ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಾಂಡದಲ್ಲೇ ಭೂ ಸ್ವಾಧೀನ ಪರಿಹಾರ ಹಣ ವಂಚನೆ! ಸೈಬರ್ ಠಾಣೆಯಲ್ಲಿ ದೂರು ದಾಖಲು

ನ್ಯಾಷನಲ್ ಹೈವೇ ಲ್ಯಾಂಡ್ ಅಕ್ವೇಷನ್ ಅಧಿಕಾರಿಗಳು ಎಂದು ಹೇಳಿ ಹರೀಶ ರೆಡ್ಡಿ ಹಾಗೂ ವಿಜಯ್ ಕಾಂತರೆಡ್ಡಿ ಎನ್ನುವವರ ಹೆಸರನ್ನು ಹೇಳಿಕೊಂಡು ಕೆಲವರು ವೈ.ಶ್ರೀನಿವಾಸರೆಡ್ಡಿ ಅವರ ಬಳಿ ಬಂದಿದ್ದಾರೆ. ಬಳಿಕ ಭೂ ಸ್ವಾಧೀನವಾಗಿರುವ ಜಮೀನಿಗೆ ಪರಿಹಾರದ ಹಣ ನೀಡುವುದಾಗಿ ನಂಬಿಸಿ ವಂಚಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಾಂಡದಲ್ಲೇ ಭೂ ಸ್ವಾಧೀನ ಪರಿಹಾರ ಹಣ ವಂಚನೆ! ಸೈಬರ್ ಠಾಣೆಯಲ್ಲಿ ದೂರು ದಾಖಲು
ಶ್ರೀನಿವಾಸರೆಡ್ಡಿ, ವಂಚನೆಗೆ ಒಳಗಾದವರು
Edited By:

Updated on: Aug 25, 2022 | 7:50 PM

ಚಿಕ್ಕಬಳ್ಳಾಪುರ: ಬರದ ನಾಡು ಚಿಕ್ಕಬಳ್ಳಾಪುರ ಬಾಗೇಪಲ್ಲಿ ಕಡೆಗಳಲ್ಲಿ ಭೂ ತಾಯಿಗೆ ಚಿನ್ನದ ಬೆಲೆ ಬಂದು ಯಾವುದೋ ಕಾಲವಾಯಿತು. ಆಗಿನಿಂದಲೂ, ಇರುವ ಭೂಮಿಯನ್ನು ಕೊಳ್ಳೆ ಹೊಡೆಯುವ ವಂಚನೆ ಪ್ರಕರಣಗಳು ಎಗ್ಗುಸಿಗ್ಗು ಇಲ್ಲದೆ ನಡೆದಿದೆ. ತಾಜಾ ಪ್ರಕರಣವೊಂದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಾಂಡದಲ್ಲೇ ಭೂ ಸ್ವಾಧೀನ ಪರಿಹಾರ ಹಣ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಭೂ ಸ್ವಾಧೀನವಾಗಿರುವ ಜಮೀನಿಗೆ ಪರಿಹಾರದ ಹಣ ನೀಡುವುದಾಗಿ ಹೇಳಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಾಂಡದಲ್ಲೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಾಗೇಪಲ್ಲಿ ಮೂಲದ ವೈ.ಶ್ರೀನಿವಾಸರೆಡ್ಡಿ ಅವರಿಂದ 1 ಲಕ್ಷ 60 ಸಾವಿರ ರೂಪಾಯಿ ಹಣ ಪಡೆದು ವಂಚನೆ ಮಾಡಲಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನ್ಯಾಷನಲ್ ಹೈವೇ ಲ್ಯಾಂಡ್ ಅಕ್ವೇಷನ್ ಅಧಿಕಾರಿಗಳು ಎಂದು ಹೇಳಿ ಹರೀಶ ರೆಡ್ಡಿ ಹಾಗೂ ವಿಜಯ್ ಕಾಂತರೆಡ್ಡಿ ಎನ್ನುವವರ ಹೆಸರನ್ನು ಹೇಳಿಕೊಂಡು ಕೆಲವರು ವೈ.ಶ್ರೀನಿವಾಸರೆಡ್ಡಿ ಅವರ ಬಳಿ ಬಂದಿದ್ದಾರೆ. ಬಳಿಕ ಭೂ ಸ್ವಾಧೀನವಾಗಿರುವ ಜಮೀನಿಗೆ ಪರಿಹಾರದ ಹಣ ನೀಡುವುದಾಗಿ ನಂಬಿಸಿ 28 ಲಕ್ಷ ರೂಪಾಯಿ ಪರಿಹಾರದ ಹಣ ನೀಡಲು 1 ಲಕ್ಷ 60 ಸಾವಿರ ಹಣ ನೀಡಬೇಕಾಗುತ್ತೆ ಎಂದು ಹೇಳಿ ಹಣ ಪಡೆದು ವಂಚಿಸಿದ್ದಾರೆ. ಬಳಿಕ ಹಣವೂ ಇಲ್ಲದೆ, ಪರಿಹಾರವೂ ಸಿಗದೆ ಇದ್ದಾಗ ಶ್ರೀನಿವಾಸರೆಡ್ಡಿ ವಂಚನೆ ಆಗಿದೆ ತಮಗೆ ನ್ಯಾಯ ಕೊಡಿಸಿ ಎಂದು ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೊದಲಿಗೆ ಹರೀಶರೆಡ್ಡಿ ಎಂಬುವವರು ಕರೆ ಮಾಡಿ ನ್ಯಾಷನಲ್ ಹೈವೇ ಲ್ಯಾಂಡ್ ಅಕ್ವೇಷನ್ ಅಪೀಸ್ ನಿಂದ ನಿಮಗೆ 28,00000 ರೂಗಳು ಭೂ ಪರಿಹಾರ ಧನ ಚಕ್ ಬಂದಿದೆ, ಆ ಚಕ್ ನ್ನು ಪಡೆಯಲು ಡಿಸಿ ಕಚೇರಿಗೆ ನೀವು ಹಿಂದಿನ ದಸ್ತವೇಜುಗಳನ್ನು ತೆಗೆದುಕೊಂಡು ಡಿಸಿ ಕಚೇರಿಯಲ್ಲಿ ಬಾಂಡ್ ಬರೆದುಕೊಡಲು 1,50,000 ರೂಗಳನ್ನು ತೆಗೆದುಕೊಂಡು ಬನ್ನಿ ಎಂದು ಸೂಚಿಸಲಾಗಿತ್ತು. ಅದರಂತೆ ಕಾಗದ ಪತ್ರಗಳು ಮತ್ತು ಹಣವನ್ನು ವಿಜಯಕಾಂತ್ ರೆಡ್ಡಿ ಅವರ ಕಚೇರಿಯಲ್ಲಿ ಕೊಡುವಂತೆ ಹೇಳಿದರು. ನಂತರ ಸಾಹೇಬರ ಮುಂದೆ ಹಣ ಆಗುವುದಿಲ್ಲ. ಆದುದರಿಂದ ಹಣವನ್ನು ಭಾಗೇಪಲ್ಲಿಯಲ್ಲಿ ವಿಜಯಕಾಂತ್ ರೆಡ್ಡಿ ರವರಿಗೆ ಕೊಡಲು ಹರೀಶ್ ರೆಡ್ಡಿ ಎಂಬುವರು ಪೋನಿನಲ್ಲಿ ಸೂಚಿಸಿದ್ದಾರೆ. ವಿಜಯಕಾಂತ್ ರೆಡ್ಡಿ ರವರಿಗೆ ಪೋನ್ ಮಾಡಿದಾಗ ಅವರು ಡಿಸಿ ಕಚೇರಿಯಲ್ಲಿ ಮೀಟಿಂಗ್ ಇದೆ ನಾನು ನ್ಯಾಷನಲ್ ಹೈವೇ ಲ್ಯಾಂಡ್ ಅಕ್ನೇಷನ್ ಕಚೇರಿಯಲ್ಲಿ ರೆವಿನ್ಯೋ ಇನ್ಸಪೆಕ್ಟರ್ ಆಗಿರುವುದರಿಂದ ನೀನು ಡಿಸಿ ಕಛೇರಿಯ ಹತ್ತಿದ ಬಂದು ಹಣ ಕೊಡು ಎಂದು ತಿಳಿಸುತ್ತಾರೆ. ಹೀಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಾಂಡದಲ್ಲೆ ಶ್ರೀನಿವಾಸರೆಡ್ಡಿ ಅವರಿಗೆ ಖದೀಮರು ವಂಚನೆ ಮಾಡಿದ್ದಾರೆ.

Published On - 7:50 pm, Thu, 25 August 22