ಚಿರು ಸರ್ಜಾ ಸಾವನ್ನು ನೆನಪಿಸಿದ ಪುನೀತ್​ ಹೃದಯಾಘಾತ; ಹೃದಯದ ಆರೋಗ್ಯದ ಬಗ್ಗೆಯೂ ಇರಲಿ ಗಮನ

ಶುಕ್ರವಾರ ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಚಿರು ಸರ್ಜಾ ಸಾವನ್ನು ನೆನಪಿಸಿದ ಪುನೀತ್​ ಹೃದಯಾಘಾತ; ಹೃದಯದ ಆರೋಗ್ಯದ ಬಗ್ಗೆಯೂ ಇರಲಿ ಗಮನ
ಪುನೀತ್​-ಚಿರಂಜೀವಿ ಸರ್ಜಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 29, 2021 | 5:28 PM

ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತವಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಫಿಟ್​ನೆಸ್​ ಬಗ್ಗೆ ಇಷ್ಟೊಂದು ಗಮನ ಹರಿಸುತ್ತಿದ್ದ ಪುನೀತ್​ ಏಕಾಏಕಿ ಮೃತಪಟ್ಟಿದ್ದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಶಾಕಿಂಗ್​ ವಿಚಾರ. ಪುನೀತ್​ ಅವರ ಸಾವು ಚಿರಂಜೀವಿ ಸರ್ಜಾ ಹೃದಯಾಘಾತದ ಘಟನೆಯನ್ನು ನೆನಪಿಸಿದೆ.

ಅದು 2020ರ ಜೂನ್​ 7. ತುಂಬಾನೇ ಆರೋಗ್ಯವಾಗಿದ್ದ ಚಿರಂಜೀವಿ ಸರ್ಜಾ ಅವರಿಗೆ ಹೃದಾಯಾಘಾತ ಸಂಭವಿಸಿತ್ತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಲೇ ಇಲ್ಲ. ಅವರು ಮೃತಪಟ್ಟಿದ್ದರು. ಈ ವಿಚಾರ ಶಾಕಿಂಗ್​ ಆಗಿತ್ತು. ಯಾವುದೇ ಹೃದಯದ ಸಮಸ್ಯೆ ಇಲ್ಲದೆ ಇದ್ದ ಚಿರು ಅವರು ಹೀಗೆ ಮೃತಪಟ್ಟಿದ್ದು ನಿಜಕ್ಕೂ ಶಾಕಿಂಗ್​ ಆಗಿತ್ತು. ಈಗ ಪುನೀತ್​ ನಿಧನ ಕೂಡ ಜೂನ್​ 7ರ ಘಟನೆಯನ್ನು ನೆನಪಿಸಿದೆ.

ಶುಕ್ರವಾರ ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.

ಫಿಟ್ನೆಸ್​ ಬಗ್ಗೆ ಪುನೀತ್​ ಹೆಚ್ಚು ಗಮನ ನೀಡುತ್ತಾರೆ. ಪ್ರತಿದಿನ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಾರೆ. ಆರೋಗ್ಯದ ಬಗ್ಗೆ ಅವರಿಗೆ ಕಾಳಜಿ ಇದೆ. ಹಾಗಿದ್ದರೂ ಕೂಡ ಅವರು ಏಕಾಏಕಿ ಮೃತಪಟ್ಟಿದ್ದರು. ಪುನೀತ್​ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಪುನೀತ್​ ಸಾವಿನ ನಂತರದಲ್ಲಿ ಹೃದಯದ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಸೋಶಿಯಲ್​ ಮೀಡಿಯಾದಲ್ಲಿ ಆಗುತ್ತಿದೆ. ಪುನೀತ್ ಈ ಬಗ್ಗೆ ಹೆಚ್ಚು ಗಮನ ಹರಿಸಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತಿದೆ.

ಇದನ್ನೂ ಓದಿ: ಪಿಆರ್​ಕೆ ಪ್ರೊಡಕ್ಷನ್​ ಬಗ್ಗೆ ಪುನೀತ್​ ಕಂಡ ಆ ಕನಸು ಕೊನೆಗೂ ಈಡೇರಲೇ ಇಲ್ಲ

Puneeth Rajkumar: ನವೆಂಬರ್​ 1ಕ್ಕಾಗಿ ಕಾದಿದ್ದ ಪುನೀತ್; ಮಹತ್ವದ ದಿನ ಬರೋದಕ್ಕೂ ಮುನ್ನವೇ ವಿಧಿವಶ: ಸಿಎಂ ಹೇಳಿದ್ದೇನು?