ಶಿಡ್ಲಘಟ್ಟ: ಕಷ್ಟ ಪಟ್ಟು ರೇಷ್ಮೆ ಗೂಡು ಬೆಳೆಯುವ ರೈತರಿಗೆ ಯಾವಾಗಲೂ ಉತ್ತಮ ಬೆಲೆ ಸಿಗ್ತಿಲ್ಲ ಅಂತ ಹಿಂದೆ ಪ್ರತಿಭಟನೆ ಧರಣಿ ಮುಷ್ಕರ ಮಾಡ್ತಿದ್ರು, ಆದ್ರೆ ಈಗ 1 ಕೆ.ಜಿ. ರೇಷ್ಮೆ ಗೂಡಿನ ಬೆಲೆ ಸಾವಿರ ರೂಪಾಯಿ ಗಡಿ ದಾಟಿದೆ! ಇದ್ರಿಂದ ರೇಷ್ಮೆ ಬೆಳೆದ ರೈತರು ಪುಲ್ ಖುಷ್ ಆಗಿದ್ದು, ಎರಡೂ ಕೈಗಳಲ್ಲಿ ಜಣ ಜಣ ಕಾಂಚಾಣ ಎಣಿಸ್ತಿದ್ದಾರೆ (Silk Market, Sidlaghatta). ಈ ಕುರಿತು ಒಂದು ವರದಿ ಇದೆ ಓದಿ.
ಅತ್ತುತ್ತಮ ರೇಷ್ಮೆ ಬೆಳೆಗೆ ಖ್ಯಾತಿಯಾಗಿರೊ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಈಗ ರೇಷ್ಮೆ ಗೂಡಿನ ಧಾರಣೆ ಕಂಡು ಕನಸೋ ನನಸೋ ಅಂತಾ ಕೆಲಕಾಲ ಅವಕ್ಕಾಗುತ್ತಿದ್ದಾರೆ. ಇತಿಹಾಸದಲ್ಲಿ ಕಂಡು ಕೇಳರಿಯದ ದುಬಾರಿ ಬೆಲೆ ರೇಷ್ಮೆ ಗೂಡಿಗೆ ಬಂದಿದೆ. ಇನ್ನೂ ರೇಷ್ಮೆ ಗೂಡು ವಹಿವಾಟಿಗೆ ಖ್ಯಾತಿಯಾಗಿರೊ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸರಾಸರಿ ಕೆ.ಜಿ ರೇಷ್ಮೆ ಗೂಡಿಗೆ 850 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿ ವರೆಗೂ ಬೆಲೆ ಬಂದಿದೆ ಎನ್ನುತ್ತಾರೆ ನರಸಿಂಹಮೂರ್ತಿ, ಸಹಾಯಕ ನಿರ್ದೇಶಕ, ಸರ್ಕಾರಿ ರೇಷ್ಮೆ ಗೂಡು ಮಾರ್ಕೆಟ್, ಶಿಡ್ಲಘಟ್ಟ.
ಇನ್ನು ಶಿಡ್ಲಘಟ್ಟದಲ್ಲಿರುವ ಸರ್ಕಾರಿ ರೇಷ್ಮೆ ಗೂಡು ಮಾರ್ಕೆಟ್ ಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಆಂಧ್ರದಿಂದಲೂ ರೇಷ್ಮೆ ಗೂಡು ಮಾರಾಟಕ್ಕೆ ಬರುತ್ತೆ. ರೇಷ್ಮೆ ಗೂಡಿನಲ್ಲಿ ಹೈಬ್ರೀಡ್ ಮಿಶ್ರತಳಿ ಹಾಗೂ ದ್ವಿತಳಿಗಳಿವೆ. ಅದರಲ್ಲಿ ಮಿಶ್ರತಳಿಯ ಒಂದು ಕೆ.ಜಿ. ರೇಷ್ಮೆ ಗೂಡು 930 ರೂಪಾಯಿಗೆ ಮಾರಾಟವಾಗಿದೆ. ಇದ್ರಿಂದ ರೈತರು ರೇಷ್ಮೆ ಬೆಳೆದಿದ್ದು ಸಾರ್ಥಕವಾಯಿತು. ಯಾವಾಗಲೂ ಇದೆ ರೀತಿ ಉತ್ತಮ ಬೆಲೆ ಇದ್ರೆ ಇರೊ ಬರೊ ಜಮೀನಿನಲ್ಲಿ ರೇಷ್ಮೆ ಬೆಳೆಯುತ್ತೇವೆ, ಉತ್ತಮ ಧಾರಣೆಯಿಂದ ಸಂತೋಷವಾಗಿದೆ ಅನ್ನುತ್ತಿದ್ದಾರೆ.
ಕಳೆದ ವರ್ಷ ಸುರಿದ ಧಾರಾಕರ ಮಹಾ ಮಳೆಗೆ, ಜಿಲ್ಲೆಯ ಕೆಲವೆಡೆ ರೇಷ್ಮೆ ತೋಟಗಳು ಜಲಾವೃತವಾಗಿ ಬೆಳೆ ನಾಶವಾಗಿದೆ. ಇನ್ನೊಂದೆಡೆ ಚೀನಾ ರೇಷ್ಮೆ ಆಮದಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ ಕಾರಣ ಸ್ಥಳಿಯ ರೇಷ್ಮೆ ಬೆಳೆಗಾರರಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಇದೆಲ್ಲದರ ಪರಿಣಾಮ ನಿರೀಕ್ಷೆಯಷ್ಟು ರೇಷ್ಮೆ ಗೂಡು ದೊರೆಯದ ಕಾರಣ, ರೇಷ್ಮೆ ಉದ್ಯಮಿಗಳು ಕೇಳಿದಷ್ಟು ಹಣ ಕೊಟ್ಟು ರೇಷ್ಮೆ ಗೂಡು ಖರೀದಿ ಮಾಡ್ತಿದ್ದಾರೆ!
-ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ
ಇದನ್ನೂ ಓದಿ:
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ -ಕುಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ ಸಿಎಂ ಬೊಮ್ಮಾಯಿ, ಯೋಜನೆ ವಿವರ ಇಲ್ಲಿದೆ
ಇದನ್ನೂ ಓದಿ:
ಅಪ್ರಾಪ್ತ ವಯಸಿನ ಬಾಲಕಿ-ಯುವಕ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ