ಸ್ವಾತಂತ್ರ್ಯಕ್ಕೂ ಮುಂಚೆ ಕಾಂಗ್ರೆಸ್​ ಪಕ್ಷ ರಾಜಕೀಯ ಪಕ್ಷವೇ ಅಲ್ಲ: ಸಚಿವ ಡಾ.ಕೆ.ಸುಧಾಕರ್

| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2022 | 11:28 AM

ವೀಪಕ್ಷ ನಾಯಕ ಸಿದ್ದರಾಮಯ್ಯ ವೀರ ಸಾವರ್ಕರ್​ರವರ ಇತಿಹಾಸವನ್ನು ತಿಳಿದುಕೊಳ್ಳಲಿ. ಬಿಜೆಪಿ, ಆರ್.ಎಸ್.ಎಸ್. ವಿರುದ್ದ ಮಾತನಾಡುವ ಮುನ್ನ ಇತಿಹಾಸ ತಿಳಿದುಕೊಳ್ಳಲಿ.

ಸ್ವಾತಂತ್ರ್ಯಕ್ಕೂ ಮುಂಚೆ ಕಾಂಗ್ರೆಸ್​ ಪಕ್ಷ ರಾಜಕೀಯ ಪಕ್ಷವೇ ಅಲ್ಲ: ಸಚಿವ ಡಾ.ಕೆ.ಸುಧಾಕರ್
ಸಚಿವ ಕೆ.ಸುಧಾಕರ್​
Follow us on

ಚಿಕ್ಕಬಳ್ಳಾಪುರ: ಸ್ವಾತಂತ್ರ್ಯಕ್ಕೂ ಮುಂಚೆ ಕಾಂಗ್ರೇಸ್ ಪಕ್ಷ ರಾಜಕೀಯ ಪಕ್ಷವೇ ಅಲ್ಲ. ಕಾಂಗ್ರೇಸ್ ಪಕ್ಷ ರಾಜಕೀಯೇತರ ಪಕ್ಷವಾಗಿತ್ತು ಎಂದು ನಗರದಲ್ಲಿ ಟಿವಿ9ಗೆ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Dr K Sudhakar) ಹೇಳಿಕೆ ನೀಡಿದರು. ಸ್ವಾತಂತ್ರ್ಯ ಸಿಕ್ಕ ತಕ್ಷಣ ಗಾಂಧಿಜೀಯವರು ಕಾಂಗ್ರೇಸ್ ತ್ಯೇಜಿಸಲು ಹೇಳಿದ್ದರು. ಆದರೆ ಕಾಂಗ್ರೇಸ್​ನ ಬಳುವಳಿಯನ್ನೆ ಬಳಸಿಕೊಂಡು ಪೋಸ್ ನೀಡುತ್ತಿದ್ದಾರೆ. ಈಗಿನ ಕಾಂಗ್ರೇಸ್ಸಿಗರು ತಾವೆ ಸ್ವಾತಂತ್ರ್ಯ ಹೋರಾಟಗಾರರ ರೀತಿಯಲ್ಲಿ ಪೋಸ್ ನೀಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: BBMP Election: ಕಾವೇರುತ್ತಿದೆ ಬಿಬಿಎಂಪಿ ಚುನಾವಣೆ ಲೆಕ್ಕಾಚಾರ; ಬಿಜೆಪಿ-ಕಾಂಗ್ರೆಸ್​ಗೆ ಅತಂತ್ರ ಫಲಿತಾಂಶದ ಆತಂಕ

ಬಿಜೆಪಿ, ಆರ್.ಎಸ್.ಎಸ್. ವಿರುದ್ದ ಮಾತನಾಡುವ ಮುನ್ನ ಇತಿಹಾಸ ತಿಳಿದುಕೊಳ್ಳಲಿ

ವೀಪಕ್ಷ ನಾಯಕ ಸಿದ್ದರಾಮಯ್ಯ ವೀರ ಸಾವರ್ಕರ್​ರವರ ಇತಿಹಾಸವನ್ನು ತಿಳಿದುಕೊಳ್ಳಲಿ. ಬಿಜೆಪಿ, ಆರ್.ಎಸ್.ಎಸ್. ವಿರುದ್ದ ಮಾತನಾಡುವ ಮುನ್ನ ಇತಿಹಾಸ ತಿಳಿದುಕೊಳ್ಳಲಿ ಎಂದು ವೀಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ಮಾಡಿದರು. ವೀರ ಸಾವರ್ಕರ್ ಬಗ್ಗೆ ಮಾತನಾಡುವ ನೈತಿಕತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಇಲ್ಲ. ಸಮಾಜವಾದಿ ಹಿನ್ನಲೆಯ ಸಿದ್ದರಾಮಯ್ಯ ಹೊಗಳು ಭಟ್ರು ಆಗಿರುವುದು ದುರಾದೃಷ್ಟಕರ ಎಂದು ಹೇಳಿಕೆ ನೀಡಿದರು.

ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕಂಡ ಕನಸಷ್ಟೆ

ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕಂಡ ಕನಸು. ‘3ನೇ ಸಿಎಂ’ ಆಗುತ್ತಾರೆಂಬ ಕಾಂಗ್ರೆಸ್‌ ಟ್ವೀಟ್‌ಗೆ ಸಚಿವ ಡಾ.ಕೆ.ಸುಧಾಕರ್‌ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಚೀಫ್ ಮಿನಿಸ್ಟರ್ ಅಂದ್ರೆ ಚೀಟಿ ಮಿನಿಸ್ಟರ್. ಚೀಟಿ ಆಧಾರದ ಮೇಲೆ CM ಬದಲಾಯಿಸಿದ ಖ್ಯಾತಿ ಕಾಂಗ್ರೆಸ್ಸಿಗಿದೆ ಎಂದು ಕಾಂಗ್ರೆಸ್‌ಗೆ ಟ್ವೀಟ್‌ ಮೂಲಕ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ದಕ್ಷ ನಾಯಕತ್ವದಲ್ಲಿ BJP ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್‌ನ ಡಬಲ್‌ ಡೋರ್‌ ಬಸ್ಸಿನಿಂದ ಯಾರನ್ನು ಕೆಳಗಿಳಿಸ್ತಾರೆ. ಯಾರು, ಯಾರನ್ನು ಕೆಳಗಿಳಿಸುತ್ತಾರೆಂದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಬೆಳವಣಿಗೆಗಳ ಕುರಿತು ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದ್ದಾರೆ.

ಮತ್ತೊಂದು ಕಡೆ ಬೊಮ್ಮಾಯಿ ಕುರ್ಚಿ ಭದ್ರ ಅಂತಾ ಸಮರ್ಥಿಸಿ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಸಿಎಂ ಸ್ಥಾನದ ಘನತೆ ಗೌರವಗಳನ್ನು ಹಾಳುಗೆಡವಿದ್ದೇ ಕಾಂಗ್ರೆಸ್. ಕಾಂಗ್ರೆಸ್‌ ವರಿಷ್ಠರ ಮನೆ ಗೇಟ್‌ಕೀಪರ್‌ಗಳಂತೆ ಸಿಎಂಗಳ ವರ್ತನೆ ಇರುತ್ತೆ. ಗೇಟ್‌ಕೀಪರ್‌ಗಳ ರೀತಿ ಕಾಂಗ್ರೆಸ್‌ CMಗಳು ವರ್ತಿಸಿದ್ದು ಇತಿಹಾಸ ಎಂದು ಕಾಂಗ್ರೆಸ್ ಆಳ್ವಿಕೆಯ ಸಿಎಂಗಳ ಪರಿಸ್ಥಿತಿ ಬಗ್ಗೆ ಸುಧಾಕರ್ ವ್ಯಂಗ್ಯವಾಡಿದ್ದಾರೆ. ಸಿಎಂ ಗಾದಿ ಕನಸು ಕಾಣುತ್ತಿರುವ ರಾಜ್ಯದ ಇಬ್ಬರು ನಾಯಕರು ಈಗಾಗಲೇ ಗಾಂಧಿ ಕುಟುಂಬದ ಗೇಟ್‌ ಕಾಯ್ತಿರುವುದು ಗೊತ್ತಿದೆ ಎಂದು ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಡಾ.ಕೆ.ಸುಧಾಕರ್ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:30 am, Thu, 11 August 22