ಯಾರೋ ಜೀರ್ಣೋದ್ದಾರ ಮಾಡಿದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಚಿಂತಾಮಣಿ ಅರಣ್ಯ ಇಲಾಖೆ ಬೀಗ ಹಾಕಿತು! ಕಾರಣ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Dec 26, 2022 | 3:41 PM

ಈ ಜಾಗದ ಬಗ್ಗೆ ತಕರಾರು ಎತ್ತಿರುವ ಚಿಂತಾಮಣಿ ಅರಣ್ಯ ಇಲಾಖೆ, ಇದು ತನಗೆ ಸೇರಿದ ಜಾಗ, ಇಲ್ಲಿಂದ ಮೊದಲು ಜಾಗ ಖಾಲಿ ಮಾಡುವಂತೆ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ದೇವಸ್ಥಾನದ ಅರ್ಚಕರಾದ ನಾರಾಯಣಸ್ವಾಮಿ ಅಲವತ್ತುಕೊಂಡಿದ್ದಾರೆ.

ಯಾರೋ ಜೀರ್ಣೋದ್ದಾರ ಮಾಡಿದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಚಿಂತಾಮಣಿ ಅರಣ್ಯ ಇಲಾಖೆ ಬೀಗ ಹಾಕಿತು! ಕಾರಣ ಇಲ್ಲಿದೆ
ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಚಿಂತಾಮಣಿ ಅರಣ್ಯ ಇಲಾಖೆ ಬೀಗ
Follow us on

ಅದು ಮುಗಿಲೆತ್ತರಕ್ಕೆ ಬೆಳೆದು ನಿಂತ ಸುಂದರವಾದ ಬೆಟ್ಟ, ಆ ಬೆಟ್ಟದಲ್ಲಿ ಹಾಳುಬಿದ್ದಿದ್ದ ಒಂದು ಆಂಜನೇಯಸ್ವಾಮಿ (Anjaneya Swamy) ದೇವಸ್ಥಾನ ಇತ್ತು. ಆ ದೇವಸ್ಥಾನ ನೋಡಿದ ಆಂಜನೇಯಸ್ವಾಮಿ ಭಕ್ತರೊಬ್ಬರು… ಲಕ್ಷಾಂತರ ರೂಪಾಯಿ ಖರ್ಚು ಮಾಡಿ… ದೇವಸ್ಥಾನವನ್ನು ಜೀರ್ಣೋದ್ದಾರ (Renovation) ಮಾಡಿ, ಬಂದ ಭಕ್ತರಿಗೆ ಆಂಜನೇಯಸ್ವಾಮಿಯ ದರ್ಶನ ಮಾಡಿಸ್ತಿದ್ದರು. ಆದ್ರೆ ಅದೇ ದೇವಸ್ಥಾನದ (Temple) ಮೇಲೆ ಕಣ್ಣು ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು, ಈಗ ದೇವಸ್ಥಾನ ಅರಣ್ಯ ಇಲಾಖೆ (Chintamani Forest Department) ವ್ಯಾಪ್ತಿಗೆ ಸೇರುತ್ತೆ… ಜಾಗ ಬಿಡಿ ಅಂತ ಫರ್ನಾನು ಹೊರಡಿಸಿದ್ದಾರೆ. ಈ ಕುರಿತು ಒಂದು ವರದಿ.

ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಬೆಟ್ಟ. ಬೆಟ್ಟದ ಮೇಲೆ ಪ್ರಕೃತಿಯ ಮಡಿಲಲ್ಲಿ ನೆಲೆ ನಿಂತಿರೋ ಅಂಜಿನೇಯಸ್ವಾಮಿ, ಇಲ್ಲಿಯ ಆಂಜನೇಯಸ್ವಾಮಿಗೆ ಒಂದು ಸುಂದರ ದೇವಸ್ಥಾನ ಇಲ್ಲದೆ… ಇರೊ ದೇವಸ್ಥಾನ ಪಾಳು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯ ನಾರಾಯಣಸ್ವಾಮಿ ಎಂಬುವವರು ಆಂಜನೇಯಸ್ವಾಮಿ ವಿಗ್ರಹಕ್ಕೆ ಒಂದು ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

Also Read:

New Year Guidelines: ಹೊಸ ವರ್ಷಾಚರಣೆಗೆ ಕೊರೊನಾ ರೂಲ್ಸ್​​; ಸೆಲೆಬ್ರೆಶನ್​ಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ, ಮಾಸ್ಕ್​, ಲಸಿಕೆ ಕಡ್ಡಾಯ

ಕೊನೆಗೆ ಲಕ್ಷಾಂತರ ಬಂಡವಾಳ ಹಾಕಿ ದಾನಿಗಳ ಧನ ಸಹಾಯದಿಂದ ರಸ್ತೆ ನಿರ್ಮಾಣ ಮಾಡಿ, ಪಾಳು ಬಿದ್ದಿದ್ದ ದೇವಸ್ಥಾನಕ್ಕೆ ಮರುಜೀವ ಕೊಟ್ಟಿದ್ದಾರೆ. ಇದ್ರಿಂದ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಬರುತ್ತಿದ್ರು.

ಆದರೆ ಈ ಜಾಗದ ಬಗ್ಗೆ ತಕರಾರು ಎತ್ತಿರುವ ಚಿಂತಾಮಣಿ ಅರಣ್ಯ ಇಲಾಖೆ, ಇದು ಅರಣ್ಯ ಇಲಾಖೆಗೆ ಸೇರಿದ ಜಾಗ ಇಲ್ಲಿಂದ ಮೊದಲು ಜಾಗ ಖಾಲಿ ಮಾಡುವಂತೆ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ದೇವಸ್ಥಾನದ ಅರ್ಚಕರಾದ ನಾರಾಯಣಸ್ವಾಮಿ ಅಲವತ್ತುಕೊಂಡಿದ್ದಾರೆ.

ಒಂದೆಡೆ ಆಂಜನೇಯಸ್ವಾಮಿ ದೇವಸ್ಥಾನ, ಮತ್ತೊಂದೆಡೆ ಅಂಬಾಜಿದುರ್ಗಾದ ಪ್ರಕೃತಿ ಸೌಂದರ್ಯ. ಪ್ರಕೃತಿ ಸೌಂದರ್ಯ ಸವಿಯಲು ಬೆಟ್ಟಕ್ಕೆ ಬಂದವರು ಆಂಜನೇಯಸ್ವಾಮಿ ದರ್ಶನ ಮಾಡ್ತಿದ್ರು. ಇನ್ನು ಕೆಲವರು ಆಂಜನೇಯಸ್ವಾಮಿ ದರ್ಶನಕ್ಕೆ ಬಂದು ಬೆಟ್ಟದಲ್ಲಿ ಪ್ರವಾಸ ಮಾಡ್ತಿದ್ರು. ಇದ್ರಿಂದ ದಿನೇ ದಿನೇ ಬೆಟ್ಟದಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿತ್ತು. ಆ ಕಾರಣವಾಗಿ ಅರಣ್ಯ ಇಲಾಖೆ ಇದೀಗ ನಿರ್ಬಂಧ ವಿಧಿಸಿದೆ. ಇದ್ರಿಂದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಚಿಂತಾಮಣಿಯ ಅಂಬಾಜಿದುರ್ಗ ಬೆಟ್ಟದ ಮೇಲಿರೋ ಆಂಜನೇಯಸ್ವಾಮಿ ದೇವಸ್ಥಾನ ವಿವಾದದ ಕೇಂದ್ರಬಿಂದುವಾಗಿದ್ದು, ಅರಣ್ಯ ಇಲಾಖೆ ಮತ್ತು ಅರ್ಚಕ ನಾರಾಯಣಸ್ವಾಮಿ ನಡುವೆ ದೇವಸ್ಥಾನವನ್ನು ಉಳಿಸಿಕೊಳ್ಳಲು ಹಗ್ಗಜಗ್ಗಾಟ ನಡೆದಿದೆ. ಕೊನೆಗೆ ಆಂಜನೇಯಸ್ವಾಮಿ ಯಾರ ಪಾಲಾಗ್ತಾನೆ ಕಾದು ನೋಡಬೇಕು.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ