ಬಾಂಬ್ ಸ್ಫೋಟಕ ಪತ್ತೆ ದಳದಲ್ಲಿದ್ದ ಶ್ವಾನ ಚಿತ್ರಾ ಸಾವು: ಕಂಬನಿ ಮಿಡಿದು ವಿದಾಯ ಹೇಳಿದ ಚಿಕ್ಕಬಳ್ಳಾಪುರ ಪೊಲೀಸರು

| Updated By: ಆಯೇಷಾ ಬಾನು

Updated on: Jun 29, 2022 | 6:28 PM

ಪೊಲೀಸ್ ಸಿಬ್ಬಂದಿ ಅರ್ಜುನ್ ಬಳಕಿ ಆಶ್ರಯ ಪಡೆದಿದ್ದ ಚಿತ್ರ ಶ್ವಾನ, ವಯೋ ಸಹಜ ಕಾರಣದಿಂದ ಇಂದು ಮೃತಪಟ್ಟಿದೆ. ಶ್ವಾನ ಶವದ ಮುಂದೆ ಶ್ರದ್ಧಾಂಜಲಿ ಸಲ್ಲಿಸಿ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

ಬಾಂಬ್ ಸ್ಫೋಟಕ ಪತ್ತೆ ದಳದಲ್ಲಿದ್ದ ಶ್ವಾನ ಚಿತ್ರಾ ಸಾವು: ಕಂಬನಿ ಮಿಡಿದು ವಿದಾಯ ಹೇಳಿದ ಚಿಕ್ಕಬಳ್ಳಾಪುರ ಪೊಲೀಸರು
Follow us on

ಚಿಕ್ಕಬಳ್ಳಾಪುರ: ಚಾರ್ಲಿ 777 ಸಿನಿಮಾದಲ್ಲಿ ಶ್ವಾನ ಚಾರ್ಲಿ, ತನ್ನ ನಟನೆಯಿಂದ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿ, ಪ್ರಥಮ ಭಾರಿಗೆ ಶ್ವಾನವೊಂದಕ್ಕೆ ಆಭಿಮಾನ ಹುಟ್ಟುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲೂ ಸಹ, ಸೇಮ್ ಟು ಸೇಮ್, ಚಾರ್ಲಿ ತರನೇ ಹೋಲುವ ಶ್ವಾನವೊಂದು ಎಲ್ಲರ ಪ್ರೀತಿ ಹಾಗೂ ದಕ್ಷತೆಗೆ ಕಾರಣವಾಗಿತ್ತು. ಆದ್ರೆ ಅದೇ ಪ್ರೀತಿಯ ಶ್ವಾನ ಇಂದು ಮೃತಪಟ್ಟ ಕಾರಣ ಅಲ್ಲಿಯ ಪೊಲೀಸ್ ಇಲಾಖೆ ಕಂಬನಿ ಮಿಡಿದು, ಮೃತಪಟ್ಟ ಶ್ವಾನಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 10 ವರ್ಷಗಳ ಕಾಲ ರಿಯಲ್ ಚಾರ್ಲಿಯಾಗಿದ್ದ ಚಿತ್ರಾ ಅನ್ನೊ ಶ್ವಾನವೊಂದು, ಈಗ ವಿಧಿವಶವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಯಾರಿಗೂ ಕಡಿಮೆಯಿಲ್ಲದ ಹಾಗೆ ಸ್ಪೋಟಕ ಪತ್ತೆ, ಬಾಂಬ್ ಪತ್ತೆ, ಅನುಮಾನಸ್ಪದ ವಸ್ತುಗಳ ಪತ್ತೆ ಮಾಡುವಲ್ಲಿ ಚಿತ್ರಾ ಖ್ಯಾತಿಯಾಗಿತ್ತು. ಪೊಲೀಸರುಚಿತ್ರ ಅನ್ನೊ ಶ್ವಾನಕ್ಕೆ ಗೌರವ ಘನತೆಯಿಂದ ನಡೆಸಿಕೊಂಡು ಅದರಿಂದ ಕೆಲಸ ತೆಗೆಯುತ್ತಿದ್ರು. ಇತ್ತೀಚೆಗೆ ಕಾಯಿಲೆಗೆ ಚಿತ್ರಾ ತುತ್ತಾದ ಹಿನ್ನಲೆ ಚಿತ್ರವನ್ನು ಅದರ ಕೇರ್ ಟೇಕರ್ ಅರ್ಜುನ್ ಅನ್ನೊ ಪೊಲೀಸ್ ಸಿಬ್ಬಂದಿಗೆ ಒಪ್ಪಿಸಿದ್ರು. ಆದ್ರೆ ವಯೋ ಸಹಜವಾಗಿ ಚಿತ್ರಾ ಇಂದು ಅರ್ಜುನ್ ಮನೆಯಲ್ಲಿ ಮೃತಪಟ್ಟಿದೆ, ಇದ್ರಿಂದ ಅರ್ಜುನ್ ಸೇರಿದಂತೆ ಅವರ ಕುಟುಂಬ ದುಃಖ ತಪ್ತರಾಗಿದ್ದಾರೆ.ಇದನ್ನೂ ಓದಿ: Paneer Facial: ಪನೀರ್​ ಫೇಷಿಯಲ್ ಮಾಡಿ, ನುಣುಪಾದ ಕಾಂತಿಯುತ ತ್ವಚೆ ಪಡೆಯಿರಿ

ಚಿತ್ರಾ ಅನ್ನೊ ಬಾಂಬ್ ಪತ್ತೆ ಶ್ವಾನ, ಪ್ರಧಾನಮಂತ್ರಿ ನರೆಂದ್ರ ಮೋದಿಯಿಂದ ಹಿಡಿದು ಗಣ್ಯಾತಿ ಗಣ್ಯರ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಬಾಗಿಯಾಗಿ, ಬಾಂಬ್ ಪತ್ತೆ, ಸ್ಪೋಟಕ ವಸ್ತುಗಳ ಪತ್ತೆ, ಅನುಮಾನಸ್ಪದ ವಸ್ತುಗಳ ಪತ್ತೆ ಕಾರ್ಯಚರಣೆಯಲ್ಲಿ ಭಾಗಿಯಾಗಿತ್ತು. ಇಂಡಿಯಾ ಪಾಕಿಸ್ತಾನ ಮ್ಯಾಚ್ ನಡೆದಾಗಲೂ ಪೊಲೀಸರ ಬಂದೋಬಸ್ತ್ ನಲ್ಲಿ ಚಿತ್ರ ಭಾಗಿಯಾಗಿ ಕ್ಯಾಶ್ ಪ್ರೈಜ್ ಪಡೆದಿತ್ತು, ವಿಭಾಗ ಮಟ್ಟದ ಚಾಣಾಕ್ಷತನ ಸ್ಪರ್ಧೆಯಲ್ಲು ಚಿತ್ರಾ ಬಹುಮಾನ ಪಡೆದು ಪೊಲೀಸ್ ಇಲಾಖೆಯಲ್ಲಿ ಖ್ಯಾತಿಯಾಗಿತ್ತು. ಇತ್ತೀಚೆಗೆ ಚಿತ್ರ ನಿವೃತ್ತಿಯಾದ ಕಾರಣ ಪೊಲೀಸ್ ಸಿಬ್ಬಂದಿ ವೈಯಕ್ತಿವಾಗಿ ಚಿತ್ರಾ ಶ್ವಾನವನ್ನು ಸಾಕುತ್ತಿದ್ರು. ಅರ್ಜುನ್ ಮನೆಯಲ್ಲಿ ಮನೆಯ ಸದಸ್ಯನಂತೆ ಇದ್ದ ಶ್ವಾನದ ಅಗಲಿಕೆಯಿಂದ ಕುಟುಂಬವಿಡಿ ಕಂಬನಿ ಮೀಡಿದಿದ್ದು, ಪೊಲೀಸರು ಎಸ್ಪಿ ಕಚೇರಿ ಆವರಣದಲ್ಲೆ ಗೌರವಯುತವಾಗಿ ಶವ ಸಂಸ್ಕಾರ ನಡೆಸಿದ್ರು.

ಪ್ರೀತಿಯ ಶ್ವಾನ ಚಿತ್ರಾಳ ಸಾವು, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯನ್ನ ದುಃಖತಪ್ತ ಮಾಡಿದೆ. ಪೊಲೀಸರೆಲ್ಲರೂ ಕಂಬನಿ ಮಿಡಿದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ನಂತರ ಮೃತ ಪಡುವ ಶ್ವಾನಕ್ಕೂ ಪ್ರತ್ಯೇಕ ರುದ್ರಭೂಮಿ ಮಾಡಬೇಕು ಎನ್ನುವುದು ಕೆಲವು ಪೊಲೀಸ್ ಸಿಬ್ಬದಿಗಳ ಅನಿಸಿಕೆಯಾಗಿದೆ.

ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ

Published On - 3:04 pm, Wed, 29 June 22