ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಸಮುದ್ರತೀರದಲ್ಲಿ ಅಲೆಗಳ ಮೇಲೆ ತೇಲಿದ ದೃಶ್ಯ ವೈಭವ ಇಲ್ಲಿದೆ ನೋಡಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮತ್ತೊಮ್ಮೆ ತಮ್ಮ ಇಷ್ಟದ ಹವ್ಯಾಸವನ್ನು ಜಗತ್ತಿಗೆ ತೋರಿಸಿದ್ದಾರೆ. ಇವಾಂಕಾ ಮಿಯಾಮಿ ಅವರು ತಮ್ಮ ಅದ್ಭುತವಾದ ವೇವ್ ಬೋರ್ಡಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಮಿಯಾಮಿ ಬೀಚ್‌ನ ತೀರದಲ್ಲಿ ಅಲೆಗಳ ಮೇಲೆ ಸವಾರಿ ಮಾಡುತ್ತಿರುವ ವೀಡಿಯೊವನ್ನು ಇವಾಂಕಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮತ್ತೊಮ್ಮೆ ತಮ್ಮ ಇಷ್ಟದ ಹವ್ಯಾಸವನ್ನು ಜಗತ್ತಿಗೆ ತೋರಿಸಿದ್ದಾರೆ. ಇವಾಂಕಾ ಮಿಯಾಮಿ ಅವರು ತಮ್ಮ ಅದ್ಭುತವಾದ ವೇವ್ ಬೋರ್ಡಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಮಿಯಾಮಿ ಬೀಚ್‌ನ ತೀರದಲ್ಲಿ ಅಲೆಗಳ ಮೇಲೆ ಸವಾರಿ ಮಾಡುತ್ತಿರುವ ವೀಡಿಯೊವನ್ನು ಇವಾಂಕಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ದೋಣಿಯಲ್ಲಿ ಕುಳಿತಿದ್ದ ಇವಾಂಕಾ ಅವರನ್ನು ಕಂಡು ಏಳು ವರ್ಷದ ಅವರ ಮಗ ಥಿಯೋ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದ. ಇವಾಂಕಾ ಹಳದಿ ಬಣ್ಣದ ಈಜುಡುಗೆ, ಕಪ್ಪು ಬಣ್ಣದ ಲೈಫ್ ಜಾಕೆಟ್ ಮತ್ತು ಬೇಸ್‌ಬಾಲ್ ಕ್ಯಾಪ್ ಧರಿಸಿದ್ದರು.
ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಈ ಹಿಂದೆ ಕಪ್ಪು ಈಜುಡುಗೆಯಲ್ಲಿ ಸರ್ಫ್‌ಬೋರ್ಡ್ ಹಿಡಿದು ಕೋಸ್ಟರಿಕಾದ ಕಡಲತೀರದಲ್ಲಿ ಬರಿಗಾಲಿನಲ್ಲಿ ಅಡ್ಡಾಡುತ್ತಿರುವ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದರು. ಇವಾಂಕಾ ಸರ್ಫಿಂಗ್ ಜೊತೆಗೆ ಇತರ ಹೊರಾಂಗಣ ಆಟಗಳಲ್ಲಿಯೂ ಭಾಗವಹಿಸುತ್ತಾರೆ. ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನದ ನಂತರ ಇದು ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರ ಮೊದಲ ಪೋಸ್ಟ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ