Pitru Paksha Effect: ಹೂ ಬೆಲೆ 5-10 ರೂಗೆ ಕುಸಿತ, ತೋಟದಲ್ಲೇ ಬಾಡುತ್ತಿದೆ ಸೇವಂತಿ
ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯಲ್ಲಿ ಹೂಗಳನ್ನು ಕೊಂಡು ಕೊಳ್ಳುವವರಿಲ್ಲದೆ ಹೂ ಗಳು ತಿಪ್ಪೆ ಪಾಲಾಗಿವೆ. ರಾಶಿ ರಾಶಿ, ಲೋಡ್ ಗಟ್ಟಲೆ ಹೂ ಗಳನ್ನು ತಿಪ್ಪೆಗೆ ಸುರಿದು ಹೂ ಬೆಳೆಗಾರರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂರು ಮುನ್ನೂರು ರೂಪಾಯಿ ಬೆಲೆ ಇದ್ದ ಹೂವಿನ ಬೆಲೆ ಈಗ 10 ರೂಪಾಯಿ 20 ರೂಪಾಯಿಗೆ ಕುಸಿದಿದೆ. ಸೇವಂತಿ, ಚೆಂಡು ಹೂ ಯ್ಯಾರು ಕೇಳುತ್ತಿಲ್ಲ. ಮಾರುಕಟ್ಟೆಯಲ್ಲಿ ಹೂ ಮಾರಾಟವಾಗ್ತಿಲ್ಲ.
ಚಿಕ್ಕಬಳ್ಳಾಪುರ, ಸೆ.22: ಗೌರಿ-ಗಣೇಶ ಹಬ್ಬದ ವೇಳೆ ಗಗನಕ್ಕೇರಿದ್ದ ಹೂವಿನ (Flowers) ಬೆಲೆ ಈಗ ಪಾತಾಳಕ್ಕೆ ಬಿದ್ದಿದೆ. ಪಿತೃಪಕ್ಷ (Pitru Paksha) ಹಿನ್ನಲೆ ಹೂ ಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯಲ್ಲಿ ಹೂಗಳನ್ನು ಕೊಂಡು ಕೊಳ್ಳುವವರಿಲ್ಲದೆ ಹೂ ಗಳು ತಿಪ್ಪೆ ಪಾಲಾಗಿವೆ. ರಾಶಿ ರಾಶಿ, ಲೋಡ್ ಗಟ್ಟಲೆ ಹೂ ಗಳನ್ನು ತಿಪ್ಪೆಗೆ ಸುರಿದು ಹೂ ಬೆಳೆಗಾರರು ಆಕ್ರೋಶ ಹೊರ ಹಾಕಿದ್ದಾರೆ. ಹೂ ಬೆಳೆ ಹಾಗೂ ಹೂ ಮಾರುಕಟ್ಟೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದಲ್ಲೇ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಎರಡು ಎಕರೆಯಲ್ಲಿ ತರೇವಾರಿ ಸೇವಂತಿ ಹೂ ಬೆಳೆದಿದ್ದ ರೈತ ಶೇಖರ್ ಅವರು ಟಿವಿ9 ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈಗ ಕೆ.ಜಿ ಹೂ ಬೆಲೆ 5 ರೂಪಾಯಿ ಹತ್ತು ರೂಪಾಯಿ ಆಗಿದೆ. ಪ್ರಸ್ತುತ ಬೆಲೆಗೆ ಕೂಲಿಯೂ ಹೊರಡಲ್ಲ, ಮಾಡಿದ ಸಾಲಾ ತೀರಿಸಲು ಜಮೀನು ಅಡ ಇಡುವಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಇನ್ನು ಹೂ ಗಳ ಬೆಲೆ ಇಳಿಕೆ ಸಂಬಂಧ ಮಾತನಾಡಿದ ಹೂವಿನ ವರ್ತಕರ ಸಂಘದ ಅಧ್ಯಕ್ಷ ರವಿಂದ್ರ ಅವರು, ಪಿತೃಪಕ್ಷ ಹಿನ್ನಲೆ ಶುಭ ಸಮಾರಂಭಗಳು ನಡೆಯುತ್ತಿಲ್ಲ. ದೇಶದಾದ್ಯಂತ ಹೂಗಳಿಗೆ ಬೇಡಿಕೆಯಿಲ್ಲ. ಇನ್ನೂರು ಮುನ್ನೂರು ರೂಪಾಯಿ ಬೆಲೆ ಇದ್ದ ಹೂವಿನ ಬೆಲೆ ಈಗ 10 ರೂಪಾಯಿ 20 ರೂಪಾಯಿಗೆ ಕುಸಿದಿದೆ. ಸೇವಂತಿ, ಚೆಂಡು ಹೂ ಯ್ಯಾರು ಕೇಳುತ್ತಿಲ್ಲ. ಮಾರುಕಟ್ಟೆಯಲ್ಲಿ ಹೂ ಮಾರಾಟವಾಗ್ತಿಲ್ಲ. ಇರುವ ಹೂಗಳನ್ನು ಬಿಸಾಡುತ್ತಿದ್ದೇವೆ ಎಂದು ರವೀಂದ್ರ ಅವರು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದ ವಿವಿಧ ಕಂಪನಿಗಳಲ್ಲಿ ತಯಾರಾಗುವ ತುಪ್ಪ ಪರೀಕ್ಷಿಸಲು ನಿರ್ಧರಿಸಿದ ಸರ್ಕಾರ
ಜನವರಿಯಲ್ಲಿ ಹೂವಿನ ಅಂಟು ನಾಟಿ ಮಾಡಿದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ತೋಟದ ತುಂಬಾ ಹೂ ಫಸಲು ಬಿಡುತ್ತದೆ. ಈ ಹೂವುಗಳಿಗೆ ಗೌರಿ ಗಣೇಶ ಹಬ್ಬ, ವರಲಕ್ಷ್ಮಿ ಹಾಗೂ ಓಣಂ ಹಬ್ಬಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಕೆ.ಜಿ ಹೂವಿಗೆ ₹200-₹300 ಇತ್ತು. ಹಬ್ಬದ ಬಳಿಕ ಇದೀಗ ₹25-30ಕ್ಕೆ ಇಳಿದಿದೆ. ಇದರಿಂದ ರೈತರು ಮಾಡಿದ ಖರ್ಚಿನ ಹಣವು ಸಹ ಬಾರದಂತಾಗಿದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆಯಿದ್ದಾಗ ಬೆಲೆ ಇಲ್ಲ ಎನ್ನುವ ಸ್ಥಿತಿ ಇವರದ್ದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:17 am, Sun, 22 September 24