Puneeth Rajkumar Death: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಹಿರಿಯ ಛಾಯಗ್ರಾಹಕ

| Updated By: preethi shettigar

Updated on: Oct 30, 2021 | 11:01 AM

ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಡಾ.ರಾಜ್ ಕುಮಾರ್ ರವರ ಛಾಯಚಿತ್ರ ಪ್ರದರ್ಶನದಲ್ಲಿ ಭವಾನಿ ಲಕ್ಷ್ಮಿನಾರಾಯಣ ತಮ್ಮ ಬಳಿ ಇದ್ದ ರಾಜ್ ಕುಮಾರ್ ಕುಟುಂಬದ ಪೋಟೊಗಳನ್ನು ಪ್ರದರ್ಶನ ಮಾಡಿದ್ದರು. ಆಗ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ನಟ ಪುನೀತ್ ರಾಜ್ ಕುಮಾರ್, ಪೋಟೋಗಳನ್ನು ನೋಡಿ ಪ್ರಶಂಸೆ ವ್ಯಕ್ತಡಿಸಿದ್ದರು.

Puneeth Rajkumar Death: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಹಿರಿಯ ಛಾಯಗ್ರಾಹಕ
ಹಿರಿಯ ಛಾಯಗ್ರಾಹಕ ಭವಾನಿ ಲಕ್ಷ್ಮಿನಾರಾಯಣ
Follow us on

ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಘಾತದಿಂದ ಮೃತಪಟ್ಟ ಸುದ್ದಿಯನ್ನು ಕೇಳಿ ರಾಜ್ಯದ ಜನ ಕಂಬನಿ ಮೀಡಿದಿದ್ದಾರೆ. ಆದರೆ ಚಿಕ್ಕಬಳ್ಳಾಪುರದಲ್ಲೊಬ್ಬರು ಹಿರಿಯ ಜೀವಿ ಪುನೀತ್ ಬಾಲಕರಾಗಿದ್ದಾಗ ಅವರ ತುಂಟಾಟ ಮುಗ್ದತೆ ನೆನಸಿಕೊಂಡು ಕಂಬಿನಿ ಮಿಡಿದಿದ್ದಾರೆ. ದಿವಂಗತ ಡಾ.ರಾಜ್ ಕುಮಾರ್ ಕುಟುಂಬಕ್ಕೆ ಚಿರಪರಿಚಿತರಾಗಿದ್ದ ಹಿರಿಯ ಛಾಯಗ್ರಾಹಕ ಭವಾನಿ ಲಕ್ಷ್ಮಿನಾರಾಯಣ, ರಾಜ್ ಕುಮಾರ್ ಕುಟುಂಬ ಚೆನೈನಲ್ಲಿ ವಾಸವಿದ್ದಾಗ ಅವರ ಮನೆಗೆ ಹೋಗಿ ಬಾಲಕನಾಗಿದ್ದ ಪುನೀತ್​ರ ವಿವಿಧ ಛಾಯಚಿತ್ರ ತೆಗೆದಿದ್ದರು. ನಂತರ ಡಾ.ರಾಜ್ ಕುಮಾರ್ ರವರ ಕೆಲವು ಚಲನಚಿತ್ರಗಳಲ್ಲಿ ಸ್ಟೀಲ್ ಪೋಟೋ ಗ್ರಾಫರ್ ಆಗಿದ್ದ ಭವಾನಿ ಲಕ್ಷ್ಮಿನಾರಾಯಣ, ಡಾ. ರಾಜ್​ ಕುಮಾರ್​ ಕುಟುಂಬದ ಛಾಯಚಿತ್ರಗಳನ್ನು ತೆಗೆದಿದ್ದರು.

ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಡಾ.ರಾಜ್ ಕುಮಾರ್ ರವರ ಛಾಯಚಿತ್ರ ಪ್ರದರ್ಶನದಲ್ಲಿ ಭವಾನಿ ಲಕ್ಷ್ಮಿನಾರಾಯಣ ತಮ್ಮ ಬಳಿ ಇದ್ದ ರಾಜ್ ಕುಮಾರ್ ಕುಟುಂಬದ ಪೋಟೊಗಳನ್ನು ಪ್ರದರ್ಶನ ಮಾಡಿದ್ದರು. ಆಗ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ನಟ ಪುನೀತ್ ರಾಜ್ ಕುಮಾರ್, ಪೋಟೋಗಳನ್ನು ನೋಡಿ ಪ್ರಶಂಸೆ ವ್ಯಕ್ತಡಿಸಿದ್ದರು.

ಇತ್ತೀಚೆಗೆ ಮಂತ್ರಾಲಯ ಹಾಗೂ ತಿರುಪತಿಗೆ ಹೋಗಿ ಬರುವಾಗ ತಮ್ಮ ಚಿಕ್ಕಬಳ್ಳಾಪುರದ ಮನೆಗೆ ಪುನೀತ್ ಬಂದು ಹೋಗಿದ್ದರು. ಇನ್ನೂ ಕೋಕಾಕ್ ಚಳುವಳಿ ಸಂದರ್ಭದಲ್ಲಿ ಕೋಲಾರದಿಂದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರಕ್ಕೆ ಡಾ. ರಾಜ್ ಕುಮಾರ್ ಕುಟುಂಬ ಸದಸ್ಯರು ಆಗಮಿಸಿದ ಫೋಟೋಗಳು ಕೂಡ ಛಾಯಗ್ರಾಹಕ ಭವಾನಿ ಲಕ್ಷ್ಮಿನಾರಾಯಣ ಬಳಿ ಇದೆ.

ಬಾಲಕನಾಗಿದ್ದಾಗ ಪುನೀತ್

ಪುನೀತ್​ರ ಪೋಟೊಗಳು ಈಗಲು ತಮ್ಮ ಬಳಿ ಇದೆ. ಈಗ ಪುನೀತ್ ಮೃತಪಟ್ಟ ಸುದ್ದಿ ಕೇಳಿ ಮಾತೆ ಬರುತ್ತಿಲ್ಲ. ಇನ್ನೂ ಪುನೀತ್ ರಾಜ್ ಕುಮಾರ್ ರವರ ಬಾಲ್ಯದ ದಿನಗಳನ್ನು ನೆನಪಿಸುವ ಕೆಲವು ಪೋಟೊಗಳನ್ನು ನಾನು ಈಗಲೂ ಸಂರಕ್ಷಿಸಿಟ್ಟಿದ್ದೇನೆ ಎಂದು ಲಕ್ಷ್ಮಿನಾರಾಯಣ ಕಂಬನಿ ಮಿಡಿದಿದ್ದಾರೆ.

ದನ್ನೂ ಓದಿ:

Puneeth Rajkumar Death: ಯುವ ನಟ ಪುನೀತ್​ ರಾಜ್​ ಕುಮಾರ್ ಅಕಾಲಿಕ ನಿಧನ -ಎರಡು ದಿನ ಜಿಮ್ ಸೆಂಟರ್​​ಗಳು ಬಂದ್

ಚಿರು ಸರ್ಜಾ ಸಾವನ್ನು ನೆನಪಿಸಿದ ಪುನೀತ್​ ಹೃದಯಾಘಾತ; ಹೃದಯದ ಆರೋಗ್ಯದ ಬಗ್ಗೆಯೂ ಇರಲಿ ಗಮನ