ಚಿಕ್ಕಬಳ್ಳಾಪುರ: ಕೆರೆಗೆ ಉರುಳಿದ ಕೆಎಸ್​ಆರ್​ಟಿಸಿ ಬಸ್; ಅದೃಷ್ಟವಷಾತ್ ಪ್ರಯಾಣಿಕರು ಪಾರು

| Updated By: ganapathi bhat

Updated on: Nov 06, 2021 | 10:56 AM

Chikkaballapur Bus Accident: ಬಸ್​ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಕೆರೆಯಲ್ಲಿ ಕಡಿಮೆ ನೀರು ಇರುವ ಕಡೆ ಉರುಳಿ ಬಿದ್ದಿರುವ ಕಾರಣ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ: ಕೆರೆಗೆ ಉರುಳಿದ ಕೆಎಸ್​ಆರ್​ಟಿಸಿ ಬಸ್; ಅದೃಷ್ಟವಷಾತ್ ಪ್ರಯಾಣಿಕರು ಪಾರು
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಬಳಿ ಕೆಎಸ್​ಆರ್​ಟಿಸಿ ಬಸ್ ಒಂದು ಕೆರೆಗೆ ಉರುಳಿದ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 15 ಪ್ರಯಾಣಿಕರು ಗಂಭೀರ ಸಂಕಷ್ಟಕ್ಕೆ ಈಡಾಗದೆ ಪಾರಾಗಿದ್ದಾರೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಗೇಪಲ್ಲಿ ಡೀಪೋಗೆ ಸೇರಿರುವ ಈ ಬಸ್, ಬಾಗೇಪಲ್ಲಿಯಿಂದ ಚಿಂತಾಮಣಿ ನಗರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಸ್​ನ ಎಕ್ಸಲ್ ಕಟ್ ಆಗಿ ಕೆರೆಗೆ ಉರುಳಿ ಬಿದ್ದಿರುವ ಬಗ್ಗೆ ಹೇಳಲಾಗಿದೆ. ಬಸ್​ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಕೆರೆಯಲ್ಲಿ ಕಡಿಮೆ ನೀರು ಇರುವ ಕಡೆ ಉರುಳಿ ಬಿದ್ದಿರುವ ಕಾರಣ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಆನೇಕಲ್: ಅಡುಗೆ ಸಿಲಿಂಡರ್ ಸ್ಫೋಟ, 7 ಜನರಿಗೆ ಗಾಯ
ಅಡುಗೆ ಸಿಲಿಂಡರ್ ಸ್ಫೋಟವಾಗಿ, 7 ಜನರಿಗೆ ಗಾಯವಾದ ದುರ್ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಮನೆಯಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ಬಾಡಿಗೆಗಿದ್ದ ಕಾರ್ಮಿಕರಾದ ಪ್ರಕಾಶ್, ಜಗದೀಶ್, ಕಾಡು, ಜೈಮುಲ್, ಮಂಜುಗೆ ಗಾಯವಾಗಿದೆ. ಗಾಯಾಳುಗಳಿಗೆ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಭಾರತ ಮೂಲದ ಏಳು ಜನ ಮಂಜುನಾಥ್ ರೆಡ್ಡಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದುಬಂದಿದೆ. ಮನೆಯಲ್ಲಿ 15 ಕೆಜಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಥಳಕ್ಕೆ ಜಿಗಣಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್‌ಗೆ ಬೆಂಕಿ
ಕಾರವಾರ ಬಳಿ ಅರಬ್ಬಿ ಸಮುದ್ರದಲ್ಲಿ ಬೋಟ್‌ಗೆ ಬೆಂಕಿ ಬಿದ್ದ ಘಟನೆ ಸಂಭವಿಸಿದೆ. ಬೆಂಕಿ ಬಿದ್ದ ಬೋಟ್‌ನಲ್ಲಿದ್ದ 7 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಭಾರತೀಯ ಕರಾವಳಿ ಪಡೆಯಿಂದ ರಕ್ಷಣೆ ಕಾರ್ಯ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವರದ ವಿನಾಯಕ ಹೆಸರಿನ ಮೀನುಗಾರಿಕೆ ಬೋಟ್​ನಲ್ಲಿ ಅವಘಡ ಸಂಭವಿಸಿದೆ.

ಕಲಬುರಗಿ: ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ, ಸವಾರರು ಸ್ಥಳದಲ್ಲೇ ದುರ್ಮರಣ
ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ, ಸವಾರರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ ಘಟನೆ ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್ ಬಳಿ ನಡೆದಿದೆ. ಅಪಘಾತದಲ್ಲಿ ಸಿದ್ರಾಮ (24) ಹಾಗೂ ಸಿದ್ದಪ್ಪ (22) ಮೃತಪಟ್ಟಿದ್ದಾರೆ. ಮತ್ತೊಬ್ಬ ಸವಾರನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಬೈಕ್- ಕೆಎಸ್​ಆರ್​ಟಿಸಿ ನಡುವೆ ಅಪಘಾತ; ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಇದನ್ನೂ ಓದಿ: Puneeth Rajkumar: ಮುಂದುವರಿದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಮತ್ತೆ ಇಬ್ಬರು ನಿಧನ

Published On - 10:30 am, Sat, 6 November 21