AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಆರ್​ಕೆ ಪ್ರೊಡಕ್ಷನ್​ ಬಗ್ಗೆ ಪುನೀತ್​ ಕಂಡ ಆ ಕನಸು ಕೊನೆಗೂ ಈಡೇರಲೇ ಇಲ್ಲ

ಪುನೀತ್​ ‘ಜೇಮ್ಸ್​’ ಮತ್ತು ‘ದ್ವಿತ್ವ’ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈ ಎರಡೂ ಸಿನಿಮಾಗಳ ಕೆಲಸಗಳು ಭರದಿಂದ ಸಾಗಿತ್ತು. ಇದಾದ ನಂತರ ಪುನೀತ್​ ಅವರು ಜೇಕಬ್‌ ವರ್ಗೀಸ್‌  ಜತೆ ಮತ್ತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿತ್ತು.

ಪಿಆರ್​ಕೆ ಪ್ರೊಡಕ್ಷನ್​ ಬಗ್ಗೆ ಪುನೀತ್​ ಕಂಡ ಆ ಕನಸು ಕೊನೆಗೂ ಈಡೇರಲೇ ಇಲ್ಲ
ಪುನೀತ್ ರಾಜ್​ಕುಮಾರ್
TV9 Web
| Edited By: |

Updated on: Oct 29, 2021 | 4:15 PM

Share

ಪುನೀತ್​ ರಾಜ್​ಕುಮಾರ್​ ಅವರು ಪಿಆರ್​ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಬಹಳ ಪ್ರೀತಿಯಿಂದ ಆರಂಭಿಸಿದ್ದರು. ​ಈ ಬ್ಯಾನರ್​ ಅಡಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದರು. ಸಾಕಷ್ಟು ಸಿನಿಮಾಗಳನ್ನು ಪಿಆರ್​ಕೆ ಬ್ಯಾನರ್​ ನಿರ್ಮಾಣ ಮಾಡಿದೆ. ಆದರೆ, ಈವರೆಗೆ ಅವರು ತಮ್ಮದೇ ಬ್ಯಾನರ್​ ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ಇದಕ್ಕೆ ಕಾಲ ಕೂಡಿ ಬಂದಿದೆ ಎನ್ನಲಾಗಿತ್ತು. ಅದು ಈಡೇರುವ ಮೊದಲೇ ಪುನೀತ್​ ಮೃತಪಟ್ಟಿದ್ದಾರೆ.

ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಮೂಡಿ ಬರುವ ಚಿತ್ರದಲ್ಲಿ ಪುನೀತ್​ ನಟಿಸಬೇಕು ಎಂಬುದು ಅಭಿಮಾನಿಗಳ ಕನಸಾಗಿತ್ತು. ಅಷ್ಟೇ ಅಲ್ಲ, ಪುನೀತ್​ ಕೂಡ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿರಲಿಲ್ಲ. ಈಗ ಈ ಕನಸು ನನಸಾಗುವ ಕಾಲ ಸನಿಹವಾಗಿದೆ ಎನ್ನುವಾಗಲೇ ಅವರು ದೂರವಾಗಿದ್ದಾರೆ.

ಪುನೀತ್​ ‘ಜೇಮ್ಸ್​’ ಮತ್ತು ‘ದ್ವಿತ್ವ’ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈ ಎರಡೂ ಸಿನಿಮಾಗಳ ಕೆಲಸಗಳು ಭರದಿಂದ ಸಾಗಿತ್ತು. ಇದಾದ ನಂತರ ಪುನೀತ್​ ಅವರು ಜೇಕಬ್‌ ವರ್ಗೀಸ್‌  ಜತೆ ಮತ್ತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿತ್ತು. ‘ಸವಾರಿ’, ‘ಪೃಥ್ವಿ’ ಮೊದಲಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಜೇಕಬ್​ಗೆ ಇದೆ. ಪುನೀತ್​ ಜತೆ ಜೇಕಬ್​ ಕೈ ಜೋಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ಅದು ಈಗ ಕನಸಾಗಿಯೇ ಉಳಿದಿದೆ.

‘ಪೃಥ್ವಿ’ ಸಿನಿಮಾದಲ್ಲಿ ಪುನೀತ್​ ಹಾಗೂ ಜೇಕಬ್​ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಐಎಎಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ರೀತಿಯ ಕಥೆಯನ್ನು ಜೇಕಬ್​ ಹೆಣೆದಿದ್ದರು. ಪಿಎಆರ್​ಕೆ ಬ್ಯಾನರ್​ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ ಎನ್ನಲಾಗಿತ್ತು.

ಪುನೀತ್ ರಾಜ್​ಕುಮಾರ್ ನಿಧನ: ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್​ ಕೊನೆಯ ಮಾತು

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್