ಮನೆಯಲ್ಲಿ ಮಗು ಶವ, ಬಾವಿಯಲ್ಲಿ ತಾಯಿಯ ಶವ ಪತ್ತೆ: ವರದಕ್ಷಿಣೆ ಕಿರುಕುಳವೇ ಕಾರಣವಾಯ್ತಾ?

| Updated By: ಸಾಧು ಶ್ರೀನಾಥ್​

Updated on: Sep 23, 2023 | 3:00 PM

ಮಗುವನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಳೋ, ಇಲ್ಲಾ ಆಕೆಯ ಗಂಡ ಕೊಲೆ ಮಾಡಿದ್ದಾನೋ ಗೊತ್ತಿಲ್ಲ. ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಕೊಲೆ, ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ, ಆರೋಪಗಳಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮನೆಯಲ್ಲಿ ಮಗು ಶವ, ಬಾವಿಯಲ್ಲಿ ತಾಯಿಯ ಶವ ಪತ್ತೆ: ವರದಕ್ಷಿಣೆ ಕಿರುಕುಳವೇ ಕಾರಣವಾಯ್ತಾ?
ಮನೆಯಲ್ಲಿ ಮಗು ಶವ, ಬಾವಿಯಲ್ಲಿ ತಾಯಿಯ ಶವ ಪತ್ತೆ
Follow us on

ಕೌಟುಂಬಿಕ ಕಲಹ ಹಾಗೂ ವರದಕ್ಷಿಣೆ ಕಿರುಕುಳದಿಂದ (Dowry harassment) ಬೇಸತ್ತ ಗೃಹಿಣಿಯೋರ್ವಳು ಮನೆಯಲ್ಲೇ ಮಗುವನ್ನು ಕೊಂದು ಮನೆಯ ಬಳಿ ಇರುವ ಬಾವಿಗೆ ಹಾರಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆದರೆ ಆಕೆಯ ಗಂಡ ಹಾಗೂ ಅತ್ತೆಯೇ ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ. ಮನೆಯಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಶವ, ಮನೆಯ ಬಳಿ ಇರುವ ಪಾಳು ಬಾವಿಯಲ್ಲಿ 25 ವರ್ಷದ ಗೃಹಿಣಿಯ ಶವ ಕಂಡು ಬಂದಿರುವುದು ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುದಗೂರು ಗ್ರಾಮದ (gauribidanur, chikkaballapur) ಎಲೆ ಮನೆಗಳ ಹತ್ತಿರ.

ಗ್ರಾಮದ 25 ವರ್ಷದ ಸುಧಾಮಣಿ ಹಾಗೂ ಆಕೆಯ ಮೂರು ವರ್ಷದ ಹೆಣ್ಣು ಮಗು ಚಾರ್ವಿ ಮೃತ ದುರ್ದೈವಿಗಳು. ಗ್ರಾಮದ ರವಿ. ಜಿ ಐದು ವರ್ಷಗಳ ಹಿಂದೆ ವಲಪಿ ಗ್ರಾಮದ ಸುಧಾಮಣಿಯನ್ನು ಮದುವೆ ಮಾಡಿಕೊಂಡಿದ್ದ. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿತ್ತು. ಆದರೆ ಕೌಟುಂಬಿಕ ಕಲಹದಿಂದ ನೊಂದು ತಾಯಿ ತನ್ನ ಮಗುವನ್ನು ಕತ್ತುಹಿಸುಕಿ ಕೊಂದು ನಂತರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಮನೆಯ ಕೊಠಡಿಯಲ್ಲಿ ಮೂರು ವರ್ಷದ ಹೆಣ್ಣು ಮಗು ಚಾರ್ವಿಯ ಶವ ಇತ್ತು. ಮಗುವಿನ ಕತ್ತನ್ನು ಹಿಸುಕಿ ಕೊಲೆ ಮಾಡಲಾಗಿದೆ. ಪಕ್ಕದ ಬಾವಿಯ ಬಳಿ ಸುಧಾಮಣಿಯ ಚಪ್ಪಲಿಗಳಿದ್ದು ಬಾವಿಗೆ ಹಾರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಮೃತಳ ಸಂಬಂಧಿಗಳು ಅವರ ಅತ್ತೆ, ಹಾಗೂ ಮೃತಳ ಗಂಡನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ -ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಸಣ ಸೇರಿದ ಗೃಹಿಣಿ

ಮಗುವನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಳೋ, ಇಲ್ಲಾ ಆಕೆಯ ಗಂಡ ಕೊಲೆ ಮಾಡಿದ್ದಾನೋ ಗೊತ್ತಿಲ್ಲ. ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಕೊಲೆ, ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ, ಆರೋಪಗಳಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ನೀರಿನ ತೊಟ್ಟಿಯಲ್ಲಿ 2 ವರ್ಷದ ಹೆಣ್ಣು ಮಗು ಶವ ಪತ್ತೆ, ತಾತನ ಕೈವಾಡದ ಶಂಕೆ

ಚಿಕ್ಕಬಳ್ಲಾಪುರ: ಬಾಗೇಪಲ್ಲಿ ತಾಲೂಕಿನ ರೇಚನಾಯಕನಪಲ್ಲಿ ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಎರಡು ವರ್ಷದ ಹೆಣ್ಣು ಮಗು ಶವ ಪತ್ತೆಯಾಗಿದೆ. ಮಗು ಶ್ರೀಲಲಿತಾ ರೆಡ್ಡಿ ಸಾವಿನ ಹಿಂದೆ ಮಗುವಿನ ತಾತ ಸೋಮಶೇಖರ ರೆಡ್ಡಿಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಮೃತ ಶ್ರೀಲಲಿತಾ, ಕನ್ಯಾಕುಮಾರಿ ಹಾಗೂ ರಾಜಶೇಖರರೆಡ್ಡಿ ದಂಪತಿಯ ಮಗು. ಮಾವ ಸೋಮಶೇಖರರೆಡ್ಡಿಯ ಮೇಲೆ ಅನುಮಾನ ಪಟ್ಟು ಪಾತಪಾಳ್ಯ ಪೊಲೀಸ್ ಠಾಣೆಗೆ ಸೊಸೆಯಿಂದ ದೂರು ನೀಡಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆ ಮಾಡಿರಬಹುದೆಂದು ಆರೋಪಿಸಲಾಗಿದೆ.

ಮತ್ತಷ್ಟು ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sat, 23 September 23