ಶ್ರೀಕೃಷ್ಣ ಜನ್ಮಾಷ್ಟಮಿ: ಇಸ್ಕಾನ್ ಮಂದಿರದಲ್ಲಿ ಪೂಜೆ-ಪ್ರಸಾದ ವ್ಯವಸ್ಥೆ, ಬೆಳಗ್ಗೆಯಿಂದಲೇ ಕಿಕ್ಕಿರಿದ ಭಕ್ತಸಾಗರ
ವರದಿಗಾರರು ಹೇಳುವ ಪ್ರಕಾರ ಬೆಳಗ್ಗೆ 8ರಿಂದ ರಾತ್ರಿ 10ಗಂಟೆವರೆಗೆ ಮಾತ್ರ ಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ 12 ಗಂಟೆಗೆ ಅರ್ಚಕರು ಮತ್ತೊಮ್ಮೆ ಪಂಚಾಭಿಷೇಕ ನೆರವೇರಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಮಹಾಮಂಗಳಾರತಿ ಸಮಯದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ರಾಜ್ಯಪಾಲರು ಸೇರಿದಂತೆ ಹಲವಾರು ರಾಜಕಾರಣಿಗಳು ಆಗಮಿಸುವ ನಿರೀಕ್ಷೆ ಇದೆ.
ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯಂದು (Sri Krishna Janmashtami) ನಗರದ ಇಸ್ಕಾನ್ ನಲ್ಲಿ (ISKCON temple) ಪೂಜಾ ಕೈಂಕರ್ಯಗಳಿಗೆ, ಭಜನೆ, ಪ್ರಸಾದಗಳಮನ್ನೊಳಗೊಂಡ ಸಂಭ್ರಮಕ್ಕೆ ಎಣೆಯಿರದು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ್ತಿ ನೀಡುವ ಮಾಹಿತಿ ಪ್ರಕಾರ ಬೆಳಗಿನ ಜಾವವೇ ಕೃಷ್ಣನಿಗೆ ಪಂಚಾಭಿಷೇಕ (pancha abhishekam) ಮತ್ತು ವಿಶೇಷ ಪುಷ್ಪಾಭಿಷೇಕ ಮಾಡಲಾಗಿದೆ ಮತ್ತು ಭಕ್ತಾದಿಗಳು ಬೆಳಗ್ಗೆ 5 ಗಂಟೆಯಿಂದಲೇ ಇಲ್ಲಿಗೆ ಬರಲಾರಂಭಿಸಿದ್ದಾರಂತೆ. ಕೃಷ್ಣನಿಗೆ ವಜ್ರ ವೈಢೂರ್ಯಗಳಿಂದ ಅಲಂಕರಿಸಲಾಗಿದೆ. ಗರ್ಭಗುಡಿಯ (sanctorum) ಮುಂದೆ ನಡೆಯುತ್ತಿರುವ ಭಜನೆಯಲ್ಲಿ ಭಕ್ತಾದಿಗಳು ಭಾಗಿಇಯಾಗುತ್ತಿದ್ದಾರೆ. ಅಲ್ಲಿ ಜನ ಭಕ್ತಿಭಾವದಿಂದ ಕೂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಂದಿರಕ್ಕೆ ಆಗಮಿಸುವ ಕೃಷ್ಣಭಕ್ತರಿಗೆ ಯಾವುದೇ ಸಮಸ್ಯೆಯಾಗದಿರಲು ಪೊಲೀಸ್ ಮತ್ತು ವಲಂಟೀರ್ ಗಳನ್ನು ನಿಯೋಜಿಸಲಾಗಿದೆ. ವರದಿಗಾರರು ಹೇಳುವ ಪ್ರಕಾರ ಬೆಳಗ್ಗೆ 8ರಿಂದ ರಾತ್ರಿ 10ಗಂಟೆವರೆಗೆ ಮಾತ್ರ ಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ 12 ಗಂಟೆಗೆ ಅರ್ಚಕರು ಮತ್ತೊಮ್ಮೆ ಪಂಚಾಭಿಷೇಕ ನೆರವೇರಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಮಹಾಮಂಗಳಾರತಿ ಸಮಯದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ರಾಜ್ಯಪಾಲರು ಸೇರಿದಂತೆ ಹಲವಾರು ರಾಜಕಾರಣಿಗಳು ಆಗಮಿಸುವ ನಿರೀಕ್ಷೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ