AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿಬಿದನೂರು ತಹಶೀಲ್ದಾರ್ ಕಚೇರಿಗೆ ತಪ್ಪದೇ ಪ್ರತಿದಿನ ಈ ವಿಶೇಷ ಅತಿಥಿಗಳು ಹಾಜರಿ ಹಾಕುತ್ತಿದ್ದಾರೆ!

Monkey menace: ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಬ್ಯಾಗ್‌ಗಳನ್ನು ಹೊತ್ತೊಯ್ಯುವ ಪ್ರಕರಣ, ಊಟ, ತಿಂಡಿಯ ಬಾಕ್ಸ್ ಎಳೆದಾಡುವ ಪ್ರಕರಣ ನಡೆದಿವೆ. ಇದರಿಂದ ಸುಸ್ತಾಗಿರುವ ಗೌರಿಬಿದನೂರು ತಹಶೀಲ್ದಾರ್ ಹೆಚ್.ಶ್ರೀನಿವಾಸ್ ಈಗ ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಗೌರಿಬಿದನೂರು ತಹಶೀಲ್ದಾರ್ ಕಚೇರಿಗೆ ತಪ್ಪದೇ ಪ್ರತಿದಿನ ಈ ವಿಶೇಷ ಅತಿಥಿಗಳು ಹಾಜರಿ ಹಾಕುತ್ತಿದ್ದಾರೆ!
ಗೌರಿಬಿದನೂರು ತಹಶೀಲ್ದಾರ್ ಕಚೇರಿಗೆ ತಪ್ಪದೇ ಪ್ರತಿದಿನ ಈ ವಿಶೇಷ ಅತಿಥಿಗಳು ಹಾಜರಿ ಹಾಕುತ್ತಿದ್ದಾರೆ!
TV9 Web
| Updated By: ಸಾಧು ಶ್ರೀನಾಥ್​|

Updated on: Sep 23, 2022 | 7:47 PM

Share

ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ತಾಲ್ಲೂಕು ಕಚೇರಿ ಎಂದರೆ ಆ ದಾಖಲೆ ಬೇಕು, ಈ ದಾಖಲೆ ಬೇಕು ಅಂತ ಪ್ರತಿದಿನ ಸಾವಿರಾರು ಜನ ಸಾರ್ವಜನಿಕರು ಆಗಮಿಸುವುದು ಸಹಜ. ಆದರೆ ಇಲ್ಲೊಂದು ತಾಲ್ಲೂಕು ಕಚೇರಿಗೆ ಪ್ರತಿದಿನ ವಿಶೇಷ ಅತಿಥಿಗಳು ಆಗಮಿಸಿ, ತಮ್ಮ ಹಾಜರಿ ಹಾಕುತ್ತಾರೆ. ಅಷ್ಟಕ್ಕೂ ಆ ವಿಶೇಷ ಅತಿಥಿಗಳಾದರೂ ಯಾರು ಅಂತ ಗೊತ್ತಾ?

ಇದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ತಾಲ್ಲೂಕು ಕಛೇರಿ (gauribidanur tahsildar office), ಗೌರಿಬಿದನೂರು-ಬೆಂಗಳೂರು ರಸ್ತೆಯಲ್ಲಿದೆ. ವಿಧಾನಸೌಧಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಇನ್ನು ಇಲ್ಲಿರುವ ತಹಶೀಲ್ದಾರ್ ಹೆಚ್.ಶ್ರೀನಿವಾಸ್, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿಧ ತಾಲ್ಲೂಕು ಮಟ್ಟದ ಕಛೇರಿಗಳನ್ನು ಹುಡುಕಿಕೊಂಡು ಸಾವಿರಾರು ಜನ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಈ ಕಛೇರಿಗೆ ಜನಗಳು ಬರುವುದು ವಿಶೇಷವಲ್ಲ. ಆಂಜನೇಯ ದಂಡು, ಮಂಗಗಳ ಹಿಂಡು ಈ ಕಛೇರಿಗೆ ಬರುತ್ತಿರುವುದು ವಿಶೇಷವಾಗಿದೆ (Monkey menace).

ತಾಲ್ಲೂಕು ಕಛೇರಿಯನ್ನೇ ಆವಾಸಸ್ಥಾನ ಮಾಡಿಕೊಂಡ ಮಂಗಗಳ ಹಿಂಡು

ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳನ್ನು ಹುಡುಕಿಕೊಂಡು ಗೌರಿಬಿದನೂರು ತಾಲ್ಲೂಕು ಕಛೇರಿಗೆ ಬಂದರೆ, ಅಧಿಕಾರಿ, ಸಿಬ್ಬಂದಿ ಕಾಣಿಸದಿದ್ದರೂ ಕಛೇರಿಯ ಒಳ ಮತ್ತು ಹೊರಗೆ ಕೋತಿಗಳ ದಂಡು ಕಾಣಿಸುತ್ತೆ. ಕಛೇರಿಯ ಮೆಟ್ಟಿಲುಗಳು, ಹಾಲ್‌ಗಳಲ್ಲಿ ಕೋತಿಗಳ ಕಾರುಬಾರು ನಡದೇ ಇರುತ್ತೆ. ಎತ್ತ ಕಣ್ಣು ಹಾಸಿದರೂ ಕೋತಿಗಳ ಉಪಟಳ, ಕಿಕ್ಕಿರಿಕ್ಕಿ ಎಂದು ಹಲ್ಲು ಕಿರಿದು ಒಂದಕ್ಕೊಂದು ಕ್ಯಾತೆ ತೆಗೆಯುವ ಕೋತಿಗಳ ಜಗಳ, ತರಳೆ, ತಮಾಷೆ ಮಾಡುವುದು, ಜೊತೆಗೆ ಜನ್ಮತಃ ಬಂದಿರುವ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಂಪಿಂಗ್, ರನ್ನಿಂಗ್, ವಾಕಿಂಗ್ ಎಲ್ಲಾ ಸಾಮಾನ್ಯವಾಗಿರುತ್ತೆ.

ಕೈಯಲ್ಲಿರುವ ಕವರ್‌ನ್ನು ಕೊಡುವವರೆಗೂ ಬಿಡಲ್ಲ

ಇನ್ನು ಅಧಿಕಾರಿ, ಸಿಬ್ಬಂದಿಯನ್ನು ಹುಡುಕಿಕೊಂಡು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಗ್ರಾಮೀಣ ಜನರು ಬರುವಾಗ ಬ್ಯಾಗ್‌ನಲ್ಲಿ ಊಟ, ತಿಂಡಿ, ನೀರು ತರುವುದು ಸಹಜ. ತಾಲ್ಲೂಕು ಕಛೇರಿಗೆ ಆಗಮಿಸುತ್ತಿದ್ದಂತೆ ಕಛೇರಿಯ ವರಾಂಡದಲ್ಲಿರುವ ಕೋತಿಗಳ ಉಪಟಳ ಹೇಳತೀರದು. ಕೈಯಲ್ಲಿ ಅಥವಾ ಬೆನ್ನಲ್ಲಿ ಬ್ಯಾಗ್ ನೋಡಿದ್ದೆ ತಡ, ಕೋತಿಗಳು ಮೈಮೇಲೆ ಎಗರುತ್ತವೆ. ಇನ್ನು ಇತ್ತೀಚಿಗೆ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದ ಮಹಿಳೆಯನ್ನು ಅಟ್ಟಿಸಿಕೊಂಡು ಹೋದ ಘಟನೆಯೂ ನಡೆಯಿತು.

ಕೋತಿ ಕಾಟಕ್ಕೆ ಸಿಬ್ಬಂದಿ ಸುಸ್ತು

ಗೌರಿಬಿದನೂರು ತಾಲ್ಲೂಕು ಕಛೇರಿಯಲ್ಲಿ ಜನರು ಬಂದು ಹೋಗುವುದಕ್ಕಿಂತಲೂ ಹೆಚ್ಚಾಗಿ ಕಛೇರಿಗೆ ಬಂದು ಹೋಗುವ ಕೋತಿಗಳ ಉಪಟಳ ಹೆಚ್ಚಾಗಿದೆ. ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಬ್ಯಾಗ್‌ಗಳನ್ನು ಹೊತ್ತೊಯ್ಯುವ ಪ್ರಕರಣ, ಊಟ, ತಿಂಡಿಯ ಬಾಕ್ಸ್ ಎಳೆದಾಡುವ ಪ್ರಕರಣ ನಡೆದಿವೆ. ಇದರಿಂದ ಸುಸ್ತಾಗಿರುವ ಗೌರಿಬಿದನೂರು ತಹಶೀಲ್ದಾರ್ ಹೆಚ್.ಶ್ರೀನಿವಾಸ್ ಈಗ ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಕಛೇರಿಯ ಕಿಟಕಿಗಳಿಗೆ ಮೆಶ್ ಅಳವಡಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಗೌರಿಬಿದನೂರು ತಾಲ್ಲೂಕು ಕಛೇರಿಯಲ್ಲಿ ವಾನರ ಸೈನ್ಯದಿಂದ ಅಧಿಕಾರಿ, ಸಿಬ್ಬಂದಿಗಳು ಸುಸ್ತಾಗಿದ್ದಾರೆ. – ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ