ಸುಂದರ ಪತ್ನಿಯನ್ನ ಮುಟ್ಟದೇ, ಗಂಡನಿಗೆ ಸಲಿಂಗಕಾಮಿಗಳ ಸಹವಾಸದ ಆರೋಪ: ನ್ಯಾಯ ಕೋರಿ ಠಾಣೆ ಮೆಟ್ಟಿಲೇರಿದ ಪತ್ನಿ
ಮದುವೆಯಾಗಿ ಕೆಲವು ತಿಂಗಳೇ ಕಳೆದರೂ ಪವನ್ ಕುಮಾರ್ ಪತ್ನಿಯ ಜೊತೆ ಹಾಸಿಗೆ ಹಂಚಿಕೊಳ್ಳದೇ ಪತ್ನಿ ಹತ್ತಿರ ಹೋದರೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಇದರಿಂದ ಅನುಮಾನಗೊಂಡ ಆತನ ಪತ್ನಿ, ಆತನ ಪೋನ್‌ನನ್ನು ಪರಿಶೀಲಿಸಿದಾಗ...
ಆತ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾನಿಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕ (professor). ಕೈತುಂಬಾ ಸಂಬಳ, ಮನೆಯಲ್ಲಿ ಸುಂದರ ಹೆಂಡತಿ. ಪತ್ನಿಯನ್ನು ಮದುವೆಯಾಗಿ 6 ತಿಂಗಳೇ ಕಳೆದರೂ ಪತ್ನಿ ಜೊತೆ ಹಾಸಿಗೆ ಹಂಚಿಕೊಳ್ಳದೇ ಸಲಿಂಗಕಾಮಿಗಳ ಹಿಂದೆ ಹೋಗುತ್ತಿದ್ದನಂತೆ. ಇದರಿಂದ ರೋಸಿ ಹೋದ ಆತನ ಪತ್ನಿ ಗಂಡನ ಪೋನನ್ನು ಪರಿಶೀಲನೆ ನಡೆಸಿದರೆ ಬೆಚ್ಚಿಬೀಳುವ ಅಂಶಗಳು ಪತ್ತೆಯಾಗಿತ್ತು. ಕೊನೆಗೆ ನ್ಯಾಯ ಕೋರಿ ಪೊಲೀಸ್ ಠಾಣೆ (fir) ಮೆಟ್ಟಿಲು ಹತ್ತಿದ್ದಾರೆ. ಈತನ ಹೆಸರು ಪವನ್ ಕುಮಾರ್, ಇನ್ನೂ ಈಗ ತಾನೆ 35 ವರ್ಷ ವಯಸ್ಸು. ಆಂಧ್ರದ ಪುಟ್ಟಪರ್ತಿ ನಿವಾಸಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ-ದೊಡ್ಡಬಳ್ಳಾಪುರ ಮಧ್ಯದಲ್ಲಿರುವ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕ. ಸ್ಫುರದ್ರೂಪಿಯಂತಿರುವ ಪವನ್ ಕುಮಾರ್‌ಗೆ ಮದುವೆ ಮಾಡಲು ಮನೆಯಲ್ಲಿ ಮುಂದಾಗಿದ್ದರು. ಇನ್ನು ಚಿಕ್ಕಬಳ್ಳಾಪುರ (chikkaballapur) ಮೂಲದ ಯುವತಿಯನ್ನು ನೋಡಿ ಒಂದು ವರ್ಷದ ಹಿಂದೆ ಅದ್ಧೂರಿ ಮದುವೆ (marriage) ಮಾಡಲಾಗಿತ್ತು.
ಆದರೆ ಮದುವೆಯಾಗಿ ಕೆಲವು ತಿಂಗಳೇ ಕಳೆದರೂ ಪವನ್ ಕುಮಾರ್ ಪತ್ನಿಯ ಜೊತೆ ಹಾಸಿಗೆ ಹಂಚಿಕೊಳ್ಳದೇ ಪತ್ನಿ ಹತ್ತಿರ ಹೋದರೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಇದರಿಂದ ಅನುಮಾನಗೊಂಡ ಆತನ ಪತ್ನಿ, ಆತನ ಪೋನ್‌ನನ್ನು ಪರಿಶೀಲಿಸಿದರೆ ಅದರಲ್ಲಿ ಗಂಡನ ಸಲಿಂಗಕಾಮದ ಪೋಟೋ, ವೀಡಿಯೋ ಮತ್ತು ಅದರಲ್ಲಿ ಆಕೆಯ ಗಂಡನೇ ಇರುವುದು ಬಯಲಾಗಿತ್ತು.
ಇದರಿಂದ ದಿಗ್ಭ್ರಾಂತಳಾದ ಆತನ ಪತ್ನಿ, ತನ್ನ ಗಂಡನ ಸಹಾಯಕ ಪ್ರಾಧ್ಯಾಪಕನನ್ನು ಪ್ರಶ್ನಿಸಿದರೆ ಆಕೆಯ ಗಂಡ ಹಾಗೂ ಆಕೆಯ ಅತ್ತೆ ಧನಲಕ್ಷ್ಮಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ವರದಕ್ಷಿಣೆಗಾಗಿ ಪೀಡಿಸಿದ್ದಾರಂತೆ. ಒಂದು ಲಕ್ಷ ವರದಕ್ಷಿಣೆ ಕೊಟ್ಟು, ಬೇರೆ ಮನೆ ಮಾಡಿಕೊಟ್ಟರೂ ಪವನ್ ಕುಮಾರ್ ಸರಿಹೋಗದೇ.. ತನಗೆ ಸಂಬಂಧವಿರುವ ಹುಡುಗರನ್ನು ಮನೆಗೆ ಕರೆಯಿಸಿ ಚಕ್ಕಂದ ಆಡುತ್ತಿದ್ದನಂತೆ.
ಇದರಿಂದ ಬೇಸತ್ತ ಆತನ ಪತ್ನಿ ಈಗ ತವರು ಮನೆ ಸೇರಿದ್ದು. ತನಗೆ ನ್ಯಾಯ ಕೋರಿ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರಲ್ಲಿ ಐಪಿಸಿ ಸೆಕ್ಷನ್ 417, 419, 420, 498ಎ, 504ಎ, 506, 149 ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ದೂರು ದಾಖಲಿಸಿದ್ದಾರೆ.
ಒಳ್ಳೆಯ ಹುಡುಗ ಸಿಕ್ಕಿದ… ಮಗಳಿಗೆ 21 ವರ್ಷ ಆಯ್ತು… ಸಹಾಯಕ ಪ್ರಾಧ್ಯಾಪಕ ಅನ್ನೋ ಟೈಟಲ್ ಬೇರೆ.. ಎಂದು ಯುವತಿಯ ತಂದೆ-ತಾಯಿ, ಹಿಂದುಮುಂದು ನೋಡದೇ ಲಕ್ಷಾಂತರ ರೂಪಾಯಿ ವರದಕ್ಷಿಣೆ ನೀಡಿ, ಅದ್ದೂರಿ ಮದುವೆ ಮಾಡಿದ್ದರು. ಆದರೆ ಈಗ ಮದುವೆಯಾದವ ಸಲಿಂಗಕಾಮಿ ಆರೋಪ ಕೇಳಿ ಮಗಳ ಬಾಳು ಹೀಗಾಯ್ತಲ್ಲವೆಂದು ನೊಂದುಕೊಳ್ಳುತ್ತಿದ್ದಾರೆ. ಆದರೆ ಸಹಾಯಕ ಪ್ರಾಧ್ಯಾಪಕ ಎಲ್ಲಾ ಗೊತ್ತಿದ್ದೂ, ಯುವತಿಯ ಬಾಳನ್ನು ಹಾಳು ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)