ಶಿಡ್ಲಘಟ್ಟ: ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯ, ವೃದ್ದನ ಜೊತೆ ಬೆಡ್‍ರೂಂ ದೃಶ್ಯದಲ್ಲಿ ಆರ್ಕೆಸ್ಟ್ರಾ ನಟಿಮಣಿಯರ ಫುಲ್ ರೊಮ್ಯಾನ್ಸ್!

Sidlaghatta Karaga: ಆದರೆ ಧಾರ್ಮಿಕ ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯಗಳಿಗೇನು ಕಡಿಮೆ ಇರಲಿಲ್ಲ. ಗಂಡ ಹೆಂಡತಿಯೇ ನಾಚಿ ನೀರಾಗುವ ಹಾಗೆ ಕರಗ ಉತ್ಸವದಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ 20 ವರ್ಷದ ಆರ್ಕೆಸ್ಟ್ರಾ ನಟಿಮಣಿಯರು 80 ವರ್ಷದ ಮುದುಕನ ಜೊತೆ ಬೆಡ್‍ರೂಂ ದೃಶ್ಯ ಸೃಷ್ಟಿಸಿ, ರೊಮ್ಯಾನ್ಸ್ ಮಾಡಿದ್ದು, ಪಡ್ಡೆಹೈಕಳಿಗೆ ರೋಮಾಂಚನ ತಂದಿತು... ಆದರೆ ದೇವ ಭಕ್ತರಿಗೆ ಅಸಹ್ಯ ಮೂಡಿಸಿತ್ತು ಸುಳ್ಳಲ್ಲ.

ಶಿಡ್ಲಘಟ್ಟ: ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯ, ವೃದ್ದನ ಜೊತೆ ಬೆಡ್‍ರೂಂ ದೃಶ್ಯದಲ್ಲಿ ಆರ್ಕೆಸ್ಟ್ರಾ ನಟಿಮಣಿಯರ ಫುಲ್ ರೊಮ್ಯಾನ್ಸ್!
ಶಿಡ್ಲಘಟ್ಟ: ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯ, ವೃದ್ದನ ಜೊತೆ ಬೆಡ್‍ರೂಂ ದೃಶ್ಯದಲ್ಲಿ ಆರ್ಕೆಸ್ಟ್ರಾ ನಟಿಮಣಿಯರ ಫುಲ್ ರೊಮ್ಯಾನ್ಸ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 05, 2022 | 7:15 PM

ಈಗ ಕೊರೊನಾ ಕಾಟ ಕಳೆದು ಎಲ್ಲೆಲ್ಲೂ ಜಾತ್ರೆ, ಉತ್ಸವ, ಸಭೆ, ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಕಳೆದ 3 ವರ್ಷಗಳಿಂದ ಇಲ್ಲಿಯ ಐತಿಹಾಸ ಪ್ರಸಿದ್ದ ಕರಗ ಉತ್ಸವ ಡಲ್ಲಾಗಿತ್ತು. ಈಗ ಕೊರೊನಾ ಮಾಯವಾದ ಕಾರಣ ಕರಗ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆದರೆ ಧಾರ್ಮಿಕ ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯಗಳಿಗೇನು ಕಡಿಮೆ ಇರಲಿಲ್ಲ. ಗಂಡ ಹೆಂಡತಿಯೇ ನಾಚಿ ನೀರಾಗುವ ಹಾಗೆ ಕರಗ ಉತ್ಸವದಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ 20 ವರ್ಷದ ಆರ್ಕೆಸ್ಟ್ರಾ ನಟಿಮಣಿಯರು 80 ವರ್ಷದ ಮುದುಕನ ಜೊತೆ ಬೆಡ್‍ರೂಂ ದೃಶ್ಯ ಸೃಷ್ಟಿಸಿ, ರೊಮ್ಯಾನ್ಸ್ ಮಾಡಿದ್ದು, ಪಡ್ಡೆಹೈಕಳಿಗೆ ರೋಮಾಂಚನ ತಂದಿತು… ಆದರೆ ದೇವ ಭಕ್ತರಿಗೆ ಅಸಹ್ಯ ಮೂಡಿಸಿತ್ತು ಸುಳ್ಳಲ್ಲ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ.

ಇವ ಹಣ್ಣು ಹಣ್ಣು ಮುದುಕ, ಎದ್ದರೆ ಕುಳಿತುಕೊಳ್ಳಲೂ ಆಗೊಲ್ಲ. ಕೂತರೆ…? ಎದ್ದೇಳಕ್ಕೂ ಆಗಲ್ಲ. ಆದರೆ ಪಕ್ಕದಲ್ಲಿ ಆ ಕಡೆ ಒಬ್ಬಳು ಈ ಕಡೆ ಒಬ್ಬಳು ಮೈತುಂಬಿಕೊಂಡಿರುವ ತರುಣಿಯರು, ಮುದುಕನನ್ನು ತಪ್ಪಿಕೊಂಡು ರೊಮ್ಯಾನ್ಸ್ ಮಾಡಿ ಮುತ್ತು ಕೊಡುತ್ತಿದ್ದರೆ… ಮೈಮನ ರೋಮಾಂಚನಗೊಂಡು ಸೆಟೆದು ನಿಂತಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂದೆ. ಹೌದು ಶಿಡ್ಲಘಟ್ಟ ನಗರದ ರೇಣುಕಾ ಯಲ್ಲಮ್ಮ ಹೂವಿನ ಕರಗೋತ್ಸವ ಪ್ರಯುಕ್ತ, ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅಭಿಮಾನಿ ಬಳಗ, ತುಮಕೂರು ಮೂಲದ ಅರುಣ್ ಈವೆಂಟ್ಸ್ ಎಂಬ ಆರ್ಕೆಸ್ಟ್ರಾವನ್ನು ಕರೆಸಿತ್ತು. ಆರ್ಕೆಸ್ಟ್ರಾದವರು ನೆರೆದಿದ್ದ ಜನಸ್ತೋಮದ ಮುಂದೆ ಮಾನ, ಮರ್ಯಾದೆ ಎಲ್ಲಾ ಬಿಟ್ಟು ಧಾರ್ಮಿಕ ಉತ್ಸವದಲ್ಲಿ ನಂಗನಾಚ್ ರೀತಿಯಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿದ್ದು, ಸಜ್ಜನರು ಸೈಲೆಂಟಾಗಿ ತಲೆತಗ್ಗಿಸುವಂತಾಗಿತ್ತು.

ದೇಗುಲ ಮುಂದೆ ವೃದ್ದನ ಜೊತೆ ಆರ್ಕೆಸ್ಟ್ರಾ ಯುವತಿಯರ ಫುಲ್ ರೊಮ್ಯಾನ್ಸ್

ಇನ್ನು ಕಾಂಗ್ರೆಸ್ ಮುಖಂಡರು ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನವಾಗುತ್ತಿದ್ದರೆ… ಇತ್ತ ಶಿಡ್ಲಘಟ್ಟದ ಮೋದಿ ಬ್ರಿಗೇಡ್ ಹಾಗೂ ಭಜರಂಗದಳ ಕಾರ್ಯಕರ್ತರು, ತಾವೇನು ಕಡಿಮೆಯಂತ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ, ಕಾವ್ಯ ಮೆಲೋಡಿಸ್‍ರವರನ್ನು ಕರೆಯಿಸಿ, ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಆರ್ಕೇಸ್ಟ್ರಾದಲ್ಲಿ ತೆಲುಗಿನ ರೊಮ್ಯಾನ್ಸ್ ಚಲನಚಿತ್ರ ಗೀತೆಗಳಿಗೆ ಹುಡುಗಿಯರಿಂದ ನೃತ್ಯ ಪ್ರದರ್ಶನ ಮಾಡಿಸಿದರು. ನಂತರ ರೇಣುಕಾ ಯಲ್ಲಮ್ಮ ಹೂವಿನ ಕರಗ, ಅದ್ದೂರಿಯಾಗಿ ನೃತ್ಯ ಮಾಡುವುದರ ಮೂಲಕ ಭಕ್ತಿಯ ಸಿಂಚನ ಮೂಡಿಸಿತು. 3 ವರ್ಷಗಳ ನಂತರ ಕೊರೊನಾ ಭೀತಿ ಮರೆತು ಭಕ್ತರು ಕೊರೋನ ಸಂಭ್ರಮಾಚರಣೆಯಲ್ಲಿ ತೇಲಾಡಿದರು.

ಒಟ್ಟಿನಲ್ಲಿ ಕೊರೊನಾ ಮಾರಿ ಮರೆಯಾಗಿ ಎಲ್ಲೆಡೆ ಸಂಭ್ರಮ, ಸಂತಸ, ಹಬ್ಬ, ಹರಿದಿನಗಳಲ್ಲಿ ಜನ ತೇಲಾಡುತ್ತಿದ್ದಾರೆ. ಇನ್ನು ತನ್ನದೇ ಐತಿಹಾಸಿಕ ಹಾಗೂ ಧಾರ್ಮಿಕ ಇತಿಹಾಸ ಪರಂಪರೆ ಹೊಂದಿರುವ ರೇಣುಕಾ ಯಲ್ಲಮ್ಮ ಹೂವಿನ ಕರಗ ಮಹೋತ್ಸವದಲ್ಲಿ ಕ್ಯಾಬರೆ ನೃತ್ಯಗಳನ್ನೇ ಮೀರಿಸುವ ಹಾಗೆ ಅಶ್ಲೀಲ ನೃತ್ಯಗಳನ್ನು ಪ್ರದರ್ಶಿಸಿರುವುದು ಎಷ್ಟು ಸರಿ ಎಂಬುದನ್ನು ಕಾರ್ಯಕ್ರಮ ಆಯೋಜಕರೇ ಹೇಳಬೇಕು. – ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

Published On - 5:46 pm, Tue, 5 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ