮೂಲಭೂತ ಸೌಕರ್ಯಗಳು ಇಲ್ಲವೆ ಇಲ್ಲ! ಇಲ್ಲಿ ನಿರ್ವಹಣೆಗೆಂದು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆಯೂ ಇಲ್ಲ. ಆದ್ರೂ...
ಅಲ್ಲೊಂದು ಪ್ರಕೃತಿ ಧಾಮವಿದೆ. ಅದು ಚಾರಣಿಗರ ಅಚ್ಚು ಮೆಚ್ಚಿನ ತಾಣವೂ… ಪ್ರಕೃತಿ ಪ್ರೀಯರ ಸ್ವರ್ಗವೂ ಆಗಿದೆ. ಬೆಳ್ಳಿ ಮೋಡಗಳ ವೈಯಾರ ಒಂದೆಡೆಯಾದ್ರೆ ಮತ್ತೊಂದೆಡೆ ಚುಮು ಚುಮು ಚಳಿಯ ನೀನಾದ ಎಂಥವರನ್ನೂ ತನ್ನತ್ತ ಸೆಳೆಯುತ್ತೆ. ಅಲ್ಲಿರುವ ಪ್ರಕೃತಿ ಸೌಂದರ್ಯ ಸವಿಯಲು ಪ್ರತಿದಿನ ನೂರಾರು ಜನ ಚಾರಣಿಗರು ಅಲ್ಲಿಗೆ ಹೊಗ್ತಾರೆ. ಆದ್ರೆ ಈಗ ಅದೆ ಚಾರಣಿಗರ ತಾಣಕ್ಕೆ ಹೋಗಬೇಕು ಅಂದ್ರೆ ತಲಾ 607 ರೂಪಾಯಿ ದುಬಾರಿ ಪ್ರವೇಶ ಶುಲ್ಕ (Entrance Fees) ನೀಡಿ, ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಅಷ್ಟಕ್ಕೂ ಅದ್ಯಾವ ತಾಣ ಅಂತೀರಾ? ಈ ಸ್ಟೋರಿ ನೋಡಿ!!
ಸುತ್ತಲು ಮುತ್ತಿರುವ ಬೆಳ್ಳಿ ಮೊಡಗಳ ಮಧ್ಯೆ, ಹಣೆಯ ಮೇಲೊಂದು ಬಿಂದು ಇಟ್ಟಿರುವ ಹಾಗೆ ಕಾಣಿಸುತ್ತಿರುವ ಇದು, ಚಾರಣಿಗರ ಸ್ವರ್ಗಲೋಕ ಎಂದೇ ಖ್ಯಾತಿಯಾಗಿರುವ ಸ್ಕಂದಗಿರಿ ಬೆಟ್ಟ. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಕಳವಾರ ಗ್ರಾಮದ ಬಳಿ ಇದೆ. ಸ್ಕಂದಗಿರಿ ಬೆಟ್ಟ (Skandagiri Hill) ಅರಣ್ಯ ಇಲಾಖೆ (Forest Department) ವ್ಯಾಪ್ತಿಯಲ್ಲಿದ್ದು, ಸಮುದ್ರ ಮಟ್ಟದಿಂದ 1,350 ಮೀಟರ್ ಗಳ ಎತ್ತರದಲ್ಲಿದೆ.
ರಾಜಧಾನಿ ಬೆಂಗಳೂರಿನಿಂದ ಕೇವಲ 68 ಕಿಲೋ ಮೀಟರ್ ದೂರ ಇರುವ ಕಾರಣ ಬೆಂಗಳೂರಿನಲ್ಲಿರುವ ಚಾರಣಿಗರು (Trekking) ಸೇರಿದಂತೆ ಟೆಕ್ಕಿಗಳು ವೀಕೆಂಡ್ ಬಂದ್ರೆ ಸಾಕು ಸ್ಕಂದಗಿರಿಯತ್ತ ಮುಖ ಮಾಡ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕರ್ನಾಟಕ ಇಕೊ ಟೂರಿಸಂ ಬೋರ್ಡ್ ಮನಸೋ ಇಚ್ಛೆ ಪ್ರವೇಶ ಶುಲ್ಕ ನಿಗದಿ ಮಾಡಿ ಚಾರಣಿಗರ ಆಕ್ರೋಶಕ್ಕೆ ಕಾರಣವಾಗಿದೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
ಸ್ಕಂದಗಿರಿ ಬೆಟ್ಟಕ್ಕೆ ಹತ್ತಲು ಯಾವುದೆ ಮೆಟ್ಟಿಲಾಗಲಿ, ಟಾರ್ ರಸ್ತೆಯಾಗಲಿ, ಕೇಬಲ್ ಕಾರ್ ಗಳಾಗಲಿ, ಇಕೊ ವಾಹನಗಳಾಗಲಿ, ಕನಿಷ್ಠ ಕುಡಿಯುವ ನೀರು, ವಿಶ್ರಾಂತಿಗೆ ಕೊಠಡಿಗಳು, ಭದ್ರತೆಗೆ ಸಿಬ್ಬಂದಿ ಸೇರಿದಂತೆ ಯಾವುದೆ ಮೂಲಭೂತ ಸೌಕರ್ಯಗಳು ಇಲ್ಲವೆ ಇಲ್ಲ! ಇಲ್ಲಿ ನಿರ್ವಹಣೆಗೆಂದು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆಯೂ ಇಲ್ಲ. ಆದ್ರೂ…
ಕರ್ನಾಟಕ ಇಕೊ ಟೂರಿಸಂ ಬೋರ್ಡ್ ನವರು ಶನಿವಾರ, ಭಾನುವಾರ ಎರಡು ದಿನಗಳ ಕಾಲ, ಅದ್ಯಾವ ಲಾಜಿಕ್ಕು, ಅದ್ಯಾವ ನಿಯಮಗಳ ಮೇಲೆ 250 ರೂಪಾಯಿ ಇದ್ದ ಪ್ರವೇಶ ಶುಲ್ಕವನ್ನು ಇದ್ದಕ್ಕಿದ್ದ ಹಾಗೆ 607 ರೂಪಾಯಿಗೆ ಏರಿಕೆ ಮಾಡಿದೆ? ಅದರಲ್ಲಿ 500 ರೂಪಾಯಿ ಪ್ರವೇಶ ಶುಲ್ಕ, ಟಿಕೆಟ್ ಬುಕಿಂಗ್ ಗೆ ಆನ್ ಲೈನ್ ವ್ಯವಸ್ಥೆ ಮಾಡಿದ್ದಕ್ಕೆ 14 ರೂಪಾಯಿ 50 ಪೈಸೆ, ಜಿ.ಎಸ್.ಟಿ 18 ಪರ್ಸೆಂಟ್ ಅಂತಾ 607 ಕೊಳ್ಳೆ ಹೊಡೆಯುತ್ತಿದೆ. ಇದ್ರಿಂದ ಮಧ್ಯಮ ವರ್ಗದವರು ಹೇಗೆ ಚಾರಣ ಮಾಡೋದು ಅಂತ ಚಾರಣಿಗರು ಅಸಮಾಧಾನಗೊಂಡಿದ್ದಾರೆ.
ಇತ್ತೀಚಿಗೆ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರು, ಸ್ವಲ್ಪ ತಡವಾಗಿ ಬಂದ್ರೂ… ವಾಹನಗಳ ಪ್ರವೇಶಕ್ಕೆ ಅವಕಾಶ ಸಿಗದೆ.. ಪರ್ಯಾಯವಾಗಿ ಸ್ಕಂದಗಿರಿಯತ್ತ ಮುಖ ಮಾಡ್ತಾರೆ. ಸ್ಕಂದಗಿರಿಯಲ್ಲಿ ಸಿಗುವ ಪ್ರಾಕೃತಿಕ ರಮ್ಯತೆ, ಬೆಳ್ಳಿ ಮೋಡಗಳ ಪಯಣ, ಸೂರ್ಯೋದಯದ ವಿಹಂಗಮ ನೋಟ ನೋಡಲು ಬಯಸುತ್ತಾರೆ. ಆದ್ರೆ ಚಾರಣಿಗರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದ ಕರ್ನಾಟಕ ಇಕೊ ಟೂರಿಸಂ ಬೋರ್ಡ್ ಮಾತ್ರ ಮನಸೋ ಇಚ್ಛೆ ಪ್ರವೇಶ ಶುಲ್ಕ ನಿಗದಿ ಮಾಡಿ ಚಾರಣಿಗರ ಆಕ್ರೋಶಕ್ಕೆ ಕಾರಣವಾಗಿದೆ.