ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ; 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು

| Updated By: ಆಯೇಷಾ ಬಾನು

Updated on: Jan 30, 2022 | 12:19 PM

ಬಾವಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಅನಿಲ್ನನ್ನು ಹುಡುಕಿಕೊಂಡು ಬಾವಿ ಬಳಿ ಬಂದಾಗ ಘಟನೆ ಪತ್ತೆಯಾಗಿದೆ. ಅನಿಲ್ ರಕ್ಷಣೆಗೆ NDRF, ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಪೈಪ್ ಮೂಲಕ ಆಕ್ಸಿಜನ್ ಸಪ್ಲೆ ಮಾಡಿದ್ರು ಯುವಕ ಬದುಕುಳಿದಿಲ್ಲ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ; 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು
ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ
Follow us on

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಯುವಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಡಿಹಳ್ಳಿ ಬಳಿ 3 ಅಡಿ ಅಗಲ, 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಅನಿಲ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಬಾವಿಯಲ್ಲಿ ಬಿದ್ದಿದ್ದ ಮೊಬೈಲ್ ತೆಗೆಯಲು ಅನಿಲ್ ಹಗ್ಗ ಬಿಟ್ಟು ಕಿರು ಬಾಯಿಗೆ ಇಳಿದಿದ್ದ.

ಟೋಯಿಂಗ್ ವಾಹನದಲ್ಲಿದ್ದ ಕರ್ತವ್ಯ ನಿರತ ಎಎಸ್ ಐಗೆ ಮಹಿಳೆಯಿಂದ ಕಲ್ಲೇಟು
ಬೆಂಗಳೂರು: ಟೋಯಿಂಗ್ ವಾಹನದಲ್ಲಿದ್ದ ಕರ್ತವ್ಯ ನಿರತ ಎಎಸ್ಐಗೆ ಕಲ್ಲಿನಿಂದ ಹೊಡೆದಿದ್ದ ವಿಕಲಚೇತನ ಮಹಿಳೆ ಮಂಜುಳಾ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜ.24ರಂದು ಸಂಜೆ ಹಲಸೂರು ಗೇಟ್ ಸಂಚಾರಿ ಠಾಣೆ ಎಎಸ್ಐ ನಾರಾಯಣ್ ಮೇಲೆ ಮಹಿಳೆ ಮಂಜುಳಾ ಕಲ್ಲಿನಿಂದ ಹಲ್ಲೆ ಮಾಡಿದ್ದರು. ಎಎಸ್ ಐ ಮುಖಕ್ಕೆ ಕಲ್ಲುತಾಗಿ ರಕ್ತ ಬಂದಿತ್ತು. ಈ ವೇಳೆ ಕೂಡಲೇ ವಾಹನದಿಂದ ಕೆಳಗಿಳಿದ ಎಎಸ್ಐ ನಾರಾಯಣ್ ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ವಿಕಲಚೇತನ ಮಹಿಳೆ ಮೇಲೆ ಥಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇನ್ನು ಕಲ್ಲೇಟು ಹೊಡೆದ ವಿಕಲಚೇತನ ಮಹಿಳೆ ಮಂಜುಳಾಗೆ ಎಎಸ್ಐ ನಾರಾಯಣ್ ಬೂಟಿನಿಂದ ಒದ್ದಿದ್ದರು. ಕೂದಲೆಳೆದು ಎಳೆದಾಡಿ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದರು. ಘಟನೆ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆಗೆ ಟೋಯಿಂಗ್ ಮಾಡೋರು ಕಂಡ್ರೆ ಆಗಲ್ವಂತೆ. ಹೀಗಾಗಿ ಟೋಯಿಂಗ್ ನವರು ಕಂಡ್ರೆ ಸಾಕು ಕಲ್ಲಿನಿಂದ ಹಲ್ಲೆ ಮಾಡ್ತಿದ್ದರಂತೆ. ಅದೇ ರೀತಿ ಎಎಸ್ ಐ ನಾರಾಯಣ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸಿಟ್ಟಿಗೆದ್ದು ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೂಟಿನಿಂದ ಎಎಸ್ಐ ಹಲ್ಲೆ ನಡೆಸಿದ್ದಾರೆ.

ಘಟನೆ ಬಳಿಕ ಎಎಸ್ಐ ಗೆ ಕಲ್ಲೇಟು ಹೊಡೆದಿದ್ದ ಮಂಜುಳಾನನ್ನು ಎಸ್ಜೆ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆ ಸಂಬಂಧ ಮಂಜುಳಾ ವಿರುದ್ದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್​​ಕೌಂಟರ್​​; ಒಟ್ಟು 5 ಭಯೋತ್ಪಾದಕರನ್ನು ಕೊಂದ ಭದ್ರತಾ ಪಡೆಗಳು

Published On - 8:36 am, Sun, 30 January 22