ಚುನಾವಣೆಗೆ ವರ್ಷ ಮುಂಚಿತವಾಗಿಯೇ ಕೋಲಾರದಲ್ಲಿ ಕೇಸರಿ ಪಾಳಯದಿಂದ ಕಾರ್ಯತಂತ್ರ ಶುರು; ಕನಿಷ್ಠ 4 ಕ್ಷೇತ್ರದಲ್ಲಾದರೂ ಗೆಲ್ಲಬೇಕೆಂಬ ಟಾರ್ಗೆಟ್
ಕೋಲಾರ ಜಿಲ್ಲೆಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈರಿಂದ ತಮಿಳು ಪ್ರಾಬಲ್ಯವಿರುವ ಕೋಲಾರ, ಬಂಗಾರಪೇಟೆ, ಕೆಜಿಎಫ್ನಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ತಮಿಳು ಪ್ರಾಬಲ್ಯ ಇರುವೆಡೆ ಹವಾ ಎಬ್ಬಿಸುತ್ತಿದ್ದಾರೆ.
ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗಲೇ ಕೋಲಾರದಲ್ಲಿ ಕಮಲ ಅರಳಿಸಲು ಕಾರ್ಯತಂತ್ರ ಶುರುಮಾಡಿದೆ. ಇಬ್ಬರು ಮಾಜಿ ಶಾಸಕರುಗಳನ್ನು ಪಕ್ಷಕ್ಕೆ ಸೆಳೆದಿರುವ ಬಿಜೆಪಿ ಪಕ್ಷ, ಮೇಲಿಂದ ಮೇಲೆ ಕಾರ್ಯತಂತ್ರ ರೂಪಿಸುವ ಮೂಲಕ ಪಕ್ಷ ಬಲವರ್ದನೆ ಜೊತೆಗೆ ಕೋಲಾರ ಕೇಸರಿಕರಣ ವರ್ಕ್ಔಟ್ ಶುರುಮಾಡಿದೆ.
ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರದಲ್ಲಾದರೂ ಗೆಲ್ಲಬೇಕೆಂಬ ಟಾರ್ಗೆಟ್ ಕಳೆದ ವಿಧಾನಸಭಾ ಚುನಾವಣೆಯನ್ನು ನೋಡಿದ್ರೆ ಕೋಲಾರ ಜಿಲ್ಲೆಯ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಎಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ಕನಿಷ್ಠ ಮೂರು ನಾಲ್ಕು ಕ್ಷೇತ್ರದಲ್ಲಾದ್ರು ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ಸಲುವಾಗಿ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ಈಗಾಗಲೇ ಮಾಲೂರು ಜೆಡಿಎಸ್ ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಜೊತೆಗೆ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಕೆಲವು ಮುಖಂಡರುಗಳು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಅದರ ಜೊತೆಗೆ ಇನ್ನೊಂದಷ್ಟು ಜನರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರುವ ಲಕ್ಷಣಗಳು ಜೋರಾಗಿದೆ. ಇದನ್ನೂ ಓದಿ: Reeshma Nanaiah: ‘ಬಾನದಾರಿಯಲ್ಲಿ’ ರೀಷ್ಮಾ ನಾಣಯ್ಯ; ನಟಿಯ ಕ್ಯೂಟ್ ಫೋಟೋ ಆಲ್ಬಂ ಇಲ್ಲಿದೆ
ತಮಿಳರ ಮನ ಗೆಲ್ಲಲು ಅಣ್ಣಾಮಲೈರಿಂದ ತಮಿಳು ಏರಿಯಾದಲ್ಲಿ ರೌಂಡ್ಸ್ ಇದರ ಬೆನ್ನಲ್ಲೇ ಕೋಲಾರ ಜಿಲ್ಲೆಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈರಿಂದ ತಮಿಳು ಪ್ರಾಬಲ್ಯವಿರುವ ಕೋಲಾರ, ಬಂಗಾರಪೇಟೆ, ಕೆಜಿಎಫ್ನಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ತಮಿಳು ಪ್ರಾಬಲ್ಯ ಇರುವೆಡೆ ಹವಾ ಎಬ್ಬಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಕೋಲಾರ ಜಿಲ್ಲೆಯನ್ನು ಟಾರ್ಗೆಟ್ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬೇಕು ಇಲ್ಲವಾದರೆ ಕನಿಷ್ಠ ನಾಲ್ಕು ಕ್ಷೇತ್ರದಲ್ಲಾದರೂ ಗೆಲ್ಲಲೇ ಬೇಕು ಎಂಬ ಪಣ ತೊಟ್ಟಿದೆ ಅನ್ನೋದು ಸಂಸದ ಮುನಿಸ್ವಾಮಿ ಹಾಗೂ ತಮಿಳುನಾಡಿನ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಮಾತು.
ಕೋಲಾರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬಿಜೆಪಿ ಪಕ್ಷ ಬಲವರ್ದನೆ ಬೆನ್ನಲ್ಲೇ ಹೆಚ್ಚಾಗುತ್ತಿದೆ ಭಿನ್ನಮತ ಒಂದೆಡೆ ಜಿಲ್ಲೆಯಲ್ಲಿ ಪಕ್ಷ ಬಲವರ್ದನೆ ಕೆಲಸ ನಡೆಯುತ್ತಿದ್ದರೆ ಇನ್ನೊಂದೆಡೆ ಪಕ್ಷದಲ್ಲಿ ಮನಸ್ಥಾಪ ಹಾಗೂ ಭಿನ್ನಮತ ಕೂಡಾ ಕಂಡು ಬರುತ್ತಿದೆ, ಕೆಜಿಎಫ್ ಮಾಜಿ ಶಾಸಕ ಸಂಪಂಗಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಅಣ್ಣಮಲೈ ಜಿಲ್ಲೆಯಲ್ಲಿ ಹಾಗೂ ಕೆಜಿಎಫ್ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಸಂಪಂಗಿಯವರು ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ತಮ್ಮ ಹಾಗೂ ಸಂಸದ ಮುನಿಸ್ವಾಮಿ ನಡುವಿನ ಭಿನ್ನಮತ ಹೊರಹಾಕಿದ್ರು. ಇದು ಕೆಜಿಎಫ್ ಕಥೆಯಾದರೆ ಮಾಲೂರಿನಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಶಾಸಕ ಮಂಜುನಾಥಗೌಡ ಅವರು ಪಕ್ಷ ಸೇರ್ಪಡೆಯನ್ನು ವಿರೋಧಿಸಿ ಮಾಲೂರು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಪ್ರತಿಭಟನಾ ರ್ಯಾಲಿ ಮಾಡಿ ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡವನನ್ನು ತಮ್ಮ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಪುಟ್ಟರಂಗಶೆಟ್ಟಿ
ಒಟ್ಟಾರೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ, ಅದರ ಜೊತೆಗೆ ಒಂದೆಡೆ ಪಕ್ಷಕ್ಕೆ ಹೊಸಬರನ್ನು ಸೇರ್ಪಡೆ ಮಾಡಿಕೊಂಡು ಪಕ್ಷದ ಶಕ್ತಿ ಹೆಚ್ಚಿಸುತ್ತಾ ಹೋದಂತೆ ಮೂಲ ಬಿಜೆಪಿಯವರಿಂದ ಅಸಮಧಾನ ಹೊರಬೀಳುವ ಮೂಲಕ ಮತ್ತೊಂದೆಡೆ ಭಿನ್ನಮತಕೂಡಾ ಜೋರಾಗಿಯೇ ಸದ್ದು ಮಾಡುತ್ತಿದ್ದು, ಗೆಲುವಿಗಾಗಿ ಹಂಬಲಿಸುತ್ತಿರುವ ಬಿಜೆಪಿ ಭಿನ್ನಮತ ಶಮನಕ್ಕೆ ಯಾವರೀತಿ ಮುಲಾಮು ಹಚ್ಚುತ್ತೆ ಅನ್ನೋದೇ ಕುತೂಹಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
Published On - 9:25 pm, Sun, 22 May 22