ಚಿಕ್ಕಬಳ್ಳಾಪುರ: ಇತ್ತೀಚಿಗೆ ಯವಕರಿಗೆ ಬೈಕ್ ವೀಲಿಂಗ್, ಮೃಗ ಪಾಣಿಗಳೊಂದಿಗೆ ಆಟ, ನಿಷೇದಿತ ಸ್ಥಳಗಳಲ್ಲಿ ಹೋಗುವುದು ಮತ್ತು ನಿಷೇದಿತ ಕಾರ್ಯಗಳನ್ನು ಮಾಡುವುದು ರೂಢಿಯಾಗಿದೆ. ಇದಿರಂದ ಅವರು ಅಪಾಯಕ್ಕೆ ಸಿಲುಕಿ ಹಾಕಿಕೊಂಡು ನರಳಾಡುತ್ತಾರೆ. ಇದರಿಂದ ತಕ್ಕ ಪ್ರಾಯಶ್ಚಿತವನ್ನು ಅನುಭವಿಸುತ್ತಾರೆ. ಹೀಗೆಯೇ ಯುವಕನೋರ್ವ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ. ಅದಕ್ಕೆ ತಕ್ಕ ಪ್ರಾಯಶ್ಚಿತವನ್ನು ಅನುಭವಿಸಿದ್ದಾನೆ. ಚಿಕ್ಕಬಳ್ಳಾಪುರದಲ್ಲಿರುವ ಶ್ರೀನಿವಾಸ ಸಾಗರ ಆಣೆಕಟ್ಟನ್ನು (Srinivasa Sagara dam) ಹತ್ತಲು ಯುವಕರು ಮುಂದಾಗುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನು ಓದಿ: ಕೊವಿಡ್ ಲಸಿಕೆಯ ಸರ್ಟಿಫಿಕೆಟ್ನಿಂದ ಬಯಲಾಯ್ತು 2ನೇ ಹೆಂಡತಿಯ ರಹಸ್ಯ
ಶ್ರೀನಿವಾಸ ಸಾಗರ ಆಣೆಕಟ್ಟು ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ಪ್ರತಿದಿನ ನೂರಾರು ಪ್ರವಾಸಿಗರು ಆಣೆಕಟ್ಟನ್ನು ನೋಡಲು ಬರುತ್ತಾರೆ. ಹೀಗೆ ಆಣೆಕಟ್ಟನ್ನು ನೋಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಂದಿದ್ದಾನೆ. ಅಣೆಕಟ್ಟನ್ನು ನೋಡಲು ಬಂದವ ಸುಮ್ಮನೆ ಆಣೆಕಟ್ಟನ್ನು ನೋಡಿ ಹೋಗುವ ಬದಲು.ಡ್ಯಾಂನಿಂದ ನೀರು ಬರುತ್ತಿದ್ದರೂ, ಅದನ್ನು ಲೆಕ್ಕಿಸಿದೆ ಡ್ಯಾಂ ಹತ್ತಲು ಮುಂದಾಗಿದ್ದಾನೆ. ಸುಮಾರು 30 ಅಡಿ ಎತ್ತರದಷ್ಟು ಆಣೆಕಟ್ಟನ್ನು ಹತ್ತಿದ್ದಾನೆ. ಯುವಕ ಆಣೆಕಟ್ಟನ್ನು ಹತ್ತುತ್ತಿರುವುದನ್ನು ಸುತ್ತಮುತ್ತಲು ಇದ್ದ ಜನರು ನೋಡುವದರ ಜೊತೆಗೆ ವಿಡಯೋ ಮಾಡಿಕೊಳ್ಳುತ್ತಿದ್ದಾರೆ.
WATCH – A youth fell to the ground from a height of around 30-feet while trying to scale the wall of Srinivasa Sagara Dam in Chikkaballapur district of Karnataka. #SrinivasaSagaraDam #Karnataka #viralindo pic.twitter.com/oUU1uZanjY
— Mohammad fasahathullah siddiqui (@MdFasahathullah) May 23, 2022
ಇದನ್ನು ಓದಿ: ಬನ್ನೇರುಘಟ್ಟ ಪಾರ್ಕ್ ಸುತ್ತಲಿನ ಜನಕ್ಕೆ ಶುರುವಾಯ್ತು ಮಂಕಿ ಪಾಕ್ಸ್ ಭಯ, ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ
ನೋಡು ನೋಡುತ್ತಿದ್ದಂತೆ ಮೇಲೆ ಹತ್ತಿದ ಯುವಕನ ಕಾಲು ಜಾರಿದೆ. ತಕ್ಷಣ ಕೆಳಗೆ ಬಿದ್ದಿದ್ದಾನೆ. ಕೂಡಲೇ ಅಲ್ಲೆ ಇದ್ದ ಕೆಲ ಯುವಕರು, ಯುವಕ ಮೇಲೆ ಏಳಲು ಸಹಾಯ ಮಾಡಿದ್ದಾರೆ. ಆದರೆ ಯುವಕ ಮೇಲಿನಿಂದ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಣೆಕಟ್ಟು ಆಡಳಿತದ ಆಕ್ಷೇಪದ ನಡುವೆಯೂ ಯುವಕ ಗೋಡೆಯನ್ನು ಹತ್ತಲು ಯತ್ನಿಸಿದ್ದಾನೆ. ಆಡಳಿತದ ಆದೇಶ ಮತ್ತು ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
Published On - 6:29 pm, Mon, 23 May 22