Chinatamani: ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಡೆಂಗ್ಯೂಗೆ ಬಾಲಕಿ ಬಲಿ, 47 ಡೆಂಗ್ಯೂ ಪ್ರಕರಣಗಳು ಪತ್ತೆ

| Updated By: ಸಾಧು ಶ್ರೀನಾಥ್​

Updated on: Jul 22, 2022 | 7:50 PM

Dengue: ಕೊರೊನಾ ಮಹಾಮಾರಿ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಈಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಭೀತಿ ಎದುರಾಗಿದ್ದು... ಸೊಳ್ಳೆಗಳು ಕಂಡ್ರೆ ಜನ ಭಯ ಭೀತರಾಗ್ತಿದ್ದಾರೆ ಎಂದು ಮೃತ ಬಾಲಕಿಯ ಅಕ್ಕ ಚೈತ್ರಾ ಆತಂಕ ವ್ಯಕ್ತಪಡಿಸಿದ್ದಾರೆ.

Chinatamani: ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಡೆಂಗ್ಯೂಗೆ ಬಾಲಕಿ ಬಲಿ, 47 ಡೆಂಗ್ಯೂ ಪ್ರಕರಣಗಳು ಪತ್ತೆ
ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಡೆಂಗ್ಯೂಗೆ ಬಾಲಕಿ ಬಲಿ, 47 ಡೆಂಗ್ಯೂ ಪ್ರಕರಣಗಳು ಪತ್ತೆ
Follow us on

ಕೊರೊನಾ ಕಡಿಮೆ ಆಯಿತು ಅನ್ನೊವಷ್ಟರಲ್ಲಿ… ಸ್ವತಃ ಆರೋಗ್ಯ ಸಚಿವರ ತವರು ಕ್ಷೇತ್ರದಲ್ಲಿ ಡೆಂಗ್ಯೂ ಜ್ವರ ಉಲ್ಬಣವಾಗಿದ್ದು, ಓರ್ವ ಬಾಲಕಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿ, ಸಾರ್ವಜನಿಕರಲ್ಲಿ ಆತಂಕ ಮೂಡುವಂತೆ ಮಾಡಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಹೆಚ್ಚಾಗಿ ಜನ ಜೀವನ ಏರುಪೇರು ಆಗುವಂತೆ ಆಗಿತ್ತು, ಇತ್ತಿಚಿಗೆ ತಾನೆ ಕೊರೊನಾ ಕಡಿಮೆಯಾಗಿ ಜನ ಜೀವನ ಸುಧಾರಿಸಿಕೊಳ್ತಿರುವಾಗಲೇ… ಈಗ ಡೆಂಗ್ಯೂ ಜ್ವರ ಉಲ್ಬಣವಾಗಿದ್ದು ಅದರಲ್ಲೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (K Sudhakar) ತವರು ಜಿಲ್ಲೆಯಲ್ಲಿ ಜ್ವರ ಕಾಣಿಸಿಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಅಧಿಕೃತವಾಗಿ 73 ಡೆಂಗ್ಯೂ ಜ್ವರ ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯ ಚಿಂತಾಮಣಿ ನಗರದ (Chinatamani) 20ನೇ ವಾರ್ಡನಲ್ಲಿ 5 ವರ್ಷದ ಬಾಲಕಿ ನಿವೇದಿತಾ ಈಗ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾಳೆ.

ಇನ್ನು, ಚಿಕ್ಕಬಳ್ಳಾಪುರ ನಗರದಲ್ಲಿ 33 ಪ್ರಕರಣಗಳು, ಗ್ರಾಮಾಂತರದಲ್ಲಿ 14 ಪ್ರಕರಣಗಳು ಸೇರಿದಂತೆ ಶಿಡ್ಲಘಟ್ಟದಲ್ಲಿ 9, ಚಿಂತಾಮಣಿಯಲ್ಲಿ 3, ಬಾಗೇಪಲ್ಲಿಯಲ್ಲಿ 6, ಗೌರಿಬಿದನೂರಿನಲ್ಲಿ 8 ಡೆಂಗ್ಯೂ ಜ್ವರ ಪ್ರಕಣಗಳು ಪತ್ತೆಯಾಗಿವೆ. ಇದ್ರಿಂದ ಅಲರ್ಟ್ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ… ಡೆಂಗ್ಯೂ ಜ್ವರದ ಟೆಸ್ಟಿಂಗ್ ಹೆಚ್ಚಳ ಮಾಡಿದೆ. ಇದ್ರಿಂದ ಸಂಶಯ ಬಂದ ಜ್ವರದ ಪ್ರಕರಣಗಳನ್ನು ಕಡೆಗಣಿಸದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ (Chikkaballapur DHO -ಡಿ.ಎಚ್.ಓ) ಎಸ್.ಎಸ್. ಮಹೇಶಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕೊರೊನಾ ಮಹಾಮಾರಿ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಈಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಭೀತಿ ಎದುರಾಗಿದ್ದು… ಸೊಳ್ಳೆಗಳು ಕಂಡ್ರೆ… ಜನ ಭಯ ಭೀತರಾಗ್ತಿದ್ದಾರೆ ಎಂದು ಮೃತಳ ಅಕ್ಕ ಚೈತ್ರಾ ಆತಂಕ ವ್ಯಕ್ತಪಡಿಸಿದ್ದಾರೆ.

– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ