ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ, ಇಸ್ಕಾನ್ ದೇಗುಲದಲ್ಲಿ ವಿಶೇಷ ಪೂಜೆ
ಬೆಂಗಳೂರು: ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಕೃಷ್ಣನ ಭಕ್ತರ ಮನೆ ಮನದಲ್ಲಿ ಕೃಷ್ಣನ ಜಪ ಜೋರಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಸ್ಕಾನ್ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಇಸ್ಕಾನ್ ದೇಗುಲದಲ್ಲಿ ಬೆಳಗ್ಗೆ 6.30ಕ್ಕೆ ರಾಧಾಕೃಷ್ಣ ನೌಕಾವಿಹಾರ ನಡೆದಿದೆ. ಬೆಳಗ್ಗೆ 7.45ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮಹಾ ಅಭಿಷೇಕ ನೇರವೇರುತ್ತೆ. ನಂತರ ಬೆಳಗ್ಗೆ 9.15ರ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಚನವಿರುತ್ತದೆ. ರಾತ್ರಿ 8 ಗಂಟೆಗೆ ಮತ್ತೊಮ್ಮೆ ಮಹಾಭಿಷೇಕ ನಡೆಯಲಿದೆ. ಇಂದು ರಾತ್ರಿ 10.30ರವರೆಗೆ ನಿರಂತರ ಕಾರ್ಯಕ್ರಮಗಳು […]

ಬೆಂಗಳೂರು: ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಕೃಷ್ಣನ ಭಕ್ತರ ಮನೆ ಮನದಲ್ಲಿ ಕೃಷ್ಣನ ಜಪ ಜೋರಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಸ್ಕಾನ್ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಇಸ್ಕಾನ್ ದೇಗುಲದಲ್ಲಿ ಬೆಳಗ್ಗೆ 6.30ಕ್ಕೆ ರಾಧಾಕೃಷ್ಣ ನೌಕಾವಿಹಾರ ನಡೆದಿದೆ. ಬೆಳಗ್ಗೆ 7.45ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮಹಾ ಅಭಿಷೇಕ ನೇರವೇರುತ್ತೆ. ನಂತರ ಬೆಳಗ್ಗೆ 9.15ರ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಚನವಿರುತ್ತದೆ. ರಾತ್ರಿ 8 ಗಂಟೆಗೆ ಮತ್ತೊಮ್ಮೆ ಮಹಾಭಿಷೇಕ ನಡೆಯಲಿದೆ.
ಇಂದು ರಾತ್ರಿ 10.30ರವರೆಗೆ ನಿರಂತರ ಕಾರ್ಯಕ್ರಮಗಳು ನಡೆಯುತ್ತವೆ, ಕೊವಿಡ್ ಹಿನ್ನೆಲೆಯಲ್ಲಿ ಇಸ್ಕಾನ್ ದೇಗುಲಕ್ಕೆ ಭಕ್ತರಿಗೆ ಪ್ರವೇಶವಿಲ್ಲ. ಆನ್‌ಲೈನ್ ಮೂಲಕ ಪೂಜಾ ಕಾರ್ಯಕ್ರಮ ವೀಕ್ಷಿಸಬಹುದು.





