
ಆಕೆ ಸ್ಪರದ್ರೂಪಿ ವಿಧವೆ. ವಿಧವೆಗೆ ಸಹಾಯ ಮಾಡೊ ನೆಪದಲ್ಲಿ ಮನೆಗೆ ಬಂದ ಗಂಡನ ಸ್ನೇಹಿತನೊರ್ವ… ವಿಧವೆಗೆ ಬಾಳು ಕೊಡ್ತಿನಿ ಅಂತ ಆಕೆಯ ಜೊತೆ ಲವ್ವಿ ಡವ್ವಿ ಶುರು ಮಾಡಿ ಆಕೆಯ ಮನೆಯಲ್ಲಿ ಜಂಡಾ ಹೂಡಿದ್ದ, ಆದ್ರೆ ಆಕೆಯ ಗಂಡನ ಮತ್ತೊರ್ವ ಸ್ನೇಹಿತ ಹಾಗೂ ನಗರಸಭಾ ಸದಸ್ಯ ಅದಕ್ಕೆ ಅಡ್ಡಿ ಅಂತ, ಕೊನೆಗೆ ಆತನ ಹೆಸರಿನಲ್ಲಿ ವಿಡಿಯೊದಲ್ಲಿ ಡೆತ್ ಸ್ಟೇಟ್ ಮೆಂಟ್ ಮಾಡಿ ನೇಣಿಗೆ ಶರಣಾಗಿದ್ದಾನೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!
ಆಕೆಯ ಹೆಸರು ಸುಮಾ. ಚಿಕ್ಕಬಳ್ಳಾಪುರ ನಗರದ 15ನೆ ವಾರ್ಡ ನಿವಾಸಿ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಗಂಡ ರಮೇಶ ಬಾಬು, ಕಳೆದ ವರ್ಷ ಕೊರೊನಾ ಸೋಂಕಿಗೆ ಬಲಿಯಾಗಿದ್ದ. ಗಂಡನ ಅಗಲಿಕೆಯ ದುಃಖ ಮಾಸುವ ಮುನ್ನ ಸುಮಾ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೂ ಗಂಡನ ಸ್ನೇಹಿತರಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾ ಗಂಡ ರಮೇಶ ಮೃತಪಟ್ಟ ಮೇಲೆ ಸಹಾಯ ಮಾಡೊ ರೀತಿ ಮನೆಗೆ ಬಂದು ಹೊಗ್ತಿದ್ದ ಎಸ್.ಎನ್. ಪ್ರಶಾಂತ್ ಎನ್ನುವ ವಿಚ್ಚೇಧಿತ, ಸುಮಾಳನ್ನು ಮದುವೆ ಮಾಡಿಕೊಳ್ತಿನಿ, ನಿನ್ನ ಲವ್ ಮಾಡ್ತಿನಿ ಅಂತ ಪ್ರೀತಿ ಪ್ರೇಮದ ಕಥೆ ಹೇಳಿ ಸುಮಾಳನ್ನು ಸೆಳೆದಿದ್ದ.
ಇದ್ರಿಂದ ಸುಮಾ ಆತನನ್ನು, ತನ್ನದೆ ಸ್ವಂತ ಮನೆಯ ಕೆಳಗೆ ಬಾಡಿಗೆ ರೂಪದಲ್ಲಿ ಮನೆ ನೀಡಿ ಕಷ್ಟ ಸುಖ ನೋಡಿಕೊಂಡಿದ್ದಳು. ಆದ್ರೆ ನಿನ್ನೆ ತಡರಾತ್ರಿ ಪ್ರಶಾಂತ್ ನೇಣಿಗೆ ಶರಣಾಗಿದ್ದು ಸಾಯುವುದಕ್ಕೂ ಮುನ್ನ ಸ್ಥಳಿಯ ನಗರಸಭೆ ಸದಸ್ಯ ಹಾಗೂ ಸುಮಾಳ ಗಂಡನ ಸ್ನೇಹಿತ ಅಂಬರೀಶ ತನ್ನ ಸಾವಿಗೆ ಕಾರಣ ಅಂತ ವಿಡಿಯೊ ಹೇಳಿಕೆ ದಾಖಲು ಮಾಡಿ ಸತ್ತಿದ್ದಾನೆ. ಇತ್ತ ಮೃತನ ಸಂಬಂಧಿಗಳು ನಗರಸಭೆ ಸದಸ್ಯ ಅಂಬರೀಶ ಹಾಗೂ ಸುಮಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.’
ಸ್ಥಳಿಯ ನಗರಸಭಾ ಸದಸ್ಯ ಅಂಬರೀಶ, ಸುಮಾ ಗಂಡನ ಬಡ್ಡಿ ವ್ಯವಹಾರ ನೋಡಿಕೊಂಡರೆ… ಇತ್ತ ಮೃತ ಪ್ರಶಾಂತ್, ಸುಮಾಳ ಜೊತೆ ಪ್ರವಾಸ, ಹೋಟಲ್ ಅದೂ ಇದು ಅಂತ ಸುತ್ತಾಡಿಕೊಂಡಿದ್ದ, ಇತ್ತೀಚೆಗೆ ಸುಮಾಳನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಬಂಧಿ ಮಾಡಿ, ಮದುವೆ ಮಾಡಿಕೊಳ್ಳೊದಾಗಿ ಹೇಳಿದ್ದ. ತಮ್ಮಿಬ್ಬರ ಪ್ರೀತಿಗೆ ಅಂಬರೀಶ ಅಡ್ಡಿ, ಸುಮಾ ತನ್ನ ಬದಲು ಅಂಬರೀಶ ಜೊತೆ ಸಲುಗೆಯಿಂದ ಇದ್ದಾಳೆ. ತನ್ನನ್ನು ಪ್ರೀತಿಸಿ ಬೇರೆಯವರ ಜೊತೆಗೂ ಪ್ರೀತಿ ಇಟ್ಟುಕೊಂಡಿದ್ದೀಯಾ ಅಂತ ಪದೆ ಪದೆ ಸುಮಾಳ ಜೊತೆ ಜಗಳ ತೆಗೆದು, ಗಲಾಟೆ ಮಾಡಿ, ಕಿರುಕುಳ ನೀಡ್ತಿದ್ದನಂತೆ, ಸದಾ ಪೋನ್ ನಲ್ಲಿ ಮಾತನಾಡುತ್ತಾ, ಮೇಲೆ ಬಾ ಕೆಳಗೆ ಬಾ ಅಂತ ಪೀಡಿಸುತ್ತಿದ್ದನಂತೆ. ಇದ್ರಿಂದ ಸುಮಾ ಬೇಸತ್ತು ಕಳೆದ ಮೂರು ದಿನಗಳಿಂದ ಮನೆ ತೊರೆದು ತಾಯಿಯ ಮನೆ ಸೇರಿಕೊಂಡಿದ್ದಳು.
ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ವಿಧವೆಯ ಮೇಲೆ ಕಣ್ಣು ಹಾಕಿದ್ದರು ಗಂಡನ ಸ್ನೇಹಿತರು. ಸಹಾಯ ಮಾಡೊ ನೆಪದಲ್ಲಿ, ಆಕೆಯನ್ನು ಪ್ರೀತಿಸಿದ್ದರು. ಆದ್ರೆ ಪ್ರೀತಿ ಪ್ರೇಮ ಅತಿರೇಕಕ್ಕೆ ಹೋಗಿ ಅವಳಿಗಾಗಿ ಇವನು ಸಾವಿಗೆ ಶರಣಾಗಿದ್ದಾನೆ. ಸಾಯುವುದಕ್ಕೂ ಮುನ್ನ ನಗರಸಭೆ ಸದಸ್ಯನ ಮೇಲೆ ಆರೋಪ ಮಾಡಿದ್ದು ಪೊಲೀಸರ ತನಿಖೆಯಿಂದ ಸತ್ಯ ಹೊರ ಬರಬೇಕು – ಭೀಮಪ್ಪ ಪಾಟೀಲ ಟಿವಿ 9 ಚಿಕ್ಕಬಳ್ಳಾಫುರ
Published On - 4:41 pm, Mon, 26 September 22