Kaiwara: ಕೈವಾರದಲ್ಲಿ ಗಮನ ಸೆಳೆದ ಕುಬ್ಜರ ಅಪರೂಪದ ಮದುವೆ -ಜೋಡಿ ಶ್ರೀ ಕ್ಷೇತ್ರದಲ್ಲಿಯೇ ವಿವಾಹವಾಗಿದ್ದು ಏಕೆ!?
ವಿಷ್ಣುಚಾರಿ ಹಾಗೂ ಜ್ಯೋತಿ ಇಬ್ಬರು ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಸ್ನೇಹದಿಂದ ಕೂಡಿರುವಾಗಲೇ ವಿಷ್ಣು, ಜ್ಯೋತಿ ಮನೆಯವರಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಎರಡು ಮನೆಯರು ಕುಳಿತು ಮಾತನಾಡಿ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಶ್ರೀ ಕ್ಷೇತ್ರ ಅಂದರೆ ಯೋಗಿನಾರಾಯೇಣರ ತಪೋವನ, ಜಪ ತಪ ಭಕ್ತಿ ಸುಧೆಯ ಜೊತೆ ಸಾಮೂಹಿಕ ಮದುವೆ, ಉಚಿತ ಮದುವೆಗೆ ಹಸರುವಾಸಿ. ಇನ್ನೂ ಕೈವಾರ ಕ್ಷೇತ್ರದಲ್ಲಿ ಭಾನುವಾರ ನಡೆದ ಮದುವೆಯೊಂದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಯಿತು. ದೇವಸ್ಥಾನಕ್ಕೆ ಬಂದವರು ನೂತನ ವಧು ವರರಿಗೆ ಆಶಿರ್ವಾದ ಮಾಡಿ ನೂರು ಕಾಲ ಚೆನ್ನಾಗಿರಲಿ ಎಂದು ಹಾರೈಸಿದರು. ಬೆಂಗಳೂರಿನ ಟಿ ದಾಸರಹಳ್ಳಿ ಮೂಲದ ಹಾಗೂ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿರುವ 3 ಅಡಿ 8 ಇಂಚು ಎತ್ತರದ 28 ವರ್ಷದ ಯುವಕ ವಿಷ್ಣುಚಾರಿ ಹಾಗೂ ಕೋಲಾರ ತಾಲೂಕಿನ ಕೋಡಿರಾಮಸಂದ್ರದ ನಿವಾಸಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 3 ಅಡಿ 5 ಇಂಚು ಎತ್ತರ ಯುವತಿ ಜ್ಯೋತಿ ವಿವಾಹವಾಗಿದ್ದಾರೆ.
ಕುಬ್ಜ ಜೋಡಿ ಪರಿಚಯವಾದದ್ದು ಹೇಗೆ? ವಿಷ್ಣುಚಾರಿ ಹಾಗೂ ಜ್ಯೋತಿ ಇಬ್ಬರು ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಸ್ನೇಹದಿಂದ ಕೂಡಿರುವಾಗಲೇ ವಿಷ್ಣು, ಜ್ಯೋತಿ ಮನೆಯವರಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಎರಡು ಮನೆಯರು ಕುಳಿತು ಮಾತನಾಡಿ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ.
ಕೈವಾರದಲ್ಲಿ ಮದುವೆ ಶ್ರೀ ಕ್ಷೇತ್ರ ಯೋಗಿನಾರೇಯಣರ ತೋಪೋಭೂಮಿಯಾಗಿರುವ ಕೈವಾರದಲ್ಲಿ ಸರಳವಾಗಿ ಅದರಲ್ಲೂ ಉಚಿತ ಮದುವೆಗಳು ನಡೆಯುವುದು ಸರ್ವೆ ಸಾಮಾನ್ಯ. ಇನ್ನೂ ಕೈವಾರದ ದೇವಸ್ಥಾನದಲ್ಲಿ ನಡೆದ ಮದುವೆಗಳು ಯಶಸ್ವಿಯಾಗಿ ನೇರವೇರುತ್ತವೆ. ಜೀವನದಲ್ಲಿ ಯಾವುದೇ ಅಡೆ ತಡೆ ಸಮಸ್ಯೆಗಳು ಉದ್ಭವಿಸುವುದಿಲ್ಲ ಎನ್ನುವ ನಂಬಿಕೆ ಹಿನ್ನೆಲೆ ಕೈವಾರದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಕೈವಾರದಲ್ಲಿ ಗಮನ ಸೆಳೆದ ಕುಬ್ಜರ ಮದುವೆ! ಕೈವಾರ ದೇವಸ್ಥಾನದಲ್ಲಿ ಕಂಡ ಅಪರೂಪದ ಜೋಡಿಗಳ ಮದುವೆಯನ್ನು ನೋಡಿದ ದೇವಸ್ಥಾನಕ್ಕೆ ಬಂದ ಭಕ್ತರು, ಇದೇನು ಮಕ್ಕಳ ಮದುವೆಯೋ ಏನೊ ಎಂದು ಆಶ್ಚರ್ಯಪಟ್ಟಿದ್ದಾರೆ. ಆ ನಂತರ ಹತ್ತಿರ ಬಂದು ನೋಡಿದಾಗ ಸತ್ಯ ತಿಳಿದಿದೆ. ದೇವಸ್ಥಾನದಲ್ಲಿ ಕುಬ್ಜ ಜೋಡಿಯ ಮದುವೆ ನೋಡಿ ಪುಳಕಿತಗೊಂಡ ಜನರು, ಜೋಡಿಯ ದಾಂಪತ್ಯ ಜೀವನ ಅನ್ಯೋನ್ಯವಾಗಿ, ಸಂತೋಷವಾಗಿರಲಿ ಎಂದು ಹಾರೈಸಿದರು. ಮತ್ತೊಂದೆಡೆ ವಧು-ವರರ ಕಡೆಯ ಬಂದು ಬಳಗವೆಲ್ಲಾ ದೇವಸ್ಥಾನದಲ್ಲಿ ಸೇರಿ ಸಂತಸ ಸಂಭ್ರಮಿಸಿದರು ಶನಿವಾರ ರಾತ್ರಿ ಮದುವೆಯ ಆರತಕ್ಷತೆ ನೇರವೇರಿಸಿದ್ದು, ಭಾನುವಾರ (ನವೆಂಬರ್ 28) ಬೆಳಿಗ್ಗೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ನೆರವೇರಿಸಿದರು.
ವರದಿ: ಭೀಮಪ್ಪ ಪಾಟೀಲ್
ಇದನ್ನೂ ಓದಿ: ವಿವಾಹ ಪಂಚಮಿ ದಿನ ವಿವಾಹ ಮುಹೂರ್ತಕ್ಕೆ ಸುಯೋಗ! ಆದರೂ ಅಂದು ಮದುವೆ ಮಾಡಲು ಜನ ಹಿಂಜರಿಯುತ್ತಾರೆ, ಏಕೆ?
ಎಸ್. ನಾರಾಯಣ್ ಪುತ್ರ ಪಂಕಜ್ ವಿವಾಹ; ಮೈಸೂರಿನಲ್ಲಿ ಆಪ್ತರ ಸಮ್ಮುಖದಲ್ಲಿ ನಡೆಯಿತು ಮದುವೆ
Published On - 11:44 am, Mon, 29 November 21