ಹೆಚ್ಚಿದ ಟೊಮೇಟೊ ಬೆಲೆ; ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊ ಕದ್ದ ಕಳ್ಳರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 18, 2024 | 9:44 PM

ಕೆ.ಜಿ ಟೊಮೇಟೊ ಬೆಲೆ, ನೂರರ ಗಡಿ ದಾಟುತ್ತಿದ್ದಂತೆ ಒಂದೆಡೆ ರೈತರಿಗೆ ಖುಷಿ ತಂದರೆ, ಮತ್ತೊಂದೆಡೆ ಟೊಮೇಟೊ ತೋಟ ಹಾಗೂ ಟೊಮೇಟೊ ಮಂಡಿಗಳಿಗೆ ಕಳ್ಳರ ಕಾಟ ಶುರುವಾಗಿದೆ. ಮಾರಾಟಕ್ಕೆ ಎಂದು ಮಂಡಿ ಬಳಿ ಸಂಗ್ರಹಿಸಿಟ್ಟಿದ್ದ ಟೊಮೇಟೊವನ್ನು ಬಿಡದ ಕಳ್ಳರು, ರಾತ್ರೋರಾತ್ರಿ ಕೆಂಪು ಸುಂದರಿ ಟೊಮೇಟೊ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೆಚ್ಚಿದ ಟೊಮೇಟೊ ಬೆಲೆ; ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊ ಕದ್ದ ಕಳ್ಳರು
ಟೊಮೇಟೋ ಕಳ್ಳತನ
Follow us on

ಚಿಕ್ಕಬಳ್ಳಾಪುರ, ಜೂ.18: ಕೋಲಾರ ಬಿಟ್ಟರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ(Chintamani)ಯ ಎಪಿಎಂಸಿ ಮಾರುಕಟ್ಟೆ ಟೊಮೇಟೊ (tomato)  ಮಾರುಕಟ್ಟೆಗೆ ಖ್ಯಾತಿ ಹೊಂದಿದೆ. ಈಗ ಇದೆ ಮಾರುಕಟ್ಟೆಯ ಟೊಮೇಟೊ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮಾರುಕಟ್ಟೆಯ ಎ.ಆರ್.ಕೆ. ಮಂಡಿಯಲ್ಲಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಟೊಮೇಟೊವನ್ನು ಕಳ್ಳರು ಕಳ್ಳತನ ಮಾಡಿದ್ದು, ಕಳ್ಳತನ ದೃಶ್ಯ ಸಿದಿಟಿವಿಯಲ್ಲಿ ಸೆರೆಯಾಗಿದೆ.

ಇದರಿಂದ ಮಂಡಿಯ ಮಾಲಿಕ ರವಿಕುಮಾರ್, ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ರೈತರು ತಂದ ಕ್ರೇಟ್​ಗಳನ್ನು ರಾತ್ರಿ ಸಮಯದಲ್ಲಿ ಕಳ್ಳರು ಒಂದೊಂದಾಗಿ ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ದಿನಕ್ಕೊಂದು ಪ್ರತಿದಿನ ಐದಾರು ಕ್ರೇಟ್​ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಸಿಸಿಟಿವಿ ಅಳವಡಿಸಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಮತ್ತೊಮ್ಮೆ ಡಿಮ್ಯಾಂಡ್ ಹೆಚ್ಚಿಸಿಕೊಂಡ ಕೆಂಪು ಸುಂದರಿ; ಕೋಲಾರದಲ್ಲಿ ಟೊಮೇಟೊ ಬೆಲೆ ದಿಢೀರ್ ಏರಿಕೆ

ಇನ್ನು ಪ್ರಸ್ತುತ ಬೆಳೆದ ಟೊಮೇಟೊಗೆ ವೈರಸ್, ಆ ರೋಗ ಈ ರೋಗ ಬಂದು, ಟೊಮೇಟೊ ಕೈಗೆ ಸಿಗುತ್ತಿಲ್ಲ. ಇದ್ರಿಂದ ಅಲ್ಲಿಷ್ಟು ಇಲ್ಲಿಷ್ಟು ಬೆಳೆದ ಟೊಮೇಟೊಗೆ ಉತ್ತಮ ಬೆಲೆ ಬಂದಿದೆ. 15 ಕೆ.ಜಿ ಯ ಕ್ರೇಟ್​ಗೆ ಸಾವಿರ ರೂಪಾಯಿ ಬೆಲೆ ಬಂದಿದೆ. ಆದ್ರೆ, ಟೊಮೇಟೊ ಬೆಳೆಗೆ ವಕ್ಕರಿಸಿರುವ ವೈರಸ್ ರೋಗಕ್ಕೆ ಮದ್ದು ಪತ್ತೆಯಾಗಿಲ್ಲ, ಈ ಹಿನ್ನಲೆ ರೈತರು ಪರದಾಡುವಂತಾಗಿದೆ. ಇತ್ತ ಮಾರುಕಟ್ಟೆಯಲ್ಲಿ ಟೊಮೇಟೊ ಕಳ್ಳರ ಕಾಟ ಹೆಚ್ಚಾದ ಕಾರಣ ಈಗ ರೈತರು ತಾವು ಬೆಳೆದ ಟೊಮೇಟೊ ತೋಟಕ್ಕೆ ಕಾವಲು ಕಾಯುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ