ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಕ್ವಾರಿ ಮಾಲೀಕ, ಬಿಜೆಪಿ ಮುಖಂಡನಾಗಿರುವ ಪ್ರಮುಖ ಆರೋಪಿ G.S.ನಾಗರಾಜ್ ಬಂಧನ

Chikkaballapura Gelatin Blast: ಚಿಕ್ಕಬಳ್ಳಾಪುರ ಪೊಲೀಸರು ಪ್ರಮುಖ ಆರೋಪಿ, ಕಲ್ಲು ಕ್ವಾರಿ ಮಾಲೀಕ ಬಿಜೆಪಿ ಮುಖಂಡ ಜಿ.ಎಸ್.ನಾಗರಾಜ್​ನನ್ನು ಬಂಧಿಸಿದ್ದಾರೆ. ಜೊತೆಗೆ ಮತ್ತೋರ್ವ ಆರೋಪಿ ಗಣೇಶ್ ತಮಿಳುನಾಡಿನಲ್ಲಿ ಬಂಧಿಸಲಾಗಿದೆ.

ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಕ್ವಾರಿ ಮಾಲೀಕ, ಬಿಜೆಪಿ ಮುಖಂಡನಾಗಿರುವ ಪ್ರಮುಖ ಆರೋಪಿ G.S.ನಾಗರಾಜ್ ಬಂಧನ
ಜಿ.ಎಸ್.ನಾಗರಾಜ್ ಮತ್ತು ಗಣೇಶ್
Follow us
ಆಯೇಷಾ ಬಾನು
| Updated By: Digi Tech Desk

Updated on:Feb 25, 2021 | 8:59 AM

ಚಿಕ್ಕಬಳ್ಳಾಪುರ: ಶಿವಮೊಗ್ಗದ ಸ್ಫೋಟ ಮರೆಯುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ನಾಗವೇಲಿ ಗ್ರಾಮದ ಬಳಿ ನಡೆದ ಜಿಲೆಟಿನ್‌ ಸ್ಫೋಟ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಸ್ಫೋಟದಲ್ಲಿ 6 ಜನರು ತಮ್ಮ ಜೀವ ಕಳೆದುಕೊಂಡಿದ್ದರು. ಸದ್ಯ ಈಗ ಚಿಕ್ಕಬಳ್ಳಾಪುರ ಪೊಲೀಸರು ಪ್ರಮುಖ ಆರೋಪಿ, ಕಲ್ಲು ಕ್ವಾರಿ ಮಾಲೀಕ ಬಿಜೆಪಿ ಮುಖಂಡ ಜಿ.ಎಸ್.ನಾಗರಾಜ್​ನನ್ನು ಬಂಧಿಸಿದ್ದಾರೆ. ಜೊತೆಗೆ ಮತ್ತೋರ್ವ ಆರೋಪಿ ಗಣೇಶ್ ತಮಿಳುನಾಡಿನಲ್ಲಿ ಬಂಧಿಸಲಾಗಿದೆ.

ಬಂಧಿತ G.S.ನಾಗರಾಜ್ ಬಿಜೆಪಿ ಮುಖಂಡನಾಗಿದ್ದು ಶಿರಡಿಸಾಯಿ ಅಗ್ರಿಗೇಟ್ಸ್ ಕ್ವಾರಿ, ಭ್ರಮರವಾಸಿನಿ ಕ್ರಷರ್ಸ್‌ ಮಾಲೀಕನಾಗಿದ್ದಾನೆ. ಹಾಗೂ ಸ್ಫೋಟಕ ಸರಬರಾಜು ಮಾಡಿದ್ದ ಆರೋಪಿ ಗಣೇಶ್​ನನ್ನು ಪೊಲೀಸರು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಜಿಲೆಟಿನ್‌ ಸ್ಫೋಟದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಕಲಂ. 286,304 ಐ.ಪಿ.ಸಿ & 6,3,5 EXPLOSIVE SUBSTANCES ACT, 1908 & 9B EXPLOSIVE ACT, 1884 ಪ್ರಕರಣ ದಾಖಲಾಗಿತ್ತು. ಸದ್ಯ ಸಿ.ಐ.ಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಇನ್ಸ್​ಪೆಕ್ಟರ್​, ಎಸ್​ಐ ಅಮಾನತು, ಇಬ್ಬರು ಸಿಐಡಿ ಕಸ್ಟಡಿಗೆ ರಾಜ್ಯ ಸರ್ಕಾರ ಈ ಪ್ರಕರಣದ ಗಂಭೀರತೆ ಅರಿತು ಕುಲಂಕುಶ ತನಿಖೆ ನಡೆಸಲು ಸಿ.ಐ.ಡಿಗೆ ಆದೇಶ ಮಾಡಿತ್ತು. ಈ ನಡುವೆ ಗುಡಿಬಂಡೆ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿ, ಕ್ವಾರಿ ಹಾಗೂ ಕ್ರಷರ್ ಮಾಲೀಕರುಗಳಾದ ರಾಘವೇಂದ್ರ ರೆಡ್ಡಿ, ಮಧುಸೂದನ್ ರೆಡ್ದಿ, ವೆಂಕಟಶಿವಾರೆಡ್ಡಿ , ಮ್ಯಾನೇಜರ್ ಪ್ರವೀಣ್, ಘಟನೆಯಲ್ಲಿ ಬದುಕುಳಿದ ಚಾಲಕ ರಿಯಾಜ್‌ನ್ನ ಬಂಧಿಸಿದ್ರು. ಸರ್ಕಾರದ ಆದೇಶ ಸಿಐಡಿ ಅಧಿಕಾರಿಗಳ ಕೈ ಸೇರಿದ ಹಿನ್ನೆಲೆ ನಿನ್ನೆ ಸಂಜೆ ಸಿ.ಐ.ಡಿ ಅಧಿಕಾರಿಗಳು ಗುಡಿಬಂಡೆಗೆ ಭೇಟಿ ನೀಡಿ ಪ್ರಕರಣ ಹಸ್ತಾಂತರ ಮಾಡಿಕೊಂಡಿದ್ದಾರೆ.

ಮೊದಲ ದಿನವೇ ಇಬ್ಬರು ಆರೋಪಿಗಳಾದ ರಿಯಾಜ್, ಕ್ರಷರ್​ ಮಾಲೀಕ ರಾಘವೇಂದ್ರ ರೆಡ್ಡಿಯನ್ನ ಸಿಐಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.​ ಇತ್ತ ಘಟನೆಯಲ್ಲಿ ಮೃತಪಟ್ಟಿರುವ ಆಂಧ್ರ ಮೂಲದ ಗಂಗಾಧರ್‌ನ ಸಂಬಂಧಿಗಳು, ಚಿಕ್ಕಬಳ್ಳಾಪುರ ಡಿವೈಎಸ್ಪಿ ಕಚೇರಿ ಬಳಿ ಆಗಮಿಸಿ, ಗಂಗಾಧರ್‌ಗೆ ಚಿಕ್ಕ ಚಿಕ್ಕ ಇಬ್ಬರು ಮಕ್ಕಳಿದ್ದು, ಆತನ ಸಂಸಾರಕ್ಕೆ ನ್ಯಾಯ ಕೊಡಿಸಿ ಅಂತ ಅಳಲುತೊಡಿಕೊಂಡಿದ್ದಾರೆ.

ಗುಡಿಬಂಡೆ ಠಾಣೆಯ ಇನ್ಸ್​ಪೆಕ್ಟರ್​, ಎಸ್​ಐ ಅಮಾನತು ಇನ್ನೂ ಅಕ್ರಮ ಸ್ಫೋಟ ದುರಂತ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿರುವ ಕಾರಣ, ಕರ್ತವ್ಯಲೋಪದಡಿ ಗುಡಿಬಂಡೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, ಸಬ್ ಇನ್ಸ್ ಪೆಕ್ಟರ್ ಗೋಪಾಲ್ ರೆಡ್ಡಿಯನ್ನ ಕೇಂದ್ರ ವಲಯ ಐ.ಜಿ.ಪಿ ಚಂದ್ರಶೇಖರ ಅಮಾನತ್ತು ಮಾಡಿ ಆದೇಶ ಮಾಡಿದ್ದಾರೆ. ಮತ್ತೊಂದ್ಕಡೆ ಘಟನೆಯಲ್ಲಿ ಬದುಕುಳಿದಿರುವ ಗಾಯಾಳು ರಿಯಾಜ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಆದಷ್ಟು ಬೇಗ ಸಿಐ.ಡಿ ಪೊಲೀಸರು ಪ್ರಕರಣದ ಸತ್ಯ ಬಯಲಿಗೇಳೆಯಬೇಕಿದೆ.

ಇದನ್ನೂ ಓದಿ: Chikkaballapura Gelatin Blast | ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಕ್ರಷರ್​ ಹಾವಳಿಗೆ ಮುಚ್ಚಿಹೋದ ಪುರಾತನ ಹನುಮ ದೇಗುಲ!

Published On - 7:54 am, Thu, 25 February 21

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ