Crime News: ಆಸ್ತಿ ವಿವಾದ ಹಿನ್ನೆಲೆ ಮಹಿಳೆ ಹತ್ಯೆ; ದೇವಾಲಯದಿಂದ ಮನೆಗೆ ಬರುತ್ತಿದ್ದಾಗ ಘಟನೆ

Chikkaballapur News: ಆಸ್ತಿ ವಿವಾದ ಹಿನ್ನೆಲೆ ಕೊಲೆಗೆ ಸುಪಾರಿ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ಟೌನ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Crime News: ಆಸ್ತಿ ವಿವಾದ ಹಿನ್ನೆಲೆ ಮಹಿಳೆ ಹತ್ಯೆ; ದೇವಾಲಯದಿಂದ ಮನೆಗೆ ಬರುತ್ತಿದ್ದಾಗ ಘಟನೆ
ಸಾಂಕೇತಿಕ ಚಿತ್ರ
Edited By:

Updated on: Oct 15, 2021 | 10:55 PM

ಚಿಕ್ಕಬಳ್ಳಾಪುರ: ಆಸ್ತಿ ವಿವಾದ ಹಿನ್ನೆಲೆ ಚಾಕುವಿನಿಂದ ಇರಿದು ಮಹಿಳೆ ಹತ್ಯೆಗೈದ ದುರ್ಘಟನೆ ಚಿಕ್ಕಬಳ್ಳಾಪುರದ ಧರ್ಮಚತ್ರ ರಸ್ತೆಯ ಮನೆ ಬಳಿ ನಡೆದಿದೆ. ನಳಿನಿ (55) ಎಂಬವರು ಮೃತ ದುರ್ದೈವಿ. ಇಬ್ಬರು ದುಷ್ಕರ್ಮಿಗಳು ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಹಿಳೆಯನ್ನು ಬರ್ಬರ ಹತ್ಯೆಗೈದಿದ್ದಾರೆ. ದೇವಸ್ಥಾನಕ್ಕೆ ಹೋಗಿ ಮನೆಗೆ ಬರ್ತಿದ್ದಾಗ ನಳಿನಿ ಕೊಲೆ ಮಾಡಲಾಗಿದೆ.

ಘಟನೆ ತಿಳಿದು, ಆರೋಪಿಗಳನ್ನು ಹಿಡಿದು ಜನರು ಥಳಿಸಿದ್ದಾರೆ. ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಆಂಧ್ರ ಮೂಲದ ಹರಿ ಹಾಗೂ ಮುಖೇಶ ಪೊಲೀಸರ ವಶವಾಗಿದ್ದಾರೆ. ನಳಿನಿ ಪುತ್ರನೇ ಕೊಲೆಗೆ ಸುಪಾರಿ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆಸ್ತಿ ವಿವಾದ ಹಿನ್ನೆಲೆ ಕೊಲೆಗೆ ಸುಪಾರಿ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ಟೌನ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ
ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ ಮಾಡಿದ ಘಟನೆ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮುರುಡೇಶ್ವರದಲ್ಲಿ ಅರ್ಜುನ್, ಉಮೇಶ್, ಸೂರ್ಯ ಎಂಬ ಮೂವರು ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ಲೈಫ್​​ ಗಾರ್ಡ್, ಟೂರಿಸ್ಟ್ ಮಿತ್ರ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಸಲಾಗಿದೆ.

ಇದನ್ನೂ ಓದಿ: ರೌಡಿಶೀಟರ್‌ ಜೈ ಶ್ರೀರಾಮ್ ಕೊಲೆ ಪ್ರಕರಣ; ಶ್ರೀರಾಮ್ ಪತ್ನಿ ಶ್ರೀವಿದ್ಯಾ ಸೇರಿ 10 ಜನ ಅರೆಸ್ಟ್

ಇದನ್ನೂ ಓದಿ: Kerala Snake Bite Murder: ಹೆಂಡತಿಗೆ ಹಾವಿನಿಂದ ಕಚ್ಚಿಸಿ ಕೊಲೆ ಪ್ರಕರಣ; ಅಪರಾಧಿ​ಗೆ ಜೀವಾವಧಿ ಶಿಕ್ಷೆ ಪ್ರಕಟ