75ರ ಗಂಡಿನ ಜೊತೆ 35ರ ಮಹಿಳೆಯ ಮದುವೆ: ಇಬ್ಬರಿಗೂ ವಿವಾಹವಾಗಿ ಮಕ್ಕಳೂ ಇದ್ದಾರೆ, ಪರಸ್ಪರ ಆಶ್ರಯಕ್ಕಾಗಿ ಮರುಮದುವೆಯಾದರು!

ಅಬವರಿಬ್ಬರ ಜೀವನಗಳ ಕತೆಯೂ ವಿಭಿನ್ನ! ಆತನಿಗೆ 75 ವರ್ಷ ವಯಸ್ಸು, ಆಕೆಗೆ 35 ವರ್ಷ ವಯಸ್ಸು. ಇಬ್ಬರಿಗೂ ಪರಸ್ಪರ ಆಶ್ರಯ, ಆಸರೆ, ಲಾಲನೆ, ಪಾಲನೆ, ಪೋಷಣೆ ಅಗತ್ಯವಾಗಿದ್ದು, ಇಬ್ಬರೂ ದೇವಸ್ಥಾನದಲ್ಲಿ ಅದ್ದೂರಿ ಮದುವೆ ಮಾಡಿಕೊಂಡು ಯುವಕ-ಯುವತಿಯರೇ ನಾಚುವಂತೆ ಮಾಡಿರುವ ಪ್ರಸಂಗ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ನಿವಾಸಿ 75 ವರ್ಷದ ಈರಣ್ಣ ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದ 35 ವರ್ಷದ ಅನುಶ್ರೀ ಮದುವೆಯಾದ ಜೋಡಿ.

75ರ ಗಂಡಿನ ಜೊತೆ 35ರ ಮಹಿಳೆಯ ಮದುವೆ: ಇಬ್ಬರಿಗೂ ವಿವಾಹವಾಗಿ ಮಕ್ಕಳೂ ಇದ್ದಾರೆ, ಪರಸ್ಪರ ಆಶ್ರಯಕ್ಕಾಗಿ ಮರುಮದುವೆಯಾದರು!
75ರ ವರನ ಜೊತೆ 35ರ ವಧುವಿನ ಮದುವೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Sep 09, 2023 | 4:02 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 9: ಆತನಿಗೆ 75 ವರ್ಷ ವಯಸ್ಸು, ಆಕೆಗೆ 35 ವರ್ಷ ವಯಸ್ಸು. ಇಬ್ಬರಿಗೂ ಪರಸ್ಪರ ಆಶ್ರಯ, ಆಸರೆ, ಲಾಲನೆ, ಪಾಲನೆ, ಪೋಷಣೆ ಅಗತ್ಯವಾಗಿದ್ದು, ಇಬ್ಬರು ದೇವಸ್ಥಾನವೊಂದರಲ್ಲಿ ಅದ್ದೂರಿ ಮದುವೆ ಮಾಡಿಕೊಂಡು ಯುವಕ-ಯುವತಿಯರೇ ನಾಚುವಂತೆ ಮಾಡಿರುವ ಪ್ರಸಂಗ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ (sidlaghatta) ತಾಲ್ಲೂಕು ಮೇಲೂರು ಗ್ರಾಮದ ನಿವಾಸಿ 75 ವರ್ಷದ ಈರಣ್ಣ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹಾಗೂ ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದ 35 ವರ್ಷದ ಅನುಶ್ರೀ ಮದುವೆಯಾದ ಜೋಡಿ.

ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳಿದ್ದಾರೆ:

ಈರಣ್ಣನಿಗೆ ಮದುವೆಯಾಗಿ ಪತ್ನಿ ಮೃತಪಟ್ಟಿದ್ದಾಳೆ. ಆದರೆ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗಳನ್ನು ಸ್ಥಿತಿವಂತ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿದ್ದಾರೆ. ಮಗನೂ ಸಹಾ ಆರ್ಥಿಕವಾಗಿ, ಸಾಮಾಜಿಕವಾಗಿ ಚನ್ನಾಗಿದ್ದಾನೆ. ಕಳೆದ 5-6 ವರ್ಷಗಳಿಂದ ಈರಣ್ಣ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಮಗಳು, ಮಗ ಹಾಗೂ ಬಂಧು-ಬಳಗ ಯಾರೂ ಸಹಾ ಈರಣ್ಣನನ್ನು ನೋಡಿಕೊಳ್ಳುತ್ತಿಲ್ಲ.

ಇನ್ನು ಈರಣ್ಣನಿಗೆ 1 ಎಕರೆ ಬೆಲೆಬಾಳುವ ಜಮೀನಿದ್ದು, ಮಕ್ಕಳ ಹೆಸರಿಗೆ ವಿಲ್ ಮಾಡಿದ್ದಾನೆ. ಸುಮಾರು 25 ಲಕ್ಷ ರೂಪಾಯಿಗಳನ್ನು ಮಗಳಿಗೆ ಧಾರೆ ಎರೆದಿದ್ದಾನೆ. ಆದರೂ ಮಗಳು ತಂದೆಯ ಮೇಲೆ ಗಲಾಟೆ ಮಾಡಿ, ಇರೋ ಆಸ್ತಿಯನ್ನು ತನಗೆ ಬರೆದುಕೊಡುವಂತೆ ಕಿರುಕುಳ ನೀಡಿ, ಗಲಾಟೆ ಮಾಡಿದ್ದಾಳಂತೆ. ಇನ್ನು ಈರಣ್ಣನಿಗೆ ಹೃದಯ ಸಮಸ್ಯೆ, ಬಿಪಿ, ಶುಗರ್ ಇದ್ದು, ಲಾಲನೆ, ಪಾಲನೆ, ಪೋಷಣೆ ಮಾಡಲು ಯಾರೂ ಇಲ್ಲ. ಇದರಿಂದ ಮತ್ತೊಂದು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿ, ನಿನ್ನೆ ಅನುಶ್ರೀಯನ್ನು ಮದುವೆ ಮಾಡಿಕೊಂಡಿದ್ದಾನೆ.

ಅನುಶ್ರೀ ಕಥೆ ಈರಣ್ಣನಿಗಿಂತ ಭಿನ್ನ

ಇನ್ನು ಸೊಲ್ಲಾಪುರ ಮೂಲದ ಅನುಶ್ರೀಗೆ ಅಪ್ಪ, ಅಮ್ಮ, ಬಂಧು-ಬಳಗ ಯಾರೂ ಇಲ್ಲವಂತೆ. ಆದರೆ ಪ್ರೀತಿಸಿದ ವ್ಯಕ್ತಿಯೊಬ್ಬನನ್ನು ನಂಬಿ, ಆತನ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಅನುಶ್ರೀಗೆ 6 ವರ್ಷದ ಒಬ್ಬ ಮಗನಿದ್ದಾನೆ. ಆದರೆ ನಂಬಿ ಮದುವೆ ಮಾಡಿಕೊಂಡವ ಅನುಶ್ರೀಯನ್ನು ಬಿಟ್ಟು ಹೊರಟು ಹೋಗಿದ್ದಾನೆ. ಇದರಿಂದ ತಂದೆ, ತಾಯಿ, ಬಂಧು-ಬಳಗ, ಗಂಡನಿಲ್ಲದೇ ಅನಾಥಳಾಗಿದ್ದ ಅನುಶ್ರೀಗೆ ಚಿಕ್ಕಬಳ್ಳಾಪುರದ ಕೋಟೆ ನಿವಾಸಿ ನರ್ಸ್ ಒಬ್ಬರು ಆಶ್ರಯ ನೀಡಿ ಸಂತೈಸಿದ್ದಾರೆ.

ಈರಣ್ಣನ ಬೇಡಿಕೆಯಂತೆ ಮದುವೆ

ಮಗ, ಮಗಳು, ಬಂಧು-ಬಳಗ ಇದ್ದರೂ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದ ಈರಣ್ಣ ಕೊನೆಗಾಲದಲ್ಲಿ ಲಾಲನೆ, ಪಾಲನೆ, ಪೋಷಣೆಗಾಗಿ ಬೇರೆ ಮದುವೆ ಮಾಡಿಕೊಳ್ಳಲು ಆಸೆ ವ್ಯಕ್ತಪಡಿಸಿದ್ದ. ತನ್ನ ಆಸೆಯನ್ನು ಈಡೇರಿಸುವಂತೆ ಕೆಲವು ಮದುವೆ ಬ್ರೋಕರ್‌ಗಳಿಗೆ ಮನವಿ ಮಾಡಿದ್ದ. ತನ್ನ ಹೆಸರಿನಲ್ಲಿ 4 ಗುಂಟೆ ಜಮೀನು, ಮನೆ ಇದೆ ಅದನ್ನು ತನ್ನ ನೂತನ ಪತ್ನಿಗೆ ಬರೆಯುವುದಾಗಿ ಮಾತು ಕೊಟ್ಟಿದ್ದ. ಇದರಿಂದ ನಾಲ್ಕು ಜನ ಮಧ್ಯಸ್ಥಿಕರು ಸೇರಿ ಅನುಶ್ರೀ ಹಾಗೂ ಈರಣ್ಣನಿಗೆ ಮದುವೆ ಮಾಡಿ ಹನಿಮೂನ್‌ಗೆ ಕಳುಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:56 pm, Sat, 9 September 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ