ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ: ತಂದೆ-ತಾಯಿ ಇಲ್ಲದ ತಬ್ಬಲಿ ಮೇಲೆ ಇದೆಂಥಾ ಕ್ರೌರ್ಯ

ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನ ಡ್ರಾಪ್ ನೀಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರು ಯುವಕರು ಅತ್ಯಾಚಾರವೆಸಗಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ: ತಂದೆ-ತಾಯಿ ಇಲ್ಲದ ತಬ್ಬಲಿ ಮೇಲೆ ಇದೆಂಥಾ ಕ್ರೌರ್ಯ
ಬಂಧಿತರು
Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2025 | 8:13 PM

ಚಿಕ್ಕಬಳ್ಳಾಪುರ, ಅಕ್ಟೋಬರ್​ 13: ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು (girl) ಡ್ರಾಪ್ ಕೊಡುವ ನೆಪದಲ್ಲಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರು ಯುವಕರಿಂದ ಅತ್ಯಾಚಾರವೆಸಗಿರುವಂತಹ (sexaual harassment) ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಹತ್ತಿರದ ಕಣಿವೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೆಕ್ಯಾನಿಕ್ ಆಗಿರುವ ಸಿಕಂದರ್ ಹಾಗೂ ಆತನ ಸ್ನೇಹಿತ ಜನಾರ್ಧನಾ ಆಚಾರ್ ಬಂಧಿತರು. ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ನಡೆದದ್ದೇನು?

ಅದು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 69. ಇದೆ ರಸ್ತೆಯುದ್ದಕ್ಕೂ ದಟ್ಟವಾದ ಅರಣ್ಯ ಇದೆ. ಈ ರಸ್ತೆಯಲ್ಲಿ ಕಳೆದ ಶುಕ್ರವಾರ ಸಂಜೆ 35 ವರ್ಷದ ಯುವತಿಯೊಬ್ಬಳು ಕಾಲ್ನಡಿಗೆಯಲ್ಲಿ ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಕಡೆಗೆ ಹೋಗುತ್ತಿದ್ದಳು. ಬಸ್ ನಲ್ಲಿ ಊರಿಗೆ ಹೋಗೋಣ ಅಂದರೆ ಹಣ ಇರಲಿಲ್ಲ. ಆಧಾರ್​ ಕಾರ್ಡ್​ ಸಹ ಇರಲಿಲ್ಲ. ಮೊದಲೇ ಹಳ್ಳಿ ಹೆಣ್ಣು ಮಗಳಾದ ಕಾರಣ ಭಂಡ ಧೈರ್ಯದಿಂದ ಕಾಲ್ನಡಿಗೆಯಲ್ಲಿ ಊರಿಗೆ ಹೊರಟಿದ್ದಳು.

ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಯ್ತು ಕಾಮುಕರ ಹಾವಳಿ; ಕೆಎಸ್ಆರ್ಟಿಸಿ ಬಸ್​ನಲ್ಲಿ ವೈದ್ಯೆಗೆ ಕಿರುಕುಳ ನೀಡಿದವನ ಬಂಧನ

ಈಕೆಯನ್ನು ಗಮನಿಸಿದ ಕಿರಾತಕನೊಬ್ಬ, ಏಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಿಯಾ, ಡ್ರಾಪ್ ಮಾಡುತ್ತೇನೆ  ಅಂತ ಅಪರಿಚಿತ ಯುವತಿಯನ್ನ ಹತ್ತಿಸಿಕೊಂಡಿದ್ದಾನೆ. ಹೀಗೆ ಯುವತಿಯನ್ನು ಹತ್ತಿಸಿಕೊಂಡವನು ಊರಿಗೆ ಹೋಗುವುದರ ಬದಲು ನಿರ್ಜನ ಪ್ರದೇಶದ ಪಾಳು ಬಿದ್ದ ಬಡಾವಣೆಯೊಂದಕ್ಕೆ ಕರೆದುಕೊಂಡು ಹೋಗಿ ಬೇಡ ಬೇಡ ಅಂದರೂ ಬಲವಂತಾಗಿ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

ಸ್ನೇಹಿತನಿಂದಲೂ ಅತ್ಯಾಚಾರ 

ಆರೋಪಿ ತಾನೂ ಅತ್ಯಾಚಾರ ಮಾಡಿದ್ದಲ್ಲದೆ, ತನ್ನ ಸ್ನೇಹಿತನನ್ನು ಕರೆಸಿಕೊಂಡು ಅವನಿಂದ ಕೂಡ ಅತ್ಯಾಚಾರ ಮಾಡಿಸಿದ್ದಾನೆ. ನಂತರ ಯುವತಿಯನ್ನ ಕರೆದುಕೊಂಡು ಬಂದು ಪೆಟ್ರೋಲ್ ಬಂಕ್ ಬಳಿ ಇರುವ ರೈತ ಮಹಿಳೆಯ ಮನೆ ಬಳಿ ಬಿಟ್ಟು ಹೊರಟು ಹೋಗಿದ್ದಾನೆ. ಅಸ್ವಸ್ಥಗೊಂಡ ಯುವತಿ ಚಿಕ್ಕಬಳ್ಳಾಪುರ ನಗರದಲ್ಲಿ ಬಿಬಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಇರುವುದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತೆ ಶಿಲ್ಪಾ ಎನ್ನುವವರು, ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ.

ಪೆಟ್ರೋಲ್ ಬಂಕ್ ಬಳಿ ಆರೋಪಿಗಳು, ಯುವತಿಯ ಜೊತೆ ಇದ್ದ ವಿಡಿಯೋ ಆಧಾರದ ಮೇಲೆ ಪೊಲೀಸರು ಸಿಕಂದರ್ ಮತ್ತು ಜನಾರ್ಧನಾ ಆಚಾರ್​ನನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿಗಳು ಮಾಡಿದ ಕೃತ್ಯ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಫುಲ್ ಮಾರ್ಕ್ಸ್ ಕೊಡ್ತೇನೆ, ಸಹಕರಿಸು: ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಲೈಂಗಿಕ ಕಿರುಕುಳ ನೀಡಿದ ಬೆಂಗಳೂರು ಖಾಸಗಿ ಕಾಲೇಜು ಎಚ್​ಒಡಿ

ಸದ್ಯ ಚಿಕ್ಕಬಳ್ಳಾಪುರದ ಮಹಿಳಾ ಠಾಣೆ ಪೊಲೀಸರು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇತ್ತ ಸಂತ್ರಸ್ತ ಯುವತಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನು ಚಿಕ್ಕಬಳ್ಳಾಪುರ ಜನರು ಆರೋಪಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.