ಪ್ರಕೃತಿ ಪ್ರಿಯರಿಗೆ ಗುಡ್ ನ್ಯೂಸ್; ಡಿಸೆಂಬರ್ 1ರಿಂದ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ

Nandi Hills: ರಸ್ತೆ ಕೊಚ್ಚಿ ಹೋಗಿ ಬಂದ್ ಆಗಿದ್ದ ನಂದಿಗಿರಿಧಾಮ ಪ್ರವೇಶಕ್ಕೆ ಇದೀಗ ಅವಕಾಶ ಸಿಕ್ಕಿದೆ. ನಾಳೆಯಿಂದ ನಂದಿ ಬೆಟ್ಟಕ್ಕೆ ಪ್ರವೇಶ ಆರಂಭವಾಗುತ್ತಿದ್ದು, ಈ ಬಗ್ಗೆ ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿ ಲತಾ ಆರ್ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ಪ್ರಕೃತಿ ಪ್ರಿಯರಿಗೆ ಗುಡ್ ನ್ಯೂಸ್; ಡಿಸೆಂಬರ್ 1ರಿಂದ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ
ನಂದಿ ಬೆಟ್ಟ
Updated By: sandhya thejappa

Updated on: Nov 30, 2021 | 11:05 AM

ಚಿಕ್ಕಬಳ್ಳಾಪುರ: ಇದು ಪ್ರಕೃತಿ ಪ್ರಿಯರಿಗೆ ಸಿಹಿ ಸುದ್ದಿ. ರಸ್ತೆ ಕೊಚ್ಚಿ ಹೋಗಿ ಬಂದ್ ಆಗಿದ್ದ ನಂದಿಗಿರಿಧಾಮ ಪ್ರವೇಶಕ್ಕೆ ಇದೀಗ ಅವಕಾಶ ಸಿಕ್ಕಿದೆ. ನಾಳೆಯಿಂದ ನಂದಿ ಬೆಟ್ಟಕ್ಕೆ ಪ್ರವೇಶ ಆರಂಭವಾಗುತ್ತಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡುವರೆ ತಿಂಗಳುಗಳ ಕಾಲ ಬೆಟ್ಟಕ್ಕೆ ಹೋಗಲು ಅವಕಾಶವಿರಲಿಲ್ಲ. ಈ ಬಗ್ಗೆ ಬಂದ್ ಆಗಿತ್ತು. ಹೀಗಾಗಿ ಪ್ರವಾಸಿಗರಿಗೆ ತೀರ ಬೇಸರವಾಗಿತ್ತು. ಆದರೆ ಜಿಲ್ಲಾಧಿಕಾರಿ ನಾಳೆಯಿಂದ ಬೆಟ್ಟಕ್ಕೆ ಹೋಗಲು ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಅಂತ ತಿಳಿಸಿದ್ದಾರೆ.

ವೀಕೆಂಡ್​ನಲ್ಲಿ ನಂದಿ ಬೆಟ್ಟದತ್ತ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟದಲ್ಲಿ ಹೋಟೆಲ್, ರೂಮ್​ಗಳ ಬುಕಿಂಗ್ ಮಾಡಿದವರಿಗೆ ಮಾತ್ರ ಶನಿವಾರ ಭಾನುವಾರ ಅವಕಾಶ ಇದೆ ಅಂತ ಜಿಲ್ಲಾಧಿಕಾರಿ ಲತಾ ಆರ್ ತಿಳಿಸಿದ್ದಾರೆ.

ನಂದಿಗಿರಿಧಾಮ ಬೆಂಗಳೂರಿಗರ ಪಾಲಿಗೆ ವಿಕೇಂಡ್ ಹಾಟ್​ಸ್ಪಾಟ್​. ಆದರೆ ಭಾರಿ ಮಳೆಗೆ ನಂದಿ ಬೆಟ್ಟದ ರಸ್ತೆ ಮಾರ್ಗ ಬಂದ್ ಆಗಿ ಪ್ರವಾಸಿಗರ ಪಾಲಿಗೆ ನಂದಿ ಬೆಟ್ಟ ದೂರವಾಗಿತ್ತು. ಕೊಚ್ಚಿ ಹೋಗಿದ್ದ ರಸ್ತೆ ಮರು ನಿರ್ಮಾಣ ಕಾರ್ಯ ನವೆಂಬರ್ 11ಕ್ಕೆ ಮುಕ್ತಾಯವಾಗಿತ್ತು.

ಆಗಸ್ಟ್ 24ರ ರಾತ್ರಿ ನಂದಿ ಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿ, ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಅಂದಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಬಂದ್ ಆಗಿತ್ತು. ಇದರಿಂದ ರಾಜ್ಯ ಸರ್ಕಾರ 80 ಲಕ್ಷ ರೂ. ವೆಚ್ಚ ಮಾಡಿ, ಕೊಚ್ಚಿ ಹೋದ ರಸ್ತೆಯ ಮರು ನಿರ್ಮಾಣ ಕಾರ್ಯ ಮಾಡಿದೆ. ನಾಳೆಯಿಂದ ಪ್ರವಾಸಿಗರು ನಂದಿ ಬೆಟ್ಟಕ್ಕೆ ಆಗಮಿಸಬಹುದು.

ಇದನ್ನೂ ಓದಿ

ಎರಡು ದಿನದಲ್ಲಿ ಮದುವೆಯಿಟ್ಟುಕೊಂಡು ಫೇಸ್​ಬುಕ್​ನಲ್ಲಿ​ ಅವಹೇಳನಕಾರಿ ಪೋಸ್ಟ್; ವರನ ವಿರುದ್ಧ ದೂರು ದಾಖಲು

ಹಾವೇರಿ: ಕೊಬ್ಬರಿ ಹೋರಿ ಬೆದರಿಸುವ ಹಬ್ಬದಲ್ಲಿ ಅವಗಢ; ಹೋರಿ ದಾಳಿಯಿಂದ 9 ಜನ ಆಸ್ಪತ್ರೆಗೆ ದಾಖಲು

Published On - 9:22 am, Tue, 30 November 21