AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಶಿಕ್ಷಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗ್ರಾಮದ ಮುಖಂಡ; ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್

ನೀನ್ಯಾವನು ಅಭಿವೃದ್ಧಿ ಮಾಡಿ ಎಂದು ರಾಜಕಾರಿಣಿಗಳನ್ನು ಕೇಳೋದಕ್ಕೆ, ಯಾವುದಾದ್ರು ಸರ್ಕಾರಿ ಅನುದಾನ ಬಂದ್ರೆ ಅಭಿವೃದ್ಧಿ ಆಗುತ್ತೆ ಬಿಡು. ಬೇಕಾದ್ರೆ ರಾಜಕಾರಿಣಿ ಬಳಿ ನಿನ್ನ ಹೆಂಡತಿ ಕಳಿಸಿ ಮಾಡಿಸ್ಕೋ. ಸರಿಯಾಗಿ ಮಕ್ಕಳಿಗೆ ಪಾಠ ಮಾಡಿಕೊಂಡು ಹೋಗೋದು ಕಲಿ ಎಂದು ಶಿಕ್ಷಕ ಪಾಪಣ್ಣನಿಗೆ ಗ್ರಾಮದ ಮುಖಂಡ ಚಲಪತಿ ಅವಾಚ್ಯವಾಗಿ ನಿಂದಿಸಿದ್ದಾರೆ.

ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಶಿಕ್ಷಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗ್ರಾಮದ ಮುಖಂಡ; ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 23, 2022 | 6:10 PM

Share

ಕೋಲಾರ: ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಗ್ರಾಮದ ಮುಖಂಡ ಅವಾಚ್ಯವಾಗಿ ಶಿಕ್ಷಕನನ್ನ ನಿಂದಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಚೋಳಘಟ್ಟ ಶಾಲೆ ಶಿಕ್ಷಕನಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆಡಿಯೋ ವೈರಲ್ ಆಗಿದೆ. ಗ್ರಾಮದ ಮುಖಂಡ ಚಲಪತಿ ಎಂಬುವವರಿಗೆ ಶಿಕ್ಷಕ ಪಾಪಣ್ಣ ಕರೆಮಾಡಿ ಶಾಲೆಯ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಶಿಕ್ಷಕನಿಗೆ ಅವಾಚ್ಯ ಶಬ್ದಗಳಿಂದ ಚಲಪತಿ ನಿಂದಿಸಿದ್ದಾರೆ.

ನೀನ್ಯಾವನು ಅಭಿವೃದ್ಧಿ ಮಾಡಿ ಎಂದು ರಾಜಕಾರಿಣಿಗಳನ್ನು ಕೇಳೋದಕ್ಕೆ, ಯಾವುದಾದ್ರು ಸರ್ಕಾರಿ ಅನುದಾನ ಬಂದ್ರೆ ಅಭಿವೃದ್ಧಿ ಆಗುತ್ತೆ ಬಿಡು. ಬೇಕಾದ್ರೆ ರಾಜಕಾರಿಣಿ ಬಳಿ ನಿನ್ನ ಹೆಂಡತಿ ಕಳಿಸಿ ಮಾಡಿಸ್ಕೋ. ಸರಿಯಾಗಿ ಮಕ್ಕಳಿಗೆ ಪಾಠ ಮಾಡಿಕೊಂಡು ಹೋಗೋದು ಕಲಿ ಎಂದು ಶಿಕ್ಷಕ ಪಾಪಣ್ಣನಿಗೆ ಗ್ರಾಮದ ಮುಖಂಡ ಚಲಪತಿ ಅವಾಚ್ಯವಾಗಿ ನಿಂದಿಸಿದ್ದಾರೆ. ಶಿಕ್ಷಕ ಪಾಪಣ್ಣನನ್ನು ನಿಂದಿಸಿರುವ ಆಡಿಯೋ ಫುಲ್ ವೈರಲ್ ಆಗಿದೆ. ಇದನ್ನೂ ಓದಿ: Team India: ಭರ್ಜರಿ ಪ್ರದರ್ಶನ ನೀಡಿದ್ರು ಟೀಮ್ ಇಂಡಿಯಾದಲ್ಲಿಲ್ಲ ಚಾನ್ಸ್​: ಎಲ್ಲವೂ ಬದಲಾಗಲಿದೆ ಎಂದ ಯುವ ಆಟಗಾರ

ಇನ್ನು ಚಲಪತಿ ಮಾತಿಗೆ ಕೋಪಗೊಂಡ ಶಿಕ್ಷಕ, ಈ ವೇಳೆ ನನ್ನ ಹೆಂಡತಿ ಬಗ್ಗೆ ಏಕೆ ಮಾತನಾಡುತ್ತಿದಿರಿ ಎಂದು ಮುಖಂಡನಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಹೌದು ಹೇಳಿದಿನಿ ನೀನು ಏನು ಬೇಕಾದ್ರೂ ಮಾಡಿಕೊ ಹೋಗು, ನನ್ನನು ಏನು ಮಾಡೋಕೆ ಆಗಲ್ಲ ಎಂದು ಮುಖಂಡ ಏಕವಚನದಲ್ಲಿ ತಿರುಗೇಟು ಕೊಟ್ಟಿದ್ದಾರೆ. ಅಸಹಾಯಕನಂತೆ ಶಿಕ್ಷಕ ಕರೆ ಕಟ್ ಮಾಡಿ ಸುಮ್ಮನಾಗಿದ್ದಾರೆ. ಸದ್ಯ ಇಬ್ಬರ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಚಲಪತಿಯ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ