ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಗೌರಿಬಿದನೂರಿನಲ್ಲಿ ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಮಹಾಸ್ವಾಮೀಜಿ ಹೇಳಿದ್ದಾರೆ. ಗೌರಿಬಿದನೂರಿನ ಸಮಾನತಾ ಸೌಧದಲ್ಲಿ ನಡೆದ ಪ್ರಗತಿಪರ ಚಿಂತಕ ಪ್ರೋ. ಗಂಗಾಧರಮೂರ್ತಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ಯಾಸಿಸ್ಟ್ ಸಂಸ್ಕೃತಿಯ ಜನರು ಸಂಶೋಧಕ ಡಾ. ಎಂ.ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶರ್ರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ಇನ್ನೂ ಹಲವರ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ಜೀವ ಕಾಯುವುದಕ್ಕೆ ಮೇಲೆ ಇದ್ದಾನೆ ಎಂದು ಹೇಳಿದರು.
ಜಾತಿ ತಾರತಮ್ಯ ತೊಡೆದು ಹಾಕಲು ಮುಂದಾಗಿದ್ದಕ್ಕೆ ನನ್ನನ್ನೆ ಬಹಿಷ್ಕಾರ ಹಾಕಿದರು. 1991ರಲ್ಲಿ ದೇವಾಲಯದಲ್ಲಿ ಅರ್ಚಕನನ್ನು ನೇಮಕ ಮಾಡಿದ್ದಕ್ಕೆ ಬಹಿಷ್ಕಾರ ಹಾಕಿದರು. ಜನರ ಬದಲಾವಣೆಯನ್ನು ಮತವಾಗಿ ಬದಲಾಯಿಸಿ. ನೀವು ಹೇಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬರುತ್ತೀರಿ ಅನ್ನೊದು ನಿಮ್ಮ ಮೇಲೆ ನಿಂತಿದೆ. ಸಿದ್ದರಾಮಯ್ಯ ನಾಡಿನ ಮುಂದಿನ ಆಶಾ ಕಿರಣ ಎಂದರು.
ಕಾಂಗ್ರೆಸ್ ಸರ್ಕಾರವನ್ನ 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಕಾಂಗ್ರೆಸ್ 10 ಪರ್ಸೆಂಟ್ ಸರ್ಕಾರ ಅಂದಿದ್ದರು. ನೀವು ಕಾಂಗ್ರೆಸ್ ಸರ್ಕಾರದಷ್ಟೇ ಇರಿ 40 ಪರ್ಸೆಂಟ್ ಆಗಬೇಡಿ. ರಾಜ್ಯದಲ್ಲಿರುವ 40 ಪರ್ಸೆಂಟ್ ತಪ್ಪಿಸಿ ನೀವು ಅಷ್ಟೆ ಇರಿ.ಬೆಲೆ ಏರಿಕೆಯ ಹಾಗೆ ಭ್ರಷ್ಟಾಚಾರ ಏರಿಕೆಯಾಗುತ್ತಿದೆ ನೋಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಯಾವ ಪಕ್ಷದಿಂದಲೂ ಭ್ರಷ್ಟಾಚಾರ ನಿವಾರಿಸಲು ಆಗುವುದಿಲ್ಲ. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಿ. ಗಣನೀಯವಾಗಿ ಭ್ರಷ್ಟಚಾರ ತಗ್ಗಿಸುವುದಾಗಿ ಭರವಸೆ ನೀಡಿ. ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ. ಜನ ಖಂಡಿತವಾಗಿ ಕಾಂಗ್ರೇಸ್ನ್ನು ಸ್ವಾಗತಿಸುತ್ತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Sat, 24 September 22