Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ತಿಮ್ಮಪ್ಪನಿಗೆ 108 ಚಿನ್ನದ ಕಮಲದ ಹೂವುಗಳನ್ನು ದಾನ ಮಾಡಿದ ಭಕ್ತ! ಅವುಗಳ ಬೆಲೆ ಎಷ್ಟು ಗೊತ್ತಾ?

ತಿರುಪತಿ ತಿಮ್ಮಪ್ಪನಿಗೆ 108 ಚಿನ್ನದ ಕಮಲದ ಹೂವುಗಳನ್ನು ದಾನ ಮಾಡಿದ ಭಕ್ತ! ಅವುಗಳ ಬೆಲೆ ಎಷ್ಟು ಗೊತ್ತಾ?

ಸಾಧು ಶ್ರೀನಾಥ್​
|

Updated on: Sep 07, 2023 | 12:52 PM

ಕಡಪ ಜಿಲ್ಲೆಯ ಯರ್ರಮುಕ್ಕಪಲ್ಲಿಯ ಮಾಮಿಲಪಲ್ಲಿಯ 62 ವರ್ಷದ ಭಕ್ತ ರಾಜಾ ರೆಡ್ಡಿ ಅವರು ನಿನ್ನೆ ಬುಧವಾರ ಪ್ರಸಿದ್ಧ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ 108 ಚಿನ್ನದ ಕಮಲಗಳನ್ನು ಅರ್ಪಿಸಿದರು. ಲಲಿತಾ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಕುಮಾರ್ ಅವರ ಸಮ್ಮುಖದಲ್ಲಿ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಕಾಣಿಕೆಯನ್ನು ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು

ಕಡಪ ಜಿಲ್ಲೆಯ ಯರ್ರಮುಕ್ಕಪಲ್ಲಿಯ ಮಾಮಿಲಪಲ್ಲಿಯ 62 ವರ್ಷದ ಭಕ್ತ ರಾಜಾ ರೆಡ್ಡಿ ಅವರು ನಿನ್ನೆ ಬುಧವಾರ ಪ್ರಸಿದ್ಧ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ 108 ಚಿನ್ನದ ಕಮಲಗಳನ್ನು ಅರ್ಪಿಸಿದರು. ಲಲಿತಾ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಕುಮಾರ್ ಅವರ ಸಮ್ಮುಖದಲ್ಲಿ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಕಾಣಿಕೆಯನ್ನು ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಆರು ತಿಂಗಳ ಅವಧಿಯಲ್ಲಿ ನುರಿತ ಕುಶಲಕರ್ಮಿಗಳಿಂದ ಈ ಸುವರ್ಣ ಕಮಲದ ಹೂವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಿರಣ್ ಕುಮಾರ್ ಹೇಳಿದರು.

ಕಲಿಯುಗದ ಆರಾಧ್ಯ ದೈವ ತಿರುಮಲ ತಿಮ್ಮಪ್ಪನ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಎಂಬುದು ತಿಳಿದಿರುವ ವಿಷಯ. ಜನರು ಉಡುಗೊರೆಗಳನ್ನು ನೀಡಲು ದೇವಸ್ಥಾನದಲ್ಲಿ ಪೈಪೋಟಿಯನ್ನೇ ನಡೆಸುತ್ತಾರೆ. ತಮ್ಮ ತಮ್ಮ ಶಕ್ತ್ಯಾನುಸಾರ ಉಡುಗೊರೆಗಳನ್ನು ನೀಡುತ್ತಾರೆ. ಕೆಲವರು ದುಡ್ಡು ಕೊಡ್ತಾರೆ. ಇನ್ನು ಹಲವರು ವಿದೇಶಿ ಡಾಲರ್ ಮತ್ತು ಆಭರಣಗಳನ್ನು ನೀಡುತ್ತಾರೆ. ಇತ್ತೀಚೆಗಷ್ಟೇ ಕಡಪಾ ಮೂಲದ ಡಾ. ರಾಜ ರೆಡ್ಡಿ ಎಂಬ ಭಕ್ತರು ಶ್ರೀಗಳಿಗೆ 108 ಚಿನ್ನದ ಪುಷ್ಪಗಳನ್ನು ಅರ್ಪಿಸಿದ್ದಾರೆ. ಬುಧವಾರ ಬೆಳಗ್ಗೆ ವಿಐಪಿ ಬಿಡುವಿನ ವೇಳೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಲಲಿತಾ ಜ್ಯುವೆಲ್ಲರಿ ಮುಖ್ಯಸ್ಥ ಕಿರಣ್‌ ಅವರೂ ಈ ಸಂದರ್ಭದಲ್ಲಿ ಇದ್ದರು. ನಂತರ ರಾಜಾ ರೆಡ್ಡಿ ಅವರು 108 ಚಿನ್ನದ ಹೂವುಗಳನ್ನು ಶ್ರೀವಾರಿಯ ಸೇವೆಗಾಗಿ ಟಿಟಿಡಿ ಅಧಿಕಾರಿಗಳಿಗೆ ನೀಡಿದರು. ಡಾ.ರಾಜಾ ರೆಡ್ಡಿ ಅವರ ಕೋರಿಕೆಯಂತೆ ತಮ್ಮ ಚಿನ್ನದ ಕುಶಲಕರ್ಮಿಗಳು 6 ತಿಂಗಳ ಕಾಲ ಶ್ರಮವಹಿಸಿ ಈ ಚಿನ್ನದ ಹೂಗಳನ್ನು ತಯಾರಿಸಿದ್ದಾರೆ ಎಂದು ಕಿರಣ್ ತಿಳಿಸಿದರು. ಇದಕ್ಕಾಗಿ ರಾಜಾರೆಡ್ಡಿ 2 ಕೋಟಿ ರೂ ಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದರು.