ಚಿಕ್ಕಬಳ್ಳಾಪುರ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ 2 ಲೋಡ್ ಸೀರೆಗಳನ್ನು (sarees) GST ಅಧಿಕಾರಿಗಳು ಜಪ್ತಿ (seized) ಮಾಡಿದ್ದಾರೆ. ಬೆಂಗಳೂರಿನಿಂದ ಚಿಂತಾಮಣಿಗೆ ಟೆಂಪೋದಲ್ಲಿ ಸಾಗಿಸುತ್ತಿದ್ದಾಗ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ಬಳಿ ದಾಳಿ ಮಾಡಿ ಜಪ್ತಿ ಮಾಡಲಾಗಿದೆ. ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರಗೌಡ ಎಂಬುವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿಯನ್ನು ಪೊಲೀಸರು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ಪೋಸ್ಟ್ನಲ್ಲಿ ಜಪ್ತಿ ಮಾಡಿದ್ದಾರೆ. ಅಂಕೋಲಾದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರಿನಲ್ಲಿ 15 ಲಕ್ಷ ರೂ. ಹಣ ಪತ್ತೆ ಆಗಿದೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಚೆಕ್ ಪೋಸ್ಟ್ ಸಿಬ್ಬಂದಿಗಳು ತಂದಿದ್ದಾರೆ. ಸ್ಥಳಕ್ಕೆ ತಹಶಿಲ್ದಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಕಾರು ಚಾಲಕನನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ.
ಬಾಗಲಕೋಟೆ: ಅಕ್ರಮವಾಗಿ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಮೇಲೆ ಎಸ್.ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು, 60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳನ್ನು ಸೀಜ್ ಮಾಡಲಾಗಿದೆ. ಜಿಲ್ಲೆಯ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ದಾಳಿ ಮಾಡಲಾಗಿದೆ. ಇಸ್ತ್ರಿ ಪೆಟ್ಟಿಗೆ ಸಾಗಿಸುತ್ತಿದ್ದ ವಾಹನದ ಚಾಲಕನ ಬಳಿ ಸರಿಯಾದ ಬಿಲ್ ಇಲ್ಲ ಎಂಬ ಅನುಮಾನದ ಮೇಲೆ ದಾಳಿ ಮಾಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿದೆ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ: ಅಮಿತ್ ಶಾ ವಾಗ್ದಾಳಿ
ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಇಸ್ತ್ರಿ ಪೆಟ್ಟಿಗಳನ್ನು ತರಿಸಲಾಗಿದೆ ಎಂಬ ಆರೋಪಿಸಲಾಗಿದೆ. ಇಸ್ತ್ರಿ ಪೆಟ್ಟಿಗೆ ಯಾರಿಗೆ ಸೇರಿದ್ದು, ಎಲ್ಲಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ: ಮತದಾರರಿಗೆ ಹಂಚಲು ಸ್ಟೀಲ್ ಪಾತ್ರೆಗಳ ಸಂಗ್ರಹ ಮಾಡಿದ್ದ ಗೋಡೊನ್ ಮೇಲೆ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಸ್ಟೀಲ್ ಬಾಕ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ಘಟನೆ ನಡೆದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಬೇಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹುಲ್ಲಹಳ್ಳಿ ಸುರೇಶ್ಗೆ ಸೇರಿದ್ದು ಎನ್ನಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇಂದಿನಿಂದ ಎರಡು ದಿನ ಹಳೆಬೀಡಿನಲ್ಲಿ ಮಹಾ ರುದ್ರಯಾಗ ಮತ್ತು ಗಿರಿಜಾ ಕಲ್ಯಾಣ ಕಾರ್ಯಕ್ರಮವನ್ನು ಎಚ್.ಕೆ.ಸುರೇಶ್ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಯಾರೂ ಗುಂಡಾ ನಾಯಕರಿಲ್ಲ: ಡಿ.ಕೆ.ಶಿವಕುಮಾರ್ ಆರೋಪಕ್ಕೆ ಯತ್ನಾಳ್ ತಿರುಗೇಟು
ಈ ಕಾರ್ಯಕ್ರಮಕ್ಕೆ ಬರುವ ಮಹಿಳೆಯರಿಗೆ ಉಡುಗೊರೆಯಾಗಿ ವಿತರಣೆ ಮಾಡಲು ಸ್ಟೀಲ್ ಪಾತ್ರೆ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಕಲ್ಯಾಣ ಮಂಟಪದ ಹಿಂಬದಿಯ ಗೊಡೋನ್ನಲ್ಲಿ ಪಾತ್ರೆ ಸಂಗ್ರಹಿಸಲಾಗಿದೆ. ಖಚಿತ ಮಾಹಿತಿ ಮೇಲೆ ತಹಸಿಲ್ದಾರ್ ಮಮತ ಮತ್ತು ಹಳೆಬೀಡು ಇನ್ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿವೇಳೆ ಪಾತ್ರೆಗಳ ಜೊತೆಗೆ ಸುರೇಶ್ ಭಾವಚಿತ್ರಗಳಿರುವ ಸ್ಟಿಕ್ಕರ್ ಕೂಡ ಪತ್ತೆಯಾಗಿದೆ. ಮತದಾರರಿಗೆ ಉಡುಗೊರೆ ನೀಡಿ ಆಮಿಷವೊಡ್ಡುತ್ತಿರುವ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Sun, 26 March 23