ಚಿಕ್ಕಬಳ್ಳಾಫುರ, (ಅಕ್ಟೋಬರ್ 26): ಬಲ್ಕರ್ ಲಾರಿ ಹಾಗೂ ಟಾಟಾ ಸುಮೊ ನಡುವೆ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದ್ದು, ಸಾವಿನ ಜನ 12ಕ್ಕೆ ಏರಿಕೆಯಾಗಿದೆ. ಇಂದು (ಗುರುವಾರ) ನಸುಕಿನ ವೇಳೆ ಚಿಕ್ಕಬಳ್ಳಾಪುರ(Chikkaballapura) ಹೊರವೊಲಯದಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಮುಂದೆಯೇ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಬಲ್ಕರ್ ಲಾರಿಗೆ ಟಾಟಾ ಸುಮೊ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಸುಮೊದಲ್ಲಿದ್ದ 12 ಜನ ಮೃತಪಟ್ಟಿದ್ದಾರೆ.
ಟಾಟಾ ಸುಮೊ ಬಾಗೇಪಲ್ಲಿಯಿಂದ ಬೆಂಗಳೂರು ಕಡೆ ಹೋಗುತ್ತಿತ್ತು. ಆದ್ರೆ, ದಟ್ಟ ಮಂಜು ಹಿನ್ನೆಲೆಯಲ್ಲಿ ಟಾಟಾ ಸುಮೊ ಚಾಲಕನಿಗೆ ಸರಿಯಾಗಿ ರಸ್ತೆ ಕಾಣಿಸಿಲ್ಲ. ಇದರಿಂದ ರಸ್ತೆಬಂದಿ ನಿಂತಿದ್ದ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗುದ್ದಿ ರಭಸಕ್ಕೆ ಟಾಟಾ ಸುಮೊ ಮುಂದಿನ ಭಾಗ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಒಟ್ಟು 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 12 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಅವರ ಹೆಸರು ಹಾಗೂ ಅವರು ಎಲ್ಲಿಯವರು ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಇನ್ನು ಘಟನಾ ಸ್ಥಳದಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇನ್ನು ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಗು, ಮೂವರು ಮಹಿಳೆಯರು ಸೇರಿ 12 ಜನರು ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಆಂಧ್ರದ ಗೊರಂಟ್ಲ ನಿವಾಸಿಗಳು ಎನ್ನುವುದು ಗೊತ್ತಾಗಿದೆ. ಒಬ್ಬೊಬ್ಬರು ಒಂದೊಂದು ಊರಿನವರು ಎಂಬ ಮಾಹಿತಿ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
AP 02, CH 1021 ಹಿಂದೂಪುರ ಆರ್ಟಿಓನಲ್ಲಿ ನೋಂದಣಿಯ ಟಾಟಾ ಸುಮೊ, ಆಂಧ್ರದ ಗೋರಂಟ್ಲದಿಂದ ಬೆಂಗಳೂರಿನ ಬೊಮ್ಮನಹಳ್ಳಿ ತೆರಳುತ್ತಿತ್ತು. 7 ಸೀಟಿನ ಸಾಮರ್ಥ್ಯದ ಸುಮೊದಲ್ಲಿ 13 ಜನ ಪ್ರಯಾಣ ಪ್ರಯಾಣಿಸುತ್ತಿದ್ದರು. ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು ಇದೀಗ ಮಸಣ ಸೇರಿದ್ದುಮ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Thu, 26 October 23