ಚಿಕ್ಕಬಳ್ಳಾಪುರ, ಜನವರಿ 12: ಅಯೋಧ್ಯೆಯ ಶ್ರೀರಾಮ, ಸೀತೆ ಲಕ್ಷ್ಮಣನ ಜೊತೆಗೂಡಿ ವನವಾಸ ಬಂದಿದ್ದಾಗ ಅದೊಂದು ಪುರಾಣ ಪ್ರಸಿದ್ದ ಆಧ್ಯಾತ್ಮಿಕ ಕ್ಷೇತ್ರಕ್ಕೆ ಆಗಮಿಸಿ ಅಲ್ಲಿರುವ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರಂತೆ. ಆಗ ಸೀತೆಯ ನೀರಿನ ದಾಹ ಥಣಿಸಲು ಮುಂದಾದ ಲಕ್ಷ್ಮಣ, ಬಂಡೆಗೆ ಬಾಣ ಬಿಟ್ಟು ನೀರು ತೆಗೆದಿದ್ದನಂತೆ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಆ ಬೆಟ್ಟದ ಬಂಡೆಯಲ್ಲಿ ಲಕ್ಷ್ಮಣತೀರ್ಥ ಇದ್ದು, ಹಲವು ವಿಸ್ಮಯಗಳಿಗೆ ಕಾರಣವಾಗಿದೆ.
ಯಾವ ಬೆಟ್ಟಕ್ಕೆ ಶ್ರೀರಾಮ ಬಂದಿದ್ರು:
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನಲ್ಲಿ ಕೈವಾರ ಎನ್ನುವ ಗ್ರಾಮವೊಂದಿದೆ. ಇದೇ ಕೈವಾರ ಗ್ರಾಮಕ್ಕೆ ಹೊಂದಿಕೊಂಡಂತೆ ಕೈವಾರ ಬೆಟ್ಟವಿದೆ. ಇದೆ ಬೆಟ್ಟ ಐತಿಹಾಸಿಕವಾಗಿ ಹಾಗೂ ಪೌರಣಿಕವಾಗಿ ಪ್ರಸಿದ್ದಿಯಾಗಿದೆ. ಇನ್ನೂ ಅಯೋಧ್ಯೆಯ ಶ್ರೀರಾಮ, ಸೀತೆ, ಲಕ್ಷ್ಮಣನ ಜೊತೆಗೂಡಿ ವನವಾಸಕ್ಕೆ ಬಂದಿದ್ರು ಎನ್ನುವ ಪ್ರತಿತಿ ಇದೆ. ಇದೆ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು ಎನ್ನುವ ನಂಬಿಕೆಯಿದೆ.
ಸೀತೆಯ ನೀರಿನ ದಾಹ ತಣಿಸಲು ಬಾಣ ಹೊಡೆದಿದ್ದ ಲಕ್ಷ್ಮಣ:
ವಿಶ್ರಾಂತಿಯಲ್ಲಿದ್ದ ಸೀತೆ, ನೀರಿನ ದಾಹ ಆಗಿರುವುದಾಗಿ ತಿಳಿಸುತ್ತಾಳೆ. ಆತ ಸೀತೆಯ ನೀರಿನ ದಾಹ ಥಣಿಸಲು ಮುಂದಾದ ಲಕ್ಷ್ಮಣ, ಬಂಡೆಗೆ ಬಾಣ ಬಿಟ್ಟು ನೀರು ತೆಗೆದಿದ್ದನಂತೆ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಕೈವಾರ ಬೆಟ್ಟದಲ್ಲಿ ಲಕ್ಷ್ಮಣ ತೀರ್ಥವಿದೆ, ಮತ್ತೊಂದಡೆ ಬೆಟ್ಟದ ಮೇಲಿರುವ ಲಕ್ಷ್ಮಣ ತೀರ್ಥದ ನೀರು ಸದಾ ತಂಪಾಗಿ, ಶುದ್ಧವಾಗಿ ಬರಗಾಲಕ್ಕೂ ಜಗ್ಗದೇ ತುಂಬಿ ತುಳುಕುತ್ತಿದೆ. ಅದರ ನೀರನ್ನೇ ಸ್ಥಳೀಯರು ಪೂಜೆ, ಪುನಸ್ಕಾರಗಳಿಗೆ ಬಳಸುತ್ತಾರೆ.
Also Read: ಹಂಪಿಯಲ್ಲಿ ಚಾರ್ತುಮಾಸ ತಪಸ್ಸು ನಡೆಸಿದ ಶ್ರೀರಾಮ.. ಸೀತೆಯನ್ನು ಮರಳಿ ಪಡೆಯಲು ವಿರೂಪಾಕ್ಷ ದೇವರ ಆರ್ಶೀವಾದ ಪಡೆದರಂತೆ!
ಅಮರನಾರಾಯಣಸ್ವಾಮಿ ದೇವಸ್ಥಾನಕ್ಕೆ ಶ್ರೀರಾಮ ಭೇಟಿ:
ಇನ್ನು ತ್ರೇತಾಯುಗಕ್ಕೂ ಮುನ್ನವೇ ಕೈವಾರ ಪಟ್ಟಣದಲ್ಲಿ ಅಮರನಾರಾಯಣಸ್ವಾಮಿ ದೇವಸ್ಥಾನವಿತ್ತಂತೆ. ಶ್ರೀರಾಮ ಸೀತೆ ಲಕ್ಷ್ಮಣ ಮೂವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರಂತೆ. ಅದರ ಜ್ಞಾಪಕಾರ್ಥವಾಗಿ ದೇವಸ್ಥಾನದಲ್ಲಿ ಇಂದಿಗೂ ರಾಮ, ಸೀತೆ, ಲಕ್ಷ್ಮಣ ವಿಗ್ರಹ ಇರುವುದನ್ನು ಕಾಣಬಹುದಾಗಿದೆ.
ಕೈವಾರ ಬೆಟ್ಟ ಮಹಾಭಾರತದ ಕಾಲದಲ್ಲಿ ಏಕಚಕ್ರಾಧಿಪುರ ಎಂದು ಖ್ಯಾತಿಯಾಗಿತ್ತು ಎನ್ನಲಾಗಿದೆ. ಪಾಂಡವರು ಇದೇ ಬೆಟ್ಟದಲ್ಲಿ ಅಜ್ಞಾತವಾಸ ಮಾಡಿರುವ ಬಗ್ಗೆ ಕುರುಹುಗಳಿವೆ. ಮತ್ತೊಂದಡೆ ಅಯೋಧ್ಯೆಯ ಶ್ರೀರಾಮ, ಸೀತೆ, ಲಕ್ಷ್ಮಣರು ನಡೆದಾಡಿರುವ ಪ್ರತೀತಿ ಇದೆ. ಇದ್ರಿಂದ ಕೈವಾರ ಬೆಟ್ಟಕ್ಕೆ ಐತಿಹಾಸಿಕವಾಗಿ ಮಹತ್ವ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ