Puneeth Rajkumar: ಮುಂದುವರಿದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಮತ್ತೆ ಇಬ್ಬರು ನಿಧನ
Puneeth Rajkumar: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಭೀಮ ನಗರದ ನಿವಾಸಿ ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ವಿಡಿಯೋಗ್ರಾಫರ್ ಶಿವಮೂರ್ತಿ ಎಂಬವರು ಕೂಡ ಮೃತಪಟ್ಟಿದ್ದಾರೆ.
ತುಮಕೂರು: ಪವರ್ ಸ್ಟಾರ್, ಅಪ್ಪು ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದ ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಾವಿನ ಸರಣಿ ಮುಂದುವರಿದಿದೆ. ಪುನಿತ್ ರಾಜಕುಮಾರ್ ಮೃತಪಟ್ಟ ದಿನದಿಂದ ಊಟ ಬಿಟ್ಟಿದ್ದ ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ ಅಭಿಮಾನಿ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಭೀಮ ನಗರದ ನಿವಾಸಿ ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ವಿಡಿಯೋಗ್ರಾಫರ್ ಶಿವಮೂರ್ತಿ ಎಂಬವರು ಕೂಡ ಮೃತಪಟ್ಟಿದ್ದಾರೆ. ಇಂದು (ನವೆಂಬರ್ 5) ಇಬ್ಬರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯಲ್ಲಿ ರವಿಕುಮಾರ್ (27) ಎಂಬವರು ಮೃತಪಟ್ಟ ದುರ್ಘಟನೆ ನಡೆದಿದೆ. ಮನೆ ತುಂಬಾ ಅಪ್ಪು ಫೋಟೋ ಅಂಟಿಸಿಕೊಂಡಿರುವ ರವಿಕುಮಾರ್, ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ ಪಡೆದು ಮನೆಗೆ ಹಿಂತಿರುಗಿದ್ದರು. ಬಂಡೆ ಕೆಲಸ ಮಾಡುತ್ತಿದ್ದ ರವಿಕುಮಾರ್ ಬಳಿಕ, ದೊಡ್ಡಮನೆ ಅಪ್ಪು ಅವರೇ ಇಲ್ಲ ನಾನಿದ್ದು ಏನು ಪ್ರಯೋಜನ ಎಂದು ಹೇಳಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪುನೀತ್ ಸಾವಿನ ನಂತರ ಬೆಂಗಳೂರಿಗೆ ಹೋಗಿ ದರ್ಶನ ಪಡೆದು ಬಂದಿದ್ದ ಚಾಮರಾಜನಗರ ಜಿಲ್ಲೆಯ ಮತ್ತೊಬ್ಬ ಯುವಕ ಇಂದು ಮೃತರಾಗಿದ್ದಾರೆ. ದರ್ಶನ ಪಡೆದು ಬಂದಾಗಿನಿಂದ ಖಿನ್ನತೆಗೊಳಗಾಗಿದ್ದ ಯುವಕ, ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಚಿತ್ರ ನೋಡುತ್ತ ದುಃಖ ತಡೆಯಲಾಗದೆ ಕೊರಗುತ್ತಿದ್ದ ಎಂದು ತಿಳಿದುಬಂದಿದೆ. ಯುವಕ ಶಿವಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ಪಟ್ಟಣ ರಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೈ ಕುಯ್ದುಕೊಂಡ ಪಿಯುಸಿ ವಿದ್ಯಾರ್ಥಿನಿ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಹಿನ್ನೆಲೆ ಅಭಿಮಾನಿ ಒಬ್ಬರು ಚಾಕುವಿನಿಂದ ಕೈಯಲ್ಲಿ APPU ಎಂದು ಕೊಯ್ದುಕೊಂಡ ದುರ್ಘಟನೆ ನಡೆದಿದೆ. ಮೂಲತಃ ಚಾಮರಾಜನಗರದ ನಿವಾಸಿ ಪಿಯುಸಿ ವಿದ್ಯಾರ್ಥಿನಿ ಯಶಸ್ವಿನಿ ಚಾಕುವಿನಲ್ಲಿ ಗಾಯ ಮಾಡಿಕೊಂಡಿದ್ದಾರೆ. ಪುನೀತ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಯಶಸ್ವಿನಿ, ಅಪ್ಪು ಅಕಾಲಿಕ ಮರಣದಿಂದ ದುಖಃಕ್ಕೊಳಗಾಗಿದ್ದರು. ಎಷ್ಟೇ ಸಮಾಧಾನ ಮಾಡಿದರು ಸಮಾಧಾನವಾಗದೆ ಕರ್ಚೀಫ್, ಪೇಪರ್ ಮೇಲೆ ಅಪ್ಪು ಬಗ್ಗೆ ರಕ್ತದಲ್ಲಿ ಬರೆದುಕೊಂಡಿದ್ದಾರೆ. I Miss U Appu I Love U I Want U Punith Rajkumar ಎಂದು ರಕ್ತದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Puneeth Rajkumar: ಪುನೀತ್ ಸಮಾಧಿಗೆ ನಟ ಸೂರ್ಯ ಭೇಟಿ; ಅಪ್ಪು ನೆನೆದು ಕಂಬನಿ ಮಿಡಿದ ಕಾಲಿವುಡ್ ಸ್ಟಾರ್ ಹೀರೋ
ಇದನ್ನೂ ಓದಿ: ರಸ್ತೆ, ಪಾರ್ಕ್, ಮೈದಾನಕ್ಕೆ ಪುನೀತ್ ಹೆಸರು; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳೋದೇನು?
Published On - 3:32 pm, Fri, 5 November 21