AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಕೃಷ್ಣಜನ್ಮಾಷ್ಟಮಿ, ಇಸ್ಕಾನ್‌ನಲ್ಲಿ ಕೃಷ್ಣನಿಗೆ ವಿಶೇಷ ಪೂಜೆ

ಬೆಂಗಳೂರು: ಇವತ್ತು ಶ್ರೀಕೃಷ್ಣ ಜನ್ಮಾಷ್ಟಮಿ. ಹೀಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹೆಚ್ ಆರ್ ಬಿ ಆರ್ ಲೇಔಟ್ ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಮಾಡಲಾಗ್ತಿದೆ. ಭಾರೀ ಕಟ್ಟುನಿಟ್ಟಿನ ನಡುವೆ ಮುಂಜಾನೆ 6.30ರಿಂದಲೇ ಕೃಷ್ಣನಿಗೆ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಆದ್ರೆ ಕೊರನಾ ಪಿಡುಗಿನಿಂದಾಗಿಈ ಬಾರಿ ಕೃಷ್ಣನ ಭಕ್ತರಿಗೆ ದೇವಸ್ಥಾನದಲ್ಲಿ ಬಂದು ಆರಾಧನೆ ಮಾಡಲು ಅವಕಾಶ ಇಲ್ಲ. ಈ ಬಾರಿ ಭಕ್ತರಿಗೆಲ್ಲಾ ಆನ್ ಲೈನ್ ನಲ್ಲೇ ಶ್ರೀ ಕೃಷ್ಣನ ನೋಡೋ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ಭಕ್ತರು […]

ಇಂದು ಕೃಷ್ಣಜನ್ಮಾಷ್ಟಮಿ, ಇಸ್ಕಾನ್‌ನಲ್ಲಿ ಕೃಷ್ಣನಿಗೆ ವಿಶೇಷ ಪೂಜೆ
Guru
Guru|

Updated on: Aug 11, 2020 | 8:45 AM

Share

ಬೆಂಗಳೂರು: ಇವತ್ತು ಶ್ರೀಕೃಷ್ಣ ಜನ್ಮಾಷ್ಟಮಿ. ಹೀಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹೆಚ್ ಆರ್ ಬಿ ಆರ್ ಲೇಔಟ್ ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಮಾಡಲಾಗ್ತಿದೆ.

ಭಾರೀ ಕಟ್ಟುನಿಟ್ಟಿನ ನಡುವೆ ಮುಂಜಾನೆ 6.30ರಿಂದಲೇ ಕೃಷ್ಣನಿಗೆ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಆದ್ರೆ ಕೊರನಾ ಪಿಡುಗಿನಿಂದಾಗಿಈ ಬಾರಿ ಕೃಷ್ಣನ ಭಕ್ತರಿಗೆ ದೇವಸ್ಥಾನದಲ್ಲಿ ಬಂದು ಆರಾಧನೆ ಮಾಡಲು ಅವಕಾಶ ಇಲ್ಲ.

ಈ ಬಾರಿ ಭಕ್ತರಿಗೆಲ್ಲಾ ಆನ್ ಲೈನ್ ನಲ್ಲೇ ಶ್ರೀ ಕೃಷ್ಣನ ನೋಡೋ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ಭಕ್ತರು ಆನ್‌ಲೈನ್‌ನಲ್ಲೇ ಕೃಷ್ಣನನ್ನು ನೋಡಿ ಕೈಮುಗಿಯಬೇಕಾಗಿದೆ. ಇಷ್ಟೇ ಅಲ್ಲ ಬಂದ ಕೆಲ ಭಕ್ತರಿಗೂ ಕೂಡಾ ಕೋವಿಡ್ ಹಿನ್ನೆಲೆಯಲ್ಲಿ ದೇವಾಲಯದೊಳಗೆ ಪ್ರವೇಶನೀಡಿಲ್ಲ.

Follow Us
Guru
Guru