ಹಂಪಿಯಲ್ಲಿ ಚಾರ್ತುಮಾಸ ತಪಸ್ಸು ನಡೆಸಿದ ಶ್ರೀರಾಮ.. ಸೀತೆಯನ್ನು ಮರಳಿ ಪಡೆಯಲು ವಿರೂಪಾಕ್ಷ ದೇವರ ಆರ್ಶೀವಾದ ಪಡೆದರಂತೆ!

ಹಂಪಿಯಲ್ಲಿ ಚಾರ್ತುಮಾಸ ತಪಸ್ಸು ನಡೆಸಿದ ಶ್ರೀರಾಮ.. ಸೀತೆಯನ್ನು ಮರಳಿ ಪಡೆಯಲು ವಿರೂಪಾಕ್ಷ ದೇವರ ಆರ್ಶೀವಾದ ಪಡೆದರಂತೆ!

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಸಾಧು ಶ್ರೀನಾಥ್​

Updated on: Jan 12, 2024 | 10:37 AM

ಚಾರ್ತುಮಾಸ ತಪಸ್ಸು ನಡೆಸಿದ ಬಳಿಕ ಸೀತೆಯನ್ನು ಮರಳಿ ಪಡೆಯಲು ಶ್ರೀರಾಮ ಇಲ್ಲಿನ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ, ಆರ್ಶೀವಾದ ಪಡೆದು ಲಂಕೆಗೆ ಹೋಗಿದ್ದು. ಲಂಕೆಯಲ್ಲಿ ರಾವಣನನ್ನ ಸಂಹಾರ ಮಾಡಿ ಸೀತೆಯನ್ನ ಮರಳಿ ಕರೆತರುವಾಗ ಕಿಷ್ಕಿಂದ ನಗರದಲ್ಲಿ ತಂಗಿದ್ದು.. ನಂತರ ಇಲ್ಲಿಂದ ಅಯೋಧ್ಯೆಗೆ ತೆರಳುತ್ತಾರೆ ಎಂಬುದಾಗಿ ಇಲ್ಲಿನ ಸ್ಥಳ ಪುರಾಣದಿಂದ ತಿಳಿದುಬರುತ್ತದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಶ್ರೀರಾಮನನ್ನು ನೆನೆಪಿಸುವಂತಾ ಹಲವು ಪುಣ್ಯಕ್ಷೇತ್ರಗಳು ಕರ್ನಾಟಕದಲ್ಲಿವೆ. ಅದರಲ್ಲಿ ವಿಜಯನಗರ ಜಿಲ್ಲೆ ಹಂಪಿ ಸಹ ಒಂದು. ಹಂಪಿಯನ್ನ ರಾಮಾಯಣದಲ್ಲಿ ಕಿಷ್ಕಿಂದಾ ನಗರ ಅಂತ ಕರೆಯಲಾಗುತ್ತಿತ್ತು. ಈ ಕಿಷ್ಕಿಂದ ನಗರ ಹಂಪಿಗೂ ಅಯೋಧ್ಯೆ ರಾಮನಿಗೂ ಸಾಕಷ್ಟು ಸಂಬಂಧ ಇದೆ. ಹಂಪಿಯ ಕಿಷ್ಕಿಂದ ನಗರದಲ್ಲಿ ಶ್ರೀರಾಮ ಬಂದು ನೆಲೆಸಿದ್ದ, ಹಂಪಿಯ ಹಲವು ಭಾಗಗಳಲ್ಲಿ ಸಂಚರಿಸಿದ್ದ ಅನ್ನೋ ಪೌರಾಣಿಕ ಹಿನ್ನೆಲೆ ಇದೆ… ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ

ಹೌದು ಶ್ರೀರಾಮಚಂದ್ರ ಸೀತಾ ಮಾತೆಐ ಅಪಹರಣವಾದ ಸಂದರ್ಭದಲ್ಲಿ ಸೀತೆಯನ್ನು ಅರಸುತ್ತಾ ಹಂಪಿಗೆ ಬಂದಿದ್ದರು ಎಂಬ ಪ್ರತೀತಿಯಿದೆ. ಅದಕ್ಕೆ ಸಾಕಷ್ಟು ಕುರುಹುಗಳು ಸಹ ಇಲ್ಲಿ ದೊರೆಯುತ್ತವೆ. ಆಗಿನ ಕಿಷ್ಕಿಂದ ನಗರವೇ ಈಗಿನ ವಿಜಯನಗರ ಜಿಲ್ಲೆಯ ಹಂಪಿ. ಹಂಪಿಯ ಮಾಲ್ಯವಂತ ಪರ್ವತದಲ್ಲಿರುವ ಐತಿಹಾಸಿಕ ರಘುನಾಥ ದೇವಾಲಯದಲ್ಲಿ ಶ್ರೀರಾಮ ನಾಲ್ಕು ತಿಂಗಳ ಕಾಲ ತಪಸ್ಸು ಮಾಡುತ್ತಾರಂತೆ.

ಅಲ್ಲಿ ರಾಮ ತಪಸ್ಸು ಮಾಡುವ ವಿಗ್ರಹ ಸಹ ಇದೆ. ಶ್ರೀರಾಮ, ಸೀತಾ ಮಾತೆ ಶಸ್ತ್ರಗಳಿಲ್ಲದೆ ಶಾಂತವಾಗಿ ಕುಳಿತಿರುವ ವಿಗ್ರಹಗಳಿವೆ. ಈ ರೀತಿಯ ವಿಗ್ರಹಗಳು ದೇಶದ ಬೇರೆ ಯಾವ ಭಾಗದಲ್ಲೂ ಕಾಣ ಸಿಗುವುದಿಲ್ಲ. ಜೊತೆಗೆ ಬಂಡೆಗಲ್ಲಿನ ಪರ್ವತದಲ್ಲಿ ಶ್ರೀರಾಮನ ಆಜ್ಞೆಯಂತೆ ಲಕ್ಷ್ಮಣ ಬಾಣ ಬಿಟ್ಟು ರಾಮ ತೀರ್ಥ ಸೃಷ್ಟಿ ಮಾಡಿದ ಅಗಾಂದ ಈಗಿನವರಗೆ ನೀರು ನಿರಂತರವಾಗಿ ಅಲ್ಲಿ ಸಿಗುತ್ತೆ. ಬಾಣದ ಗುರುತಿನ ಹಾಗೆ ರಾಮತೀರ್ಥವಿದೆ. ಅಲ್ಲೇ ಶ್ರೀರಾಮ ನಿತ್ಯ ಶಿವಲಿಂಗ ನಂದಿ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದ ಎಂದು ಗೈಡ್ ಪರಶುರಾಮ ಮಳಗಿ ಮಹತ್ವದ ಮಾಹಿತಿ ನೀಡಿದ್ದಾರೆ.

ಇನ್ನು ಮಾಲ್ಯವಂತ ಪರ್ವತದ ಬಳಿ ರಾಮ ಲಕ್ಷ್ಮಣರ ದಿವ್ಯ ತೇಜಸ್ಸನ್ನು ಕಂಡು ಹನುಮಂತ.. ಪ್ರಭು ಶ್ರೀರಾಮ ಚಂದ್ರರು ಕಿಷ್ಕಿಂದಿಗೆ ಬಂದಿದ್ದಾರೆ ಅಂತಾ ಸುಗ್ರೀವರಿಗೆ ತಿಳಿಸುತ್ತಾರೆ. ಆಗ ಸುಗ್ರೀವ ತನ್ನ ಅಣ್ಣ ವಾಲಿಯಿಂದ ಬಚಾವಾಗಲು ವೃಷಿ ಮುನಿ ಬೆಟ್ಟದ ಮುಂದೆ ಇರುವ ಗುಹೆಯಲ್ಲಿ ವಾಸವಿರುತ್ತಾರೆ.

ಸುಗ್ರೀವ ಶ್ರೀರಾಮನನ್ನ ಭೇಟಿ ಮಾಡಿ ತನಗೆ ಆಗಿರು ಅನ್ಯಾಯವನ್ನ ಹೇಳಿಕೊಳ್ಳುತ್ತಾರೆ ಜೊತೆಗೆ ಸೀತಾ ಮಾತೆಯನ್ನ ರಾವಣ ಪುಷ್ಪಕ ವಿಮಾನದಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ.. ಆಭರಣಗಳನ್ನ ಚೆಲ್ಲುತ್ತಾ, ಮತ್ತು ತನ್ನ ಸೆರಗನ್ನು ಭೂಮಿಗೆ ಎಳೆಸುತ್ತ ಹೋಗಿದ್ದ ಗುರುತುಗಳನ್ನ ತೋರಿಸುತ್ತಾನೆ.

ನಂತರ ಆಭರಣಗಳನ್ನ ನೋಡಿದ ರಾಮ ಇದು ಸೀತೆಯದೇ ಅಂತಾ ಗೊತ್ತಾಗಿ ಅಲ್ಲಿಂದ ಸೀತೆಯ ಹುಡುಕಲು ವಾನರ ಸಹಾಯ ಕೇಳುತ್ತಾನೆ. ಆನಂತರವೇ ವಾಲಿಯನ್ನ ಸಂಹಾರ ಮಾಡಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿ ವಾನರ ಸೇನೆಯೊಂದಿಗೆ ಲಂಕಾ ಕಡೆ ಪ್ರಯಾಣ ಬೆಳೆಸುತ್ತಾನೆ ಎಂಬ ಮಾತಿದೆ ಎಂದು ಮತ್ತೊಬ್ಬ ಗೈಡ್ ವಿಶ್ವನಾಥ ಹೇಳಿದ್ದಾರೆ.

ಶ್ರೀರಾಮ ವಾನರ ಸೈನ್ಯ, ಸುಗ್ರೀವ ಸಹಾಯ ಪಡೆದು ಲಂಕೆಗೆ ಹೋಗುತ್ತಾರೆ ಅಂತಾ ಪೌರಾಣಿಕ ಕತೆ ಹೇಳುತ್ತದೆ. ಜೊತೆಗೆ ಪಂಪಾ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ ಅವರ ಆರ್ಶೀವಾದ ಪಡೆದು ರಾಮ ಲಂಕೆಗೆ ಹೋಗಿದ್ದು ಅನ್ನೊದನ್ನು ಹೇಳಲಾಗುತ್ತಿದೆ. ಲಂಕೆಗೆ ಹೋದ ಬಳಿಕ ರಾವಣನನ್ನ ಸಂಹಾರ ಮಾಡಿ ಸೀತೆಯನ್ನ ಮರಳಿ ಕರೆದುಕೊಂಡು ಬರುವಾಗ ಕಿಷ್ಕಿಂದ ನಗರದಲ್ಲಿ ಕೆಲ ದಿನಗಳ ಕಾಲ ತಂಗಿದ್ದು.. ನಂತರ ಇಲ್ಲಿಂದ ಅಯೋಧ್ಯೆಗೆ ತೆರಳುತ್ತಾರೆ ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ಅಯೋಧ್ಯೆ ಶ್ರೀರಾಮ ಚಂದ್ರನಿಗೂ ಹಂಪಿಗೂ ಸಾಕಷ್ಟು ನಂಟು ಇರುವ ಕುತೂಹಲಕಾರಿ ಕುರುಹುಗಳು ಇಲ್ಲಿ ಗೋಚರವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ