ಚಿಕ್ಕಬಳ್ಳಾಪುರ: ರಾಜಕೀಯ ಮೇಲಾಟದಲ್ಲಿ ನೆನೆಗುದಿಗೆ ಬಿದ್ದ ಅಂತರಾಷ್ಟ್ರೀಯ ಹೂವು ಮಾರುಕಟ್ಟೆ; ಇಲ್ಲಿದೆ ಮಾಹಿತಿ
ಆ ಜಿಲ್ಲೆಯೊಂದರಲ್ಲೇ 12,500 ಎಕರೆ ಪ್ರದೇಶದಲ್ಲಿ ತರಹೆವಾರಿ ಹೂವುಗಳನ್ನು ಬೆಳೆಯುತ್ತಾರೆ. ಅಲ್ಲಿ ಬೆಳೆದ ಹೂವುಗಳು ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಅಲ್ಲಿಗೆ ದೇಶದ ವಿವಿಧ ಭಾಗಗಳಿಂದ ದೊಡ್ಡ ದೊಡ್ಡ ಹೂವಿನ ವರ್ತಕರು ಬರುತ್ತಾರೆ. ಇದರಿಂದ ಕಳೆದ ಬಿಜೆಪಿ ಸರ್ಕಾರ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಈಗ ಹಾಲಿ-ಮಾಜಿ ಸಚಿವರುಗಳ ರಾಜಕೀಯ ಮೇಲಾಟದಲ್ಲಿ ಅಂತರಾಷ್ಟ್ರೀಯ ಹೂವು ಮಾರುಕಟ್ಟೆಯ ಕನಸ್ಸು ನೆನೆಗುದಿಗೆ ಬಿದ್ದಿದೆ.
ಚಿಕ್ಕಬಳ್ಳಾಪುರ, ಸೆ.10: ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವು (Flowers) ಮಾರಾಟಕ್ಕೆ ಜಾಗ ಸಾಕಾಗುತ್ತಿಲ್ಲ ಎನ್ನುವ ಕಾರಣಕ್ಕೆ ಚಿಕ್ಕಬಳ್ಳಾಪುರ (Chikkaballapur) ನಗರದ ಹೊರವಲಯದಲ್ಲಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 12,500 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಸೇವಂತಿ, ಗುಲಾಬಿ ಸೇರಿದಂತೆ ಆಕರ್ಷಕ ಕಲರ್‌ಪುಲ್ ಹೂವುಗಳನ್ನು ಬೆಳೆಯಲಾಗುತ್ತದೆ. ಪ್ರತಿದಿನ ಸಾವಿರಾರು ಜನ ರೈತರು ಮಾರುಕಟ್ಟೆಗೆ ಬರುತ್ತಾರೆ. ಇದರಿಂದ ಕಳೆದ ಬಿಜೆಪಿ ಸರ್ಕಾರ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಈಗ ರಾಜಕೀಯ ಮೇಲಾಟದಲ್ಲಿ ಹೂವು ವರ್ತಕರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವರ್ತಕರ ಸಂಘದಲ್ಲೇ ಎರಡು ಬಣ
ಇನ್ನು ಹೂವು ವರ್ತಕರ ಸಂಘದಲ್ಲೇ ಎರಡು ಪಕ್ಷ, ಎರಡು ಬಣಗಳಾಗಿವೆ. ತಾತ್ಕಾಲಿಕ ಮಾರುಕಟ್ಟೆಯಲ್ಲೇ ವ್ಯಾಪಾರ ವಹಿವಾಟು ನಡೆಯಲಿ ಎಂದು ಒಂದು ಬಣವಾದರೆ, ಎಪಿಎಂಸಿ ಪ್ರಾಂಗಣದಲ್ಲಿ ನಡೆಯಲಿ ಎಂದು ಮತ್ತೊಂದು ಬಣದವರು ಹೇಳುತ್ತಿದ್ದಾರೆ. ಈ ಮದ್ಯೆ ನಿಗಧಿತ ನೂತನ ಮಾರುಕಟ್ಟೆಯ ಸ್ಥಳ ಬದಲು ಮಾಡಿ ಎಂದು ಇನ್ನೊಂದು ಬಣದವರ ಕೂಗಾಗಿದೆ. ಇದರಿಂದ ಹೂವು ಮಾರುಕಟ್ಟೆಗೆ ನೂರೆಂಟು ವಿಘ್ನ ಆರಂಭವಾಗಿದೆ ಎಂದು ಹೂವು ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಹೇಳಿದ್ದಾರೆ.
ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ 108 ಚಿನ್ನದ ಕಮಲದ ಹೂವುಗಳನ್ನು ದಾನ ಮಾಡಿದ ಭಕ್ತ! ಅವುಗಳ ಬೆಲೆ ಎಷ್ಟು ಗೊತ್ತಾ?
ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮದ ಬಳಿ ನೂತನ ಹೂವು ಮಾರುಕಟ್ಟೆ ಆರಂಭಿಸಲು 10 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಅಲ್ಲಿ ಕಲ್ಲುಬಂಡೆಗಳಿವೆ ಎನ್ನುವ ನೆಪವೊಡ್ಡಿ ಮತ್ತೊಂದು ಜಾಗಕ್ಕೆ ಹುಡುಕಾಟ ಆರಂಭವಾಗಿದೆ. ರಾಜಕೀಯ ಮೇಲಾಟ ಒಣ ಪ್ರತಿಷ್ಠೆಗೋಸ್ಕರ ಅಂತರಾಷ್ಟ್ರೀಯ ಹೂವು ಮಾರುಕಟ್ಟೆ ಬಲಿಯಾಗುತ್ತಾ ಕಾದುನೋಡಬೇಕು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ