AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಡಿಮ್ಯಾಂಡ್ ಹೆಚ್ಚಿಸಿಕೊಂಡ ಕೆಂಪು ಸುಂದರಿ; ಕೋಲಾರದಲ್ಲಿ ಟೊಮೇಟೊ ಬೆಲೆ ದಿಢೀರ್ ಏರಿಕೆ

Tomato Rate Increase: ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೇಟೊ ಮಾರುಕಟ್ಟೆಯಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊ ದರ ಏರಿಕೆ ಕಂಡಿದೆ. ಮಳೆಯ ಎಫೆಕ್ಟ್​ನಿಂದಾಗಿ ಟೊಮೇಟೊ ಕಡಿಮೆ ರಫ್ತಾಗುತ್ತಿದ್ದು ಬೇಡಿಕೆಯಷ್ಟು ಬರುತ್ತಿಲ್ಲ, ಹೀಗಾಗಿ ಟೊಮೇಟೊ ಬೆಲೆ ಏರಿಕೆ ಕಂಡಿದೆ.

ಮತ್ತೊಮ್ಮೆ ಡಿಮ್ಯಾಂಡ್ ಹೆಚ್ಚಿಸಿಕೊಂಡ ಕೆಂಪು ಸುಂದರಿ; ಕೋಲಾರದಲ್ಲಿ ಟೊಮೇಟೊ ಬೆಲೆ ದಿಢೀರ್ ಏರಿಕೆ
ಸಾಂದರ್ಭಿಕ ಚಿತ್ರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Jun 10, 2024 | 12:49 PM

Share

ಕೋಲಾರ, ಜೂನ್.10: ಮಿತಿಮೀರಿದ ತಾಪಮಾನ ಹಾಗೂ ಮುಂಗಾರು (Monsoon) ಮಳೆ ಚುರುಕುಗೊಳ್ಳುತ್ತಿರುವ ಹಿನ್ನಲೆ ಕೋಲಾರದಲ್ಲಿ (Kolar) ಮತ್ತೆ ಟೊಮೇಟೊ ಬೆಲೆ ಏರಿಕೆ ಕಾಣುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಟೊಮೇಟೊ (Tomato Rate Increase) ಬೆಲೆ ಗ್ರಾಹಕರಿಗೆ ಬೇಸರ ತಂದಿದೆ. ಮಳೆ ಹೀಗೆ ಮುಂದುವರೆದರೆ ಟೊಮೇಟೊ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೇಟೊ ಮಾರುಕಟ್ಟೆಯಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೇಟೊ ಬೆಲೆ 60 ರೂಪಾಯಿ ಇದೆ. ಹದಿನೈದು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೇಟೊ ಈಗ 60ರೂ ಆಗಿದೆ. ಕಳೆದ ಒಂದು ವಾರದ ಹಿಂದೆ 250 ರೂಪಾಯಿ ಇದ್ದ ಬಾಕ್ಸ್ ಟೊಮೇಟೊ ಈಗ 900 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದೊಂದು ವಾರದಿಂದ ಸುರಿದ‌ ಮಳೆಯ ಎಫೆಕ್ಟ್ ಟೊಮೇಟೊ ಬೆಲೆಯಲ್ಲಿ ದಾಖಲೆಯ ಏರಿಕೆ ಕಾಣುವಂತೆ ಮಾಡಿದೆ. ಮಾರುಕಟ್ಟೆಗೆ ಬರುವ ಟೊಮೇಟೊ ಕಡಿಮೆಯಾದ ಹಿನ್ನೆಲೆ ಬೆಲೆ ಏರಿಕೆಯಾಗಿದೆ.

ವರ್ಷದ ಹಿಂದೆ ಇದೇ ರೀತಿ ಕರ್ನಾಟಕ ಸೇರಿದಮತೆ ಇಡೀ ದೇಶದಲ್ಲಿ ಟೊಮೇಟೊ ಬೆಲೆ ಗಗನಕ್ಕೆ ಏರಿಕೆತ್ತು. ಐದು, 10ರೂಗೆ ಸಿಗುತ್ತಿದ್ದ ಟೊಮೇಟೊ 200ರೂ ಕೆಜಿ ಆಗಿತ್ತು. ಸುಮಾರು ಎರಡು ತಿಂಗಳ ಕಾಲ ಟೊಮೇಟೊ ಬೆಲೆ ಕೆಜಿಗೆ 200 ರೂ. ದಾಟಿತ್ತು. ಈ ವೇಳೆ ಅನೇಕ ಟೊಮೇಟೊ ಬೆಳೆಗಾರರು ಭಾರಿ ಲಾಭ ಪಡೆದಿದ್ದರು. ಈ ಬಾರಿ ಮಳೆ ಹೆಚ್ಚಾಗಿರುವ ಕಾರಣ ರಫ್ತು ಕಡಿಮೆ ಆಗಿ ಟೊಮೇಟೊ ಬೆಲೆ ಏರಿದೆ.

ಇದನ್ನೂ ಓದಿ: ಕಳಪೆ ಟೊಮೇಟೊ ಸಸಿ ಮಾರಾಟ! ಬರಗಾಲದ ನಡುವೆ ಬೆಳೆದಿದ್ದ ಬೆಳೆ ಸಂಪೂರ್ಣ ಹಾಳು

ಇನ್ನು ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಟೊಮೇಟೊ ಬೆಲೆ ಕೆಜಿಗೆ 40 ರೂವರೆಗೆ ಇತ್ತು. ಆದರೆ ಈಗ ಅದು 80 ರೂ.ಗೆ ಏರಿಕೆಯಾಗಿದೆ. ಕೋಲಾರ ಸೇರಿದಂತೆ ನಾನಾ ಭಾಗಗಳಿಂದ ಬರುತ್ತಿದ್ದ ಟೊಮೇಟೊ ರಪ್ತು ಕಡಿಮೆ ಆಗಿದ್ದು ಈ ಪರಿಣಾಮ ಟೊಮೇಟೊ ದರ ಏರಿಕೆಗೆ ಮುಖ್ಯ ಕಾರಣವಾಗಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಟೊಮೇಟೊ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ